How long to store cooked food in fridge Kannada: ಫ್ರಿಡ್ಜ್ನಲ್ಲಿ ಆಹಾರ ಎಷ್ಟು ದಿನ ತಾಜಾ ಇರುತ್ತೆ? ಅನ್ನ, ಚಪಾತಿ, ತರಕಾರಿಗಳನ್ನು ಎಷ್ಟು ಕಾಲ ಇಡಬಹುದು? ಆರೋಗ್ಯ ಹಾಳಾಗದಂತೆ ಆಹಾರ ಸಂಗ್ರಹಿಸಲು ಇಲ್ಲಿವೆ ಉಪಯುಕ್ತ ಟಿಪ್ಸ್ಗಳು.
ಇಂದಿನ ಕಾಲದಲ್ಲಿ ಫ್ರಿಡ್ಜ್ ಪ್ರತಿ ಮನೆಯ ಅವಶ್ಯಕ ವಸ್ತುವಾಗಿದೆ. ಸಮಯ ಉಳಿಸಲು ಜನರು ಆಹಾರವನ್ನು ಮೊದಲೇ ತಯಾರಿಸಿ ಇಡುತ್ತಾರೆ ಅಥವಾ ಉಳಿದ ಆಹಾರವನ್ನು ಫ್ರಿಡ್ಜ್ನಲ್ಲಿ ಎತ್ತಿಡುತ್ತಾರೆ. ಫ್ರಿಡ್ಜ್ ಆಹಾರವನ್ನು ದೀರ್ಘಕಾಲದವರೆಗೆ ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ ನಿಜ, ಆದರೆ ಇದರರ್ಥ ಪ್ರತಿಯೊಂದು ವಸ್ತುವೂ ಫ್ರಿಡ್ಜ್ನಲ್ಲಿ ಯಾವಾಗಲೂ ತಾಜಾವಾಗಿರುತ್ತದೆ ಎಂದಲ್ಲ. ವಾಸ್ತವವಾಗಿ, ಪ್ರತಿ ಆಹಾರಕ್ಕೂ ಒಂದು ನಿರ್ದಿಷ್ಟ ಸಮಯದ ಮಿತಿ ಇರುತ್ತದೆ. ಆ ಮಿತಿ ಮೀರಿದ ನಂತರ ಅದನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ. ಹೀಗಾಗಿ ಫ್ರಿಡ್ಜ್ನಲ್ಲಿಟ್ಟ ಯಾವ ಆಹಾರ ಎಷ್ಟು ದಿನಗಳವರೆಗೆ ಸುರಕ್ಷಿತವಾಗಿರುತ್ತದೆ ಎಂದು ತಿಳಿಯುವುದು ಬಹಳ ಮುಖ್ಯ.
ಬೇಯಿಸಿದ ಆಹಾರ ಮತ್ತು ಡೈರಿ ಉತ್ಪನ್ನಗಳು
ಬೇಯಿಸಿದ ಆಹಾರ: ಮನೆಯಲ್ಲಿ ತಯಾರಿಸಿದ ಬೇಯಿಸಿದ ಆಹಾರವು ಸಾಮಾನ್ಯವಾಗಿ ಫ್ರಿಡ್ಜ್ನಲ್ಲಿ 2 ರಿಂದ 3 ದಿನಗಳವರೆಗೆ ಮಾತ್ರ ಸುರಕ್ಷಿತವಾಗಿರುತ್ತದೆ. ಅದಾದ ನಂತರ ಅದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುವ ಅಪಾಯ ಹೆಚ್ಚಾಗುತ್ತದೆ.
ಹಾಲು:ಕುದಿಸಿದ ಹಾಲನ್ನು 2 ರಿಂದ 3 ದಿನಗಳವರೆಗೆ ಬಳಸುವುದು ಉತ್ತಮ. ಪ್ಯಾಕೆಟ್ ಹಾಲನ್ನು ಒಮ್ಮೆ ತೆರೆದ ನಂತರ 2 ದಿನಗಳೊಳಗೆ ಖಾಲಿ ಮಾಡಬೇಕು.
ಮೊಸರು:ತಾಜಾ ಮೊಸರು ಫ್ರಿಡ್ಜ್ನಲ್ಲಿ ನಲ್ಲಿ 4 ರಿಂದ 5 ದಿನಗಳವರೆಗೆ ಚೆನ್ನಾಗಿರುತ್ತದೆ. ಆದರೆ ಅದರಲ್ಲಿ ಅತಿಯಾದ ಹುಳಿ ಅಥವಾ ವಿಚಿತ್ರ ವಾಸನೆ ಬರಲಾರಂಭಿಸಿದರೆ ಅದನ್ನು ಬಳಸಬಾರದು.
ತರಕಾರಿ ಮತ್ತು ಹಣ್ಣುಗಳು
ತರಕಾರಿಗಳು: ಹಸಿರು ಎಲೆಗಳ ತರಕಾರಿಗಳು 3 ರಿಂದ 4 ದಿನಗಳವರೆಗೆ ಫ್ರಿಡ್ಜ್ನಲ್ಲಿ ನಲ್ಲಿ ಸುರಕ್ಷಿತವಾಗಿರುತ್ತವೆ. ಆದರೆ ಕ್ಯಾರೆಟ್, ಬೀನ್ಸ್ ಮತ್ತು ಹೂಕೋಸುಗಳಂತಹ ತರಕಾರಿಗಳು 5 ರಿಂದ 7 ದಿನಗಳವರೆಗೆ ಬಾಳಿಕೆ ಬರುತ್ತವೆ.
ಹಣ್ಣುಗಳು: ಸೇಬು ಮತ್ತು ಮರಸೇಬು (Pear) 1 ರಿಂದ 2 ವಾರಗಳವರೆಗೆ ಇಡಬಹುದು. ಆದರೆ ದ್ರಾಕ್ಷಿ ಮತ್ತು ಸ್ಟ್ರಾಬೆರಿಯಂತಹ ಹಣ್ಣುಗಳು 3 ರಿಂದ 5 ದಿನಗಳಲ್ಲಿ ಹಾಳಾಗಬಹುದು.
ಕತ್ತರಿಸಿದ ಹಣ್ಣುಗಳು: ಕತ್ತರಿಸಿದ ಹಣ್ಣುಗಳನ್ನು ಹೆಚ್ಚು ಕಾಲ ಫ್ರಿಡ್ಜ್ನಲ್ಲಿ ಇಡುವುದು ಸರಿಯಲ್ಲ. ಇವುಗಳನ್ನು 24 ಗಂಟೆಗಳ ಒಳಗೆ ಸೇವಿಸಬೇಕು, ಇಲ್ಲದಿದ್ದರೆ ಅವು ಕಲುಷಿತಗೊಳ್ಳಬಹುದು.
ಮೊಟ್ಟೆ, ಮಾಂಸ ಮತ್ತು ಬ್ರೆಡ್ ಸಂಗ್ರಹಣೆ ಮಿತಿ
ಮೊಟ್ಟೆ: ಹಸಿ ಮೊಟ್ಟೆಗಳು 7 ರಿಂದ 10 ದಿನಗಳವರೆಗೆ ಸುರಕ್ಷಿತವಾಗಿರುತ್ತವೆ. ಆದರೆ ಬೇಯಿಸಿದ ಮೊಟ್ಟೆಗಳನ್ನು 2 ರಿಂದ 3 ದಿನಗಳೊಳಗೆ ತಿನ್ನಬೇಕು.
ಮಾಂಸ: ಹಸಿ ಚಿಕನ್ ಅಥವಾ ಮಾಂಸವನ್ನು 1 ರಿಂದ 2 ದಿನ ಮತ್ತು ಮೀನನ್ನು 24 ಗಂಟೆಗಳಿಗಿಂತ ಹೆಚ್ಚು ಕಾಲ ಫ್ರಿಡ್ಜ್ನಲ್ಲಿ ಇಡಬಾರದು.
ಬ್ರೆಡ್: ಬ್ರೆಡ್ ಅನ್ನು 5 ರಿಂದ 7 ದಿನಗಳವರೆಗೆ ಇಡಬಹುದು. ಆದರೆ ಹೆಚ್ಚು ದಿನ ಇಟ್ಟರೆ ಅದರ ರುಚಿ ಮತ್ತು ಮೃದುತ್ವ ಕಡಿಮೆಯಾಗುತ್ತದೆ.
ಅನ್ನ, ರೊಟ್ಟಿ ಮತ್ತು ಬೇಳೆ
ಅನ್ನ: ಫ್ರಿಡ್ಜ್ನಲ್ಲಿಟ್ಟ ಅನ್ನವನ್ನು 1 ರಿಂದ 2 ದಿನಗಳ ಒಳಗೆ ಸೇವಿಸಬೇಕು.
ಚಪಾತಿ: ಚಪಾತಿಯನ್ನು ತಯಾರಿಸಿದ 12 ರಿಂದ 14 ಗಂಟೆಗಳ ಒಳಗೆ ಬಳಸುವುದು ಉತ್ತಮ. ಅದಕ್ಕಿಂತ ಹೆಚ್ಚು ಕಾಲ ಇಟ್ಟರೆ ಅದರ ಪೌಷ್ಟಿಕಾಂಶ ಕಡಿಮೆಯಾಗುತ್ತದೆ.
ಬೇಳೆ/ಸಾಂಬಾರ್: ಬೇಳೆಯಿಂದ ಮಾಡಿದ ಪದಾರ್ಥಗಳನ್ನು 2 ದಿನಗಳ ಒಳಗೆ ಖಾಲಿ ಮಾಡಬೇಕು. ಇಲ್ಲದಿದ್ದರೆ ಇವು ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳನ್ನು ಉಂಟುಮಾಡಬಹುದು.
ಫ್ರಿಡ್ಜ್ನಲ್ಲಿ ಆಹಾರ ಇಡುವಾಗ ಈ ತಪ್ಪುಗಳನ್ನು ಮಾಡಬೇಡಿ
*ಬಿಸಿ ಆಹಾರವನ್ನು ಎಂದಿಗೂ ನೇರವಾಗಿ ಫ್ರಿಡ್ಜ್ನಲ್ಲಿ ಇಡಬೇಡಿ.
*ಹಸಿ ಆಹಾರ (Raw food) ಮತ್ತು ಬೇಯಿಸಿದ ಆಹಾರವನ್ನು ಪ್ರತ್ಯೇಕವಾಗಿ ಇಡಿ.
*ಆಹಾರವನ್ನು ಸಂಗ್ರಹಿಸಲು ಯಾವಾಗಲೂ ಗಾಳಿಯಾಡದ ಡಬ್ಬಗಳನ್ನು (Air tight containers) ಬಳಸಿ.
*ಫ್ರಿಡ್ಜ್ನ ತಾಪಮಾನವನ್ನು 3 ರಿಂದ 4 ಡಿಗ್ರಿ ಸೆಲ್ಸಿಯಸ್ ನಡುವೆ ಇರಿಸಿ.
*ಆಹಾರದಲ್ಲಿ ಕೆಟ್ಟ ವಾಸನೆ, ಬೂಷ್ಟು ಅಥವಾ ಬಣ್ಣ ಬದಲಾಗಿರುವುದು ಕಂಡುಬಂದಲ್ಲಿ ತಕ್ಷಣ ಅದನ್ನು ಎಸೆದುಬಿಡಿ.


