ಕಡಿಮೆಯಾದರೂ ಕೈಗೆಟುಕುತ್ತಿಲ್ಲ ಚಿನ್ನ, 3 ದಿನದಲ್ಲಿ 18,600 ರೂ ಏರಿಕೆಯಿಂದ ಹೂಡಿಕೆ ಸೂಕ್ತವೇ?
ಚಿನ್ನದ ಬೆಲೆ ಮತ್ತೆ ಏರಿಕೆ ಕಾಣುತ್ತಿದೆ. ಜೂನ್ 5 ರಂದು ಬಂಗಾರದ ಬೆಲೆಯಲ್ಲಿ 400 ರೂಪಾಯಿ ಇಳಿಕೆ ಕಂಡರೂ ಕೈಗೆ ಎಟಕದಂತೆ ಆಗಿದೆ. ಕಳೆದ ಮೂರು ದಿನದಲ್ಲಿ ಚಿನ್ನದ ಬೆಲೆ ಬರೋಬ್ಬರಿ 18,600 ರೂಪಾಯಿ ಏರಿಕೆ ಕಂಡಿದೆ. ಇದರಿಂದ ಚಿನ್ನದ ಮೇಲೆ ಹೂಡಿಕೆ ಮಾಡಿ ಲಾಭ ಮಾಡಿಕೊಳ್ಳಲು ಸೂಕ್ತ ಸಮಯವೇ?

ಚಿನ್ನದ ಬೆಲೆ ಏರಿಳಿತ ಕಾಣುತ್ತಲೇ ಇದೆ. ಲಕ್ಷ ರೂ ಗಡಿ ತಲುಪಿದ್ದ ಚಿನ್ನ ಕೆಲ ದಿನಗಳಲ್ಲಿ ಇಳಿಕೆಯಾದರೂ ಕೈಗೆಟುಕುತ್ತಿಲ್ಲ. ಕಳೆದ ಮೂರು ದಿನದಲ್ಲಿ ಚಿನ್ನದ ಬೆಲೆ 18,600 ರೂಪಾಯಿ ಏರಿಕೆ ಕಂಡಿದೆ. 100 ಗ್ರಾಂ ಚಿನ್ನದ ಮೇಲೆ ಕಳೆದ ಮೂರು ದಿನದಲ್ಲಿ 18,600 ರೂಪಾಯಿ ಏರಿಕೆಯಾಗಿದೆ. ಹೀಗಾಗಿ ಚಿನ್ನ ಒಂದೆರೆಡು ದಿನ ಇಳಿಕೆ ಕಂಡರೂ ಕೈಗೆ ಸಿಗುತ್ತಿಲ್ಲ. ಸದ್ಯ ಮದುವೆ ಸೇರಿದಂತೆ ಚಿನ್ನ ಖರೀದಿ ಸೀಸನ್ ಅಲ್ಲದಿದ್ದರೂ ಬಂಗಾರ ಬೆಲೆ ದುಬಾರಿಯಾಗುತ್ತಿದೆ.
ಅಮೆರಿಕಾ ಹಾಗೂ ಚೀನಾ ಮಾರುಕಟ್ಟೆಯಲ್ಲಿ ಆಗುತ್ತಿರುವ ಮಹತ್ತರ ಬದಲಾವಣೆಯಿಂದ ಚಿನ್ನದ ಬೆಲೆ ಏರಿಳಿತ ಕಾಣುತ್ತಿದೆ. ಅಮೆರಿಕ ಹೆಚ್ಚಿನ ಸುಂಕ ವಿಧಿಸಿದರೆ, ಇತ್ತ ಚೀನಾ ತೆರಿಗೆ ಮೂಲಕ ತಿರೇಗೇಟು ನೀಡುತ್ತಿದೆ. ಇದು ಹಲವು ದೇಶಗಳ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿದೆ. ಪ್ರಮುಖವಾಗಿ ಭಾರತದ ಚಿನ್ನದ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿದೆ. ಚಿನ್ನದ ಬೆಲೆ ಏರಿಕೆಯಾಗುತ್ತಿರುವ ಕಾರಣ ಇದೀಗ ಹೂಡಿಕೆ ಮಾಡುವುದು ಸೂಕ್ತವೇ ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ.
100 ಗ್ರಾಂ ಚಿನ್ನದ ಬೆಲೆ ಮೂರು ದಿನದಲ್ಲಿ 18,600 ರೂ ಏರಿಕೆ ಕಂಡಿದೆ. ಆದರೆ ಶೇಕಡಾ ಪ್ರಮಾಣ ಅತೀ ಕಡಿಮೆ. ಚಿನ್ನದ ಮೇಲೆ ಹೂಡಿಕೆಗಿಂತ ಬೆಳ್ಳಿ ಮೇಲೆ ಹೂಡಿಕೆ ಉತ್ತಮ ಎಂದು ಹೂಡಿಕೆ ತಜ್ಞರು ಸಲಹೆ ನೀಡುತ್ತಾರೆ. ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಲಾಭದ ಪ್ರಮಾಣ ಕಡಿಮೆ. ಆದೇ ಬೆಳ್ಳಿ ಮೇಲೆ ಹೂಡಿಕೆ ಲಾಭ ಹೆಚ್ಚು ಎಂದು ತಜ್ಞರು ಹೇಳುತ್ತಾರೆ. ಆದರೆ ಚಿನ್ನದ ಮೇಲೆ ಹೂಡಿಕೆ ಸ್ಥಿರವಾಗಿರುತ್ತದೆ.ಲಾಭ ಕಡಿಮೆಯಾದರೂ ನಷ್ಟವಾಗಲ್ಲ ಎಂದಿದ್ದಾರೆ.
ಜೂನ್ 5 ರಂದು ದೇಶದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ 9,960 ರೂಪಾಯಿ ಆಗಿದ್ದರೆ, 10 ಗ್ರಾಂ ಚಿನ್ನಕ್ಕೆ 99,600 ರೂಪಾಯಿ ಆಗಿದೆ. 1 ಲಕ್ಷ ರೂಪಾಯಿ ಗಡಿ ತಲುಪಲು ಕೇವಲ 400 ರೂಪಾಯಿ ಮಾತ್ರ ಬಾಕಿ. ಸದ್ಯ ಚಿನ್ನದ ಏರಿಳಿತ ನೋಡಿದರೆ ಮತ್ತೆ 1 ಲಕ್ಷ ರೂಪಾಯಿ ಗಡಿ ದಾಟುವ ದಿನ ದೂರವಿಲ್ಲ ಎಂದು ವರದಿಗಳು ಹೇಳುತ್ತಿದೆ.
22 ಕಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಂಗೆ 9,130 ರೂಪಾಯಿ ಆಗಿದೆ. 10 ಗ್ರಾಂ ಚಿನ್ನಕ್ಕೆ 91,300 ರೂಪಾಯಿ ಆಗಿದೆ. 100 ಗ್ರಾಂ ಚಿನ್ನದ ಬೆಲೆ 9,13,000 ರೂಪಾಯಿ ಆಗಿದೆ. ಚಿನ್ನ ಖರೀದಿ ಜನಸಾಮಾನ್ಯರಿಗೆ ಅಸಾಧ್ಯವಾಗಿದೆ. ದುಬಾರಿ ಚಿನ್ನ ಭಾರತದ ಹಲವು ಕುಟಂಬಗಳ ಮದುವೆಗೆ ಅತೀ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.