Hair growth tips: ನಿಮ್ಮ ಕೂದಲು ಕಪ್ಪಾಗಿ, ಉದ್ದಗೆ, ದಪ್ಪಗಿರಲು ನೀವೇನು ಮಾಡಬಹುದು?, ಶಾಂಪೂವನ್ನು ಬದಲಾಯಿಸುವುದರಿಂದ ಕೂದಲು ಚೆನ್ನಾಗಿರುತ್ತದೆ ಎಂದು ಭಾವಿಸಿದರೆ ಸಾಧ್ಯವೇ ಇಲ್ಲ ಬಿಡಿ. ಆದರೆ ಶಾಂಪೂವನ್ನು ಸರಿಯಾಗಿ ಬಳಸುವುದು ಹೇಗೆಂದು ನೀವು ತಿಳಿದುಕೊಳ್ಳಬೇಕು. 

ಳಿಗಾಲದಲ್ಲಿ ಕೂದಲು ಉದುರುವುದು ಮತ್ತು ತೆಳುವಾಗುವುದು (Stop hair fall in winter) ಸಾಮಾನ್ಯ ಸಮಸ್ಯೆಯಾಗಿದೆ. ನೀವೂ ಈ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ಈ ಲೇಖನ ನಿಮಗಾಗಿಯೇ. ಅಂದಹಾಗೆ ಈ ಸಮಸ್ಯೆಗಳು ಚಳಿಗಾಲದಲ್ಲಿ ಹೆಚ್ಚಾಗಿ ಕಂಡುಬಂದರೂ ಯಾವುದೇ ನಿರ್ದಿಷ್ಟ ಋತುವಿಗೆ ಮಾತ್ರ ಸೀಮಿತವಾಗಿಲ್ಲ. ಆದ್ದರಿಂದ ನಿಮ್ಮ ಕೂದಲು ಉದುರದಂತೆ ತಡೆಯಲು ಉತ್ತಮ ಮಾರ್ಗವೆಂದರೆ ನಿಮ್ಮ ಜೀವನಶೈಲಿಯತ್ತ ಗಮನ ಹರಿಸುವುದು. ಇನ್ನು ಸರಳವಾಗಿ ಹೇಳುವುದಾದರೆ ಸರಿಯಾದ ಸಮಯದಲ್ಲಿ ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಜೊತೆಗೆ ಸರಿಯಾದ ನಿದ್ರೆ ಮತ್ತು ದೈಹಿಕ ಚಟುವಟಿಕೆ ಸೇರಿವೆ. ನೀವು ಸಹ ನಿಮ್ಮ ಕೂದಲಿಗೆ ಹಾನಿಯಾದಾಗ ಈ ಸಲಹೆ ಪಾಲಿಸುವುದರಿಂದ ಅತ್ಯುತ್ತಮ ಫಲಿತಾಂಶ ಪಡೆಯಬಹುದು. ಆದ್ದರಿಂದ ನಿಮ್ಮ ಕೂದಲು ಉದುರುತ್ತಿದ್ದರೆ ಮತ್ತು ತೆಳುವಾಗುತ್ತಿದ್ದರೆ ನೀವೇನು ಮಾಡಬಹುದು?, ನೋಡೋಣ ಬನ್ನಿ..

ಶಾಂಪೂ ಬದಲಾಯಿಸ್ತೀರಾ?

ಕೂದಲು ಉದುರಿದಾಗ ಎಲ್ಲರೂ ಮಾಡುವ ಮೊದಲ ಕೆಲಸವೆಂದರೆ ಶಾಂಪೂವನ್ನು ಬದಲಾಯಿಸುವುದು (The Importance of Changing Your Shampoo). ಅದಕ್ಕೂ ಕಾರಣವಿದೆ. ಶಾಂಪೂವಿನಲ್ಲಿರುವ ರಾಸಾಯನಿಕಗಳು ಕೂದಲಿಗೆ ಹಾನಿ ಮಾಡುತ್ತವೆ. ಶಾಂಪೂ ಬದಲಾಯಿಸುವುದು ಸರಿಯಾದ ಕೆಲಸ ಸರಿ. ಆದರೆ ಇದು ಯಾವುದೇ ಗಮನಾರ್ಹ ಪ್ರಯೋಜನವನ್ನು ನೀಡುವುದಿಲ್ಲ. ಹೊಸ ಶಾಂಪೂ ಸರಿಯಾಗಿ ಕೆಲಸ ಮಾಡದಿದ್ದರೆ ಕೊನೆಗೆ ನೀವು ಅದನ್ನು ಬದಲಾಯಿಸಲು ಪ್ರಯತ್ನಿಸಬಹುದು.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಹಿಂದಿನ ಕಾಲದಲ್ಲಿ ಶಾಂಪೂಗಳು ಲಭ್ಯವಿಲ್ಲದಿದ್ದಾಗ ಕೂದಲನ್ನು ತೊಳೆಯಲು ಸೋಪ್ ನಟ್ (ಅಂಟುವಾಳ ಕಾಯಿ) ಮತ್ತು ಶಿಕಾಕಾಯಿಯಂತಹ ಪದಾರ್ಥಗಳನ್ನು ಬಳಸಲಾಗುತ್ತಿತ್ತು. ಈಗ ನಮ್ಮ ಜೀವನವನ್ನು ಸುಲಭಗೊಳಿಸಲು ಶಾಂಪೂಗಳು ಲಭ್ಯವಿದೆ. ಆದರೆ ಅವುಗಳನ್ನು ನೇರವಾಗಿ ಬಳಸುವುದರಿಂದ ಕೂದಲಿಗೆ ಹಾನಿಯಾಗಬಹುದು . ಆದ್ದರಿಂದ ಶಾಂಪೂವನ್ನು ಹೇಗೆ ಬಳಸಬೇಕೆಂದು ನೋಡೋಣ..

ಹೆಲ್ತ್‌ ಕೋಚ್ ಶಿವಾಂಗಿ ದೇಸಾಯಿ ಸೂಚಿಸಿದ ಪರಿಹಾರ

ಶಾಂಪೂವನ್ನು ನೇರವಾಗಿ ಬಳಸುವುದರಿಂದ ನಿಮ್ಮ ಕೂದಲಿಗೆ ಹಾನಿಯಾಗಬಹುದು . ಆದ್ದರಿಂದ ಹೆಲ್ತ್‌ ಕೋಚ್ ಶಿವಾಂಗಿ ದೇಸಾಯಿ (Shivangi Desai) ಸೂಚಿಸಿದ ಈ ಪರಿಹಾರವನ್ನು ನೀವು ಟ್ರೈ ಮಾಡಿ. ಪರಿಹಾರಕ್ಕಾಗಿ ಕೆಲವು ನೈಸರ್ಗಿಕ ಪದಾರ್ಥಗಳನ್ನು ಶಾಂಪೂ ಜೊತೆಗೆ ಮಿಕ್ಸ್ ಮಾಡಿದರೆ ಸಾಕು. ಈ ವಿಧಾನವು ಮೊದಲಿಗೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದರೆ ನೀವು ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಿಟ್ಟುಕೊಂಡರೆ ಸಮಯವನ್ನು ವ್ಯರ್ಥ ಮಾಡದೆ 2 ಅಥವಾ 3 ವಾರಗಳವರೆಗೆ ಇದನ್ನು ಬಳಸಬಹುದು. ಬನ್ನಿ, ಇದನ್ನು ಮಾಡುವುದು ಹೇಗೆಂದು ತಿಳಿಯೋಣ..

ಬೇಕಾಗುವ ಪದಾರ್ಥಗಳೇನು?
2 ಚಮಚ ಟೀ ಪೌಡರ್
ನಿಮ್ಮ ನೆಚ್ಚಿನ ಶಾಂಪೂ
1 ಚಮಚ ಮೆಂತ್ಯ ಬೀಜಗಳು
10 ರಿಂದ 15 ಕರಿಬೇವು ಎಲೆಗಳು
1 ಗ್ಲಾಸ್ ನೀರು

ತಯಾರಿಸುವ ವಿಧಾನ
ಮೊದಲಿಗೆ ಟೀಪುಡಿಗೆ ಶಾಂಪೂವನ್ನು ಬೆರೆಸಿ ಮಿಶ್ರಣ ಮಾಡಿ. ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ ಈ ಮಿಶ್ರಣವನ್ನು ಸೇರಿಸಿ. ನಂತರ ಮೆಂತ್ಯ ಬೀಜಗಳು ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ. ಈ ನೀರನ್ನು ಸೋಸಿ ವಾರಕ್ಕೆ ಎರಡು ಬಾರಿ ನಿಮ್ಮ ಕೂದಲನ್ನು ತೊಳೆಯಲು ಬಳಸಿ.

ಏನೆಲ್ಲಾ ಲಾಭ?

ಕೂದಲು ಉದುರುವುದು ನಿಲ್ಲುತ್ತದೆ.
ಕೂದಲು ಬೇರುಗಳಿಂದ ಬಲಗೊಳ್ಳುತ್ತದೆ.
ಕೂದಲು 2-3 ಪಟ್ಟು ವೇಗವಾಗಿ ಬೆಳೆಯುತ್ತದೆ.
ನೀವು ಈ ಪರಿಹಾರವನ್ನು 4-5 ವಾರಗಳವರೆಗೆ ನಿರಂತರವಾಗಿ ಬಳಸಿದರೆ ಎಲ್ಲರೂ ನಿಮ್ಮನ್ನು ಉದ್ದ, ಕಪ್ಪು ಮತ್ತು ದಪ್ಪ ಕೂದಲಿನ ರಹಸ್ಯವನ್ನು ಖಂಡಿತ ಕೇಳುತ್ತಾರೆ. 

ಇಲ್ಲಿದೆ ನೋಡಿ ವಿಡಿಯೋ 

View post on Instagram