ಅನಿಲ್ ಅಂಬಾನಿಗೆ ಬಹುದೊಡ್ಡ ಗೆಲುವು; ಜೇಬು ಸೇರಲಿದೆ 1169 ಕೋಟಿ, ಕೊಡ್ತಿರೋರು ಯಾರು?
ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್‌ನ ಅಂಗಸಂಸ್ಥೆ ಮುಂಬೈ ಮೆಟ್ರೋ ಒನ್ ಪ್ರೈವೇಟ್ ಲಿಮಿಟೆಡ್ ಪರವಾಗಿ ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ. ಎಂಎಂಒಪಿಎಲ್‌ಗೆ 1,119 ಕೋಟಿ ರೂಪಾಯಿ ಪಾವತಿಸಬೇಕಿದೆ.

ಭಾರತದ ಪ್ರಮುಖ ಉದ್ಯಮಿ ಅನಿಲ್ ಅಂಬಾನಿ ಬಹುದೊಡ್ಡ ಗೆಲುವು ಸಿಕ್ಕಿದೆ. ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್‌ನ ಅಂಗಸಂಸ್ಥೆ ಕಂಪನಿ ಮುಂಬೈ ಮೆಟ್ರೋ ಒನ್ ಪ್ರೈವೇಟ್ ಲಿಮಿಟೆಡ್ ಪರವಾಗಿ ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ. ಈ ತೀರ್ಪಿನಿಂದಾಗಿ ಅನಿಲ್ ಅಂಬಾನಿ ಜೇಬಿಗೆ ಬರೋಬ್ಬರಿ 1,119 ಕೋಟಿ ರೂಪಾಯಿ ಸೇರಲಿದೆ.
ತೀರ್ಪು ಅನಿಲ್ ಅಂಬಾನಿ ಪರವಾಗಿ ಬಂದಿರೋದರಿಂದ ಮೆಟ್ರೋಪಾಲಿಟನ್ ಅಭಿವೃದ್ಧಿ ಪ್ರಾಧಿಕಾರವನ್ನು ಎಂಎಂಒಪಿಎಲ್ 1,119 ಕೋಟಿ ರೂಪಾಯಿ ಪಾವತಿಸಬೇಕಿದೆ. ಮುಂಬೈ ಮೆಟ್ರೋ ಒನ್ ಪ್ರೈವೇಟ್ ಲಿಮಿಟೆಡ್‌ಗೆ ಎಂಎಂಆರ್‌ಡಿಎ ಹಣ ನೀಡಬೇಕಿದೆ.
ಏನಿದು ಪ್ರಕರಣ?
ವರ್ಸೋವಾ-ಅಂಧೇರಿ-ಘಾಟ್ಕೋಪರ್ ಮುಂಬೈ ಮೆಟ್ರೋ ಮಾರ್ಗ -1ನನ್ನು ಸಾರ್ವಜನಿಕ ಪಾಲುದಾರಿಕೆಯಲ್ಲಿ ನಿರ್ಮಿಸಲಾಗಿತ್ತು. ಈ ಯೋಜನೆ ನಿರ್ಮಾಣದಲ್ಲಿ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಪ್ರಮುಖ ಪಾಲು ಹೊಂದಿತ್ತು. ಈ ಯೋಜನೆಯ ವೆಚ್ಚಗಳಿಗೆ ಸಂಬಂಧಿಸಿದಂತೆ ರಿಲಯನ್ಸ್ ಗ್ರೂಪ್ ಮತ್ತು ಎಂಎಂಆರ್‌ಡಿಎ ನಡುವೆ ವಿವಾದ ಏರ್ಪಟ್ಟಿತ್ತು. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಯೋಜನೆಯ ಒಪ್ಪಂದದ ಪ್ರಕಾರ, ಎಂಎಂಆರ್‌ಡಿಎ ಹಣ ಪಾವತಿಸಿಲ್ಲ ಎಂದು ಎಂಎಂಆರ್‌ಡಿಎ ಹೇಳಿತ್ತು.
ಈಗ ಬಾಂಬೆ ಹೈಕೋರ್ಟ್ ಎಂಎಂಒಪಿಎಲ್‌ನ ಹಕ್ಕುಗಳನ್ನು ಸಂಪೂರ್ಣವಾಗಿ ಸಮರ್ಥಿಸಿಕೊಂಡಿದೆ ಮತ್ತು ಎಂಎಂಆರ್‌ಡಿಎ 1169 ಕೋಟಿ ರೂ.ಗಳನ್ನು ಪಾವತಿಸಲು ಆದೇಶಿಸಿದೆ. ನ್ಯಾಯಾಲಯದ ತೀರ್ಪಿನ ಅನ್ವಯ ಅನಿಲ್ ಅಂಬಾನಿಯ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್‌ಗೆ ಹಣ ಸಿಗಲಿದೆ. ಆರ್ಥಿಕವಾಗಿ ಕುಸಿದಿರುವ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್‌ಗೆ ಈ ತೀರ್ಪು ಚೇತರಿಕೆ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ವರ್ಸೋವಾ-ಅಂಧೇರಿ-ಘಾಟ್ಕೋಪರ್ ಕಾರಿಡಾರ್ MMOPL ಮುಂಬೈನ ಮೊದಲ ಮೆಟ್ರೋ ಮಾರ್ಗವಾಗಿದ್ದು, ಇದನ್ನು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಮತ್ತು MMRD ಜಂಟಿ ಉದ್ಯಮವು ನಡೆಸುತ್ತಿದೆ. ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಇದರಲ್ಲಿ 74 ಪ್ರತಿಶತ ಪಾಲನ್ನು ಹೊಂದಿದೆ, ಆದರೆ MMRD ಮಾಲೀಕತ್ವದ ಹಕ್ಕುಗಳನ್ನು ತನ್ನ ಬಳಿಯೇ ಉಳಿಸಿಕೊಂಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

