Dubai gold in India: ದುಬೈನ ಶುದ್ಧ ಚಿನ್ನವನ್ನು ಭಾರತದಲ್ಲಿ ಮಾರಿದ್ರೆ ಇಷ್ಟು ಲಾಭ ಆಗೋದು ಪಕ್ಕಾ!
Dubai gold in India: ಭಾರತದಲ್ಲಿ ಬಂಗಾರ ದುಬಾರ, ದುಬೈನಲ್ಲಿ ಕಡಿಮೆ ಬೆಲೆಗೆ ಬಂಗಾರ ಸಿಗುವುದು ಎಂದು ಕೆಲವರು ಲೆಕ್ಕಾಚಾರ ಹಾಕಿರುತ್ತಾರೆ. ಹಾಗಾದರೆ ದುಬೈನಿಂದ ಭಾರತಕ್ಕೆ ಎಷ್ಟು ಬಂಗಾರವನ್ನು ತರಬಹುದು ಎಂಬ ಬಗ್ಗೆ ಮಾಹಿತಿ ಇದೆ.

ದುಬೈನಲ್ಲಿ ಶುದ್ಧ ಚಿನ್ನ
ದುಬೈ ದೇಶದಲ್ಲಿ ಶುದ್ಧ ಚಿನ್ನ ಕಡಿಮೆ ಬೆಲೆಗೆ ಸಿಗುವುದು. ದುಬೈನಿಂದ ಭಾರತಕ್ಕೆ ಬರುವಾಗ ಬಂಗಾರ ತಂದು, ಇಲ್ಲಿ ಮಾರೋಣ ಎಂದು ಅನೇಕರು ಅಂದುಕೊಳ್ಳುತ್ತಾರೆ. ಹಾಗಾದರೆ ಅಷ್ಟು ಸುಲಭವೇ ಎಂದು ಯೋಚಿಸಬಹುದು, ಆ ಥರ ಇಲ್ಲ.
ಭಾರತಕ್ಕೆ ಎಷ್ಟು ಪ್ರಮಾಣದಲ್ಲಿ ಬಂಗಾರ ತರಬಹುದು?
ಒಂದು ವರ್ಷಕ್ಕಿಂತ ಹೆಚ್ಚು ಸಮಯ ವಿದೇಶದಲ್ಲಿ ವಾಸ ಮಾಡಿದ ಪುರುಷರು 20 ಗ್ರಾಂ, ಮಹಿಳೆಯರಾದರೆ 40 ಗ್ರಾಂವರೆಗೆ ಚಿನ್ನದ ಆಭರಣಗಳನ್ನು ಸುಂಕವಿಲ್ಲದೆ ಭಾರತಕ್ಕೆ ತರಬಹುದು.
ಬಂಗಾರದ ಬಿಸ್ಕತ್ತು ಅಥವಾ ಬಂಗಾರದ ನಾಣ್ಯಗಳಿಗೆ ಗ್ರಾಂನಿಂದಲೇ ಕಸ್ಟಮ್ ಸುಂಕ ಹಾಕುತ್ತಾರೆ.
ಒಬ್ಬ ವ್ಯಕ್ತಿಯು ಗರಿಷ್ಠ 1 ಕೆಜಿ ವರೆಗೆ ಬಂಗಾರವನ್ನು ತರಬಹುದು, ಆದರೆ ಸುಂಕ ಕೊಡಬೇಕು.
ದುಬೈನಲ್ಲಿ ಬಂಗಾರ ಖರೀದಿಸಿದರೆ ಏನಾಗುತ್ತದೆ?
ಆಮದು ಸುಂಕ, ಜಿಎಸ್‌ಟಿ ಸುಂಕ ಇಲ್ಲದಿರೋದರಿಂದ ಭಾರತ ಹಾಗೂ ದುಬೈಗೆ ಹೋಲಿಸಿದರೆ ದುಬೈನಲ್ಲೆ ಬೆಲೆ ಸುಮಾರು ಶೇ. 5-7 ರಷ್ಟು ಕಡಿಮೆ ಇರುತ್ತದೆ..
ಪ್ರವಾಸಿಗರಿಗೆ ವ್ಯಾಟ್ ಮರುಪಾವತಿಯೂ ಸಿಗಬಹುದು. ದುಬೈನಲ್ಲಿ ಮೇಕಿಂಗ್ ಚಾರ್ಜಸ್ ಕಡಿಮೆ ಇರುತ್ತದೆ.
ಯಾವೆಲ್ಲಾ ಶುಲ್ಕಗಳನ್ನು ಪಾವತಿಸಬೇಕು?
ಎಷ್ಟು ಬಂಗಾರ ತರಬಹುದೋ ಅದಕ್ಕಿಂತ ಹೆಚ್ಚು ಬಂಗಾರ ತಂದಾಗ ಶೇ. 3 ರಿಂದ ಶೇ. 10 ರಷ್ಟು ಸುಂಕ ಕೊಡಬೇಕು
ಸ್ವಲ್ಪ ಸಮಯದ ಕಾಲ ಪ್ರವಾಸ ಮಾಡುವವರಿಗೆ ಈ ಸುಂಕ ಶೇ. 36-38.5 ರಷ್ಟು ಹೆಚ್ಚಿರುತ್ತದೆ
ಭಾರತದಲ್ಲಿ ಮಾರಾಟ ಮಾಡುವಾಗ ಶೇ. 3 ಜಿಎಸ್‌ಟಿ, ಕರೆನ್ಸಿ ವಿನಿಮಯ ವೆಚ್ಚ ಕೂಡ ಇರುತ್ತದೆ.
ಸಮಸ್ಯೆಗಳೇನು?
ಚಿನ್ನದ ಬೆಲೆಯ ಏರಿಳಿತ, ರೂಪಾಯಿ ಮೌಲ್ಯದ ಕುಸಿತದಿಂದ ಲಾಭ ಸಿಗೋದಿಲ್ಲ.
ಬಂಗಾರದ ಬಗ್ಗೆ ಹೇಳದೆ ಭಾರತಕ್ಕೆ ತಂದರೆ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳುತ್ತಾರೆ ಅಥವಾ ಭಾರಿ ದಂಡ ಅಥವಾ ಕಾನೂನು ಕ್ರಮ ಕೈಗೊಳ್ತಾರೆ
5 ರಿಂದ 20 ಲಕ್ಷ ರೂಪಾಯಿ ಬಂಗಾರ ತಂದು ಮಾರಿದರೆ ಲಾಭವೇ?
ತಜ್ಞರ ಪ್ರಕಾರ, ಅಷ್ಟು ಲಾಭದಾಯಕವಲ್ಲ. ಕಸ್ಟಮ್ಸ್ ಸುಂಕ, ಜಿಎಸ್‌ಟಿ ಮತ್ತು ಹಣ ಪರಿವರ್ತನೆಯ ವೆಚ್ಚಗಳನ್ನು ಕಳೆದಾಗ ಸಿಗುವ ಲಾಭ ಬಹಳ ಕಡಿಮೆ.
ದೊಡ್ಡ ಪ್ರಮಾಣದಲ್ಲಿ ಚಿನ್ನವನ್ನು ತಂದರೆ ವಾಣಿಜ್ಯ ಉದ್ದೇಶ ಎಂದು ಲೆಕ್ಕ ಬರುವುದು. ಬಂಗಾರದ ಬೆಲೆಯಲ್ಲಿ ಭಾರಿ ಏರಿಕೆಯಾದಾಗ ಲಾಭ ಆಗುತ್ತದೆ, ಇಲ್ಲದಿದ್ದಲ್ಲಿ ನಷ್ಟ ಆಗುವುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

