ಟೇಸ್ಟ್ ಅಟ್ಲಾಸ್ ವಿಶ್ವದ 100 ದಿ ಬೆಸ್ಟ್ ಸ್ವೀಟ್ ಹೆಸರನ್ನು ಬಿಡುಗಡೆ ಮಾಡಿದೆ. ಅದ್ರಲ್ಲಿ ಭಾರತದ ಎರಡು ಖಾದ್ಯ ಸೇರಿದೆ. ಅಲ್ದೆ ಕುಲ್ಫಿಯನ್ನು ಬೆಂಗಳೂರಿನಲ್ಲಿ ಎಲ್ಲಿ ತಿಂದ್ರೆ ಬೆಸ್ಟ್ ಎಂಬ ಮಾಹಿತಿಯನ್ನೂ ಟೇಸ್ಟ್ ಅಟ್ಲಾಸ್ ನೀಡಿದೆ.
ಸ್ವೀಟ್ ಯಾರಿಗೆ ಇಷ್ಟವಾಗೋದಿಲ್ಲ. ಊಟವಾದ್ಮೇಲೆ ಸಿಹಿ ತಿನ್ನೋದ್ರ ಆನಂದವೇ ಬೇರೆ. ಸಿಹಿ ಖಾದ್ಯಗಳನ್ನು ಮಾಡೋದ್ರಲ್ಲಿ ಭಾರತ ಮುಂದಿದೆ. ಭಾರತದ ಒಂದೊಂದು ಭಾಗದಲ್ಲೂ ನಾನಾ ವಿಧದದ ಸ್ವೀಟ್ ಪ್ರಸಿದ್ಧಿ ಪಡೆದಿದೆ. ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಭಾರತೀಯ ಸಿಹಿಯನ್ನು ಇಷ್ಟಪಡುವ ಜನರು ಸಾಕಷ್ಟು ಮಂದಿ. ಈಗ ಭಾರತದ ಎರಡು ಸಿಹಿ ತಿಂಡಿಗಳು ಪ್ರಪಂಚದ ಜನರ ಗಮನ ಸೆಳೆದಿದೆ. ಜನಪ್ರಿಯ ಆಹಾರ ಮತ್ತು ಪ್ರಯಾಣ ಮಾರ್ಗದರ್ಶಿ ಟೇಸ್ಟ್ಅಟ್ಲಾಸ್ ವಿಶ್ವದ 100 ಅತ್ಯುತ್ತಮ ಸಿಹಿತಿಂಡಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದ್ರಲ್ಲಿ ಭಾರತದ ಎರಡು ಸಿಹಿ ತಿಂಡಿ ಸ್ಥಾನ ಪಡೆದಿದೆ.
ಟೇಸ್ಟ್ ಅಟ್ಲಾಸ್ ಪಟ್ಟಿಯಲ್ಲಿ ಕುಲ್ಫಿ
ಬೇಸಿಗೆ ಬರ್ತಿದ್ದಂತೆ ಕುಲ್ಫಿಗೆ ಬೇಡಿಕೆ ಹೆಚ್ಚಾಗುತ್ತೆ. ಚಳಿಗಾಲದಲ್ಲೂ ಚಳಿ ಎನ್ನುತ್ಲೇ ಜನ ಕುಲ್ಫಿ ಸವಿ ಸವಿಯುತ್ತಾರೆ. ಟೇಸ್ಟ್ ಅಟ್ಲಾಸ್ ಪಟ್ಟಿಯಲ್ಲಿ ಈ ಕುಲ್ಫಿ ಸ್ಥಾನ ಪಡೆದಿದೆ. 100ರಲ್ಲಿ ಕುಲ್ಫಿಗೆ 49ನೇ ಸ್ಥಾನ ಸಿಕ್ಕಿದೆ. ನಿಧಾನವಾಗಿ ಬೇಯಿಸಿದ ಹಾಲಿನಿಂದ ತಯಾರಿಸಿದ ಸಾಂಪ್ರದಾಯಿಕ ಐಸ್ ಕ್ರೀಮ್ ಇದು. ಇದನ್ನು ದೀರ್ಘಕಾಲ ಬೇಯಿಸೋದ್ರಿಂದ ಇದ್ರ ಪ್ರಮಾಣ ಕಡಿಮೆ ಆಗುತ್ತದೆ. ಆದ್ರೆ ಸುವಾಸನೆ ಗಮನ ಸೆಳೆಯುತ್ತದೆ. ಈ ಐಸ್ ಕ್ರೀಂನ ವಿಶೇಷತೆಯು ಅದರ ವಿಶಿಷ್ಟ ಕೋನ್ ಆಕಾರವಾಗಿದೆ. ಇದನ್ನು ಸಾಂಪ್ರದಾಯಿಕ, ವಿಶೇಷ ಅಚ್ಚು ಮತ್ತು ಬಿಗಿಯಾದ ಮುಚ್ಚಳವನ್ನು ಬಳಸಿ ತಯಾರಿಸಲಾಗುತ್ತದೆ ಎಂದು ಟೇಸ್ಟ್ ಅಟ್ಲಾಸ್ ಕುಲ್ಫಿಯ ಬಗ್ಗೆ ವಿವರ ನೀಡಿದೆ.
ಔಷಧವಾಗಿ ಆಹಾರ: ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಬಗ್ಗೆ ನೀವು ಈ ವಿಷಯ ಅಗತ್ಯವಾಗಿ ತಿಳ್ಕೊಳ್ಳಲೇಬೇಕು!
ಪಟ್ಟಿಯಲ್ಲಿ 60ನೇ ಸ್ಥಾನ ಪಡೆದ ಫಿರ್ನಿ
ಟೇಸ್ಟ್ ಅಟ್ಲಾಸ್ ಅತ್ಯುತ್ತಮ 100 ಸಿಹಿ ತಿಂಡಿಗಳ ಪಟ್ಟಿಯಲ್ಲಿ ಫಿರ್ನಿ 60ನೇ ಸ್ಥಾನವನ್ನು ಪಡೆದಿದೆ. ಫಿರ್ನಿ, ಮಿಕ್ಸಿ ಮಾಡಿದ ಅನ್ನ ಹಾಗೂ ಹಾಲಿನಲ್ಲಿ ತಯಾರಿಸುವ ಸಿಹಿ ಖಾದ್ಯವಾಗಿದೆ. ಬಾದಾಮಿ, ಕೇಸರಿ ಮತ್ತು ಏಲಕ್ಕಿಯೊಂದಿಗೆ ಇದನ್ನು ತಯಾರಿಸಲಾಗುತ್ತದೆ. ಬಗೆ ಬಗೆಯ ಫ್ಲೇವರ್ ಗಳಲ್ಲಿ ಇದು ಲಭ್ಯವಿದೆ. ಉತ್ತರ ಭಾರತದ ಜನಪ್ರಿಯ ಸಿಹಿ ಖಾದ್ಯಗಳಲ್ಲಿ ಫಿರ್ನಿ ಒಂದು. ದೀಪಾವಳಿ ಮತ್ತು ಕರ್ವಾ ಚೌತ್ನಂತಹ ಹಬ್ಬಗಳಲ್ಲಿ ತಯಾರಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಶಿಕೋರಾ ಎಂಬ ಸಣ್ಣ ಮಣ್ಣಿನ ಬಟ್ಟಲಿನಲ್ಲಿ ಇದನ್ನು ಸರ್ವ್ ಮಾಡಲಾಗುತ್ತದೆ. ಫಿರ್ನಿಯನ್ನು ತಣ್ಣಗಾದ್ಮೇಲೆ ತಿನ್ನಬೇಕು.
ಸಿಹಿ ಖಾದ್ಯಕ್ಕೆ ಯಾವ ಪ್ರದೇಶ ಬೆಸ್ಟ್
ಟೇಸ್ಟ್ ಅಟ್ಲಾಸ್, ಈ ಸಿಹಿ ತಿಂಡಿಗಳನ್ನು ಅತ್ಯುತ್ತಮ ಸ್ವೀಟ್ ಪಟ್ಟಿಯಲ್ಲಿ ಸೇರಿಸಿದ್ದಲ್ಲದೆ, ಅದನ್ನು ಯಾವ ಪ್ರದೇಶದಲ್ಲಿ ತಿಂದ್ರೆ ರುಚಿ ಹೆಚ್ಚು ಎಂಬ ಮಾಹಿತಿಯನ್ನೂ ನೀಡಿದೆ. ಟೇಸ್ಟ್ ಅಟ್ಲಾಸ್ ಪ್ರಕಾರ, ಕುಲ್ಫಿಯನ್ನು ಮುಂಬೈನ ಪೇಶಾವರಿ, ಬೆಂಗಳೂರಿನ ಬಾರ್ಬೆಕ್ಯೂ ನೇಷನ್ ಮತ್ತು ಹೈದರಾಬಾದ್ನ ಗೋಕುಲ್ ಚಾಟ್ ನಲ್ಲಿ ತಿನ್ನುವಂತೆ ಸೂಚಿಸಿದೆ. ಇನ್ನು ಅಮೃತಸರದ ಕೇಸರ್ ದಾ ಧಾಬಾ ಮತ್ತು ನವದೆಹಲಿಯ ಬುಖಾರಾ ಮತ್ತು ಕರೀಮ್ಗಳಲ್ಲಿ ಅತ್ಯುತ್ತಮ ಫಿರ್ನಿ ಸಿಗುತ್ತದೆ.
ದೇಶದ ವಿವಿಧ ರಾಜ್ಯಗಳ Popular Vegetarian Dishes, ನೀವು ಟ್ರೈ ಮಾಡಲೇಬೇಕು
ಟರ್ಕಿಯ ಅಂಟಕ್ಯಾ ಕುನೆಫೆಸಿ ವಿಶ್ವದ ಅತ್ಯುತ್ತಮ ಸಿಹಿತಿಂಡಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಸಾಂಪ್ರದಾಯಿಕ ಕುನಾಫಾ ಪ್ರಾಚೀನ ಟರ್ಕಿಶ್ ನಗರವಾದ ಅಂಟಕ್ಯಾದಿಂದ ಬಂದಿದೆ. ಟೇಸ್ಟ್ ಅಟ್ಲಾಸ್ ಈ ಹಿಂದೆ ವಿಶ್ವದ 50 ಅತ್ಯುತ್ತಮ ಉಪಹಾರ ಆಯ್ಕೆಗಳಲ್ಲಿ ಭಾರತದ ಆಹಾರಕ್ಕೆ ಮೂರು ಸ್ಥಾನ ನೀಡಿತ್ತು. ಮಹಾರಾಷ್ಟ್ರದ ಮಿಸಲ್ ಪಾವ್ 18 ನೇ ಸ್ಥಾನದಲ್ಲಿದ್ರೆ ಪರಾಠ 23 ನೇ ಸ್ಥಾನದಲ್ಲಿತ್ತು ಹಾಗೂ ದೆಹಲಿಯ ಚೋಲೆ ಭತುರೆ 32 ನೇ ಸ್ಥಾನ ಪಡೆದಿತ್ತು.


