MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಮೇ 1ರಿಂದ LPG ಮತ್ತಷ್ಟು ದುಬಾರಿ? ಹೊಸ ನಿಯಮಗಳ ಬಗ್ಗೆ ಇಂದೇ ತಿಳಿದುಕೊಳ್ಳಿ

ಮೇ 1ರಿಂದ LPG ಮತ್ತಷ್ಟು ದುಬಾರಿ? ಹೊಸ ನಿಯಮಗಳ ಬಗ್ಗೆ ಇಂದೇ ತಿಳಿದುಕೊಳ್ಳಿ

ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗುವ ಸಾಧ್ಯತೆಯಿದ್ದು, ಸರ್ಕಾರ ಹೊಸ ಸಂಪರ್ಕ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ, ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿಯೂ ಬದಲಾವಣೆ ತರಲಾಗಿದ್ದು, OTP ಆಧಾರಿತ ವಿತರಣೆಯನ್ನು ಕಡ್ಡಾಯಗೊಳಿಸಲಾಗಿದೆ.

1 Min read
Author : Mahmad Rafik
Published : Apr 27 2026, 12:37 PM IST
Share this Photo Gallery
  • FB
  • TW
  • Linkdin
  • Whatsapp
15
ಎಲ್‌ಪಿಜಿ ಸಿಲಿಂಡರ್ ಬೆಲೆ
Image Credit : ChatGPT

ಎಲ್‌ಪಿಜಿ ಸಿಲಿಂಡರ್ ಬೆಲೆ

ಯುದ್ಧದ ಪರಿಣಾಮದಿಂದಾಗಿ ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿದ್ದು, ಪೂರೈಕೆಯಲ್ಲಿಯೂ ವ್ಯತ್ಯಯ ಉಂಟಾಗಿದೆ. ಪ್ರತಿ ತಿಂಗಳ ಮೊದಲ ದಿನದಂದು ತೈಲ ಕಂಪನಿಗಳು ಬೆಲೆಯನ್ನು ಪರಿಷ್ಕೃತಗೊಳಿಸುತ್ತವೆ. ಮೇ 1ರಂದು ಎಲ್‌ಪಿಜಿ ಬೆಲೆ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

25
ಚುನಾವಣೆ ಫಲಿತಾಂಶ
Image Credit : Getty

ಚುನಾವಣೆ ಫಲಿತಾಂಶ

ದೇಶದಲ್ಲಿ ಪಂಚರಾಜ್ಯಗಳ ಚುನಾವಣೆ ಹಿನ್ನೆಲೆ ಬೆಲೆ ಏರಿಕೆಯನ್ನು ತಡೆಹಿಡಿಯಲಾಗಿದೆ ಎನ್ನಲಾಗುತ್ತಿದೆ. ಮೇ 4ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದ್ದು, ನಂತರದ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್‌ಪಿಜಿ ಬೆಲೆಯೂ ಹೆಚ್ಚಳವಾಗಬಹುದು ಎಂಬ ವರದಿಗಳು ಪ್ರಕಟವಾಗುತ್ತಿವೆ.

Related Articles

Related image1
ಭಾರತದ ಎಲ್‌ಪಿಜಿ ಪೂರೈಕೆಗೆ ಹೊಸ ಭರವಸೆ? ಹರ್ಮೋಜ್ ಜಲಸಂಧಿ ದಾಟಿದ ಜಗ್ ವಿಕ್ರಮ್ ನೌಕೆ
Related image2
LPG Cylinder Price: ಎಲ್‌ಪಿಜಿ ಬಳಕೆದಾರರಿಗೆ ನೆಮ್ಮದಿಯ ಸುದ್ದಿ; ಸಿಗ್ತಿದೆ ಭರ್ಜರಿ ರಿಯಾಯಿತಿ!
35
 ಹೊಸ ಎಲ್‌ಪಿಜಿ ಗ್ಯಾಸ್ ಕನೆಕ್ಷನ್
Image Credit : Getty

ಹೊಸ ಎಲ್‌ಪಿಜಿ ಗ್ಯಾಸ್ ಕನೆಕ್ಷನ್

ದೇಶದಲ್ಲಿ ಹೊಸ ಎಲ್‌ಪಿಜಿ ಗ್ಯಾಸ್ ಕನೆಕ್ಷನ್ ನೀಡುವುದನ್ನು ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಸದ್ಯ ಅಸ್ತಿತ್ವದಲ್ಲಿರುವ ಗ್ರಾಹಕರ ಬೇಡಿಕೆಯನ್ನು ಪೂರೈಸುವತ್ತ ಕೆಲಸ ಮಾಡಲು ಪೆಟ್ರೋಲಿಯಂ ಸಚಿವಾಲಯ ನಿರ್ದೇಶನ ನೀಡಿದೆ. ಈ ಹಿನ್ನೆಲೆ ಮೇ ತಿಂಗಳಲ್ಲಯೂ ಹೊಸ ಗ್ರಾಹಕರಿಗೆ ಎಲ್‌ಪಿಜಿ ಸಂಪರ್ಕ ಸಿಗೋದು ಅನುಮಾನ ಎಂದು ಹೇಳಲಾಗುತ್ತಿದೆ.

45
ಬುಕಿಂಗ್ ನಿಯಮ
Image Credit : Getty

ಬುಕಿಂಗ್ ನಿಯಮ

ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆ ಸರ್ಕಾರ ಬುಕಿಂಗ್ ನಿಯಮಗಳಲ್ಲಿಯೂ ಬದಲಾವಣೆಯನ್ನು ತಂದಿದೆ. ನಗರ ಪ್ರದೇಶದಲ್ಲಿ ರಿಫಿಲ್ಲಿಂಗ್ ಅವಧಿಯನ್ನು 25 ದಿನಕ್ಕೆ ಮತ್ತು ಗ್ರಾಮೀಣ ಪ್ರದೇಶದಲ್ಲಿ 45 ದಿನಗಳ ಅಂತರವಿರಬೇಕು. ಈ ನಿಯಮದಿಂದ ಇನ್ನು ಮುಂದೆ ತ್ವರಿತವಾಗಿ ಸಿಲಿಂಡರ್ ಬುಕ್ ಮಾಡಲು ಸಾಧ್ಯವಾಗಲ್ಲ.

55
ಪೂರೈಕೆಯಲ್ಲಿ ಪಾರದರ್ಶಕತೆ
Image Credit : ChatGPT

ಪೂರೈಕೆಯಲ್ಲಿ ಪಾರದರ್ಶಕತೆ

ಪೂರೈಕೆಯಲ್ಲಿ ಪಾರದರ್ಶಕತೆ ತರಲು OTP ಆಧಾರಿತ ವಿತರಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಡ್ಡಾಯ ಮತ್ತು ಶಾಶ್ವತಗೊಳಿಸಲಾಗುತ್ತಿದೆ. ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮೂಲಕ ಬುಕ್ ಮಾಡಬೇಕು. ಕೋಡ್ ನೀಡಿದ ನಂತರವೇ ಸಿಲಿಂಡರ ವಿತರಣೆ ಮಾಡಲಾಗುತ್ತದೆ. ಇನ್ನು ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಹೋಟೆಲ್‌ಗಳು ಎಲ್‌ಪಿಜಿ ಕೊರತೆಯನ್ನು ಅನುಭವಿಸುತ್ತಿವೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಎಲ್‌ಪಿಜಿ
ಕೊಲ್ಲಿ ಯುದ್ಧ
ವ್ಯವಹಾರ

Latest Videos
Recommended Stories
Recommended image1
ಮೇ ತಿಂಗಳಲ್ಲಿ ಬ್ಯಾಂಕ್ ಕೆಲ್ಸ ಇದ್ದರೆ ಇದನ್ನು ಗಮನಿಸಿ: 13 ದಿನಗಳು ಕೆಲಸಕ್ಕೆ ರಜೆ- ಡಿಟೇಲ್ಸ್​ ಇಲ್ಲಿದೆ
Recommended image2
459 ರೂ. ಕೊಟ್ರೆ ಸಾಕು: ಜಿಯೋ ಗ್ರಾಹಕರಿಗೆ ಈ ಎಲ್ಲ ಕೊಡುಗೆಗಳ ಮಹಾಪೂರ- ಏನಿದು special offer
Recommended image3
1882ರ ಕೇದಾರನಾಥ ಫೋಟೋ ಹಂಚಿಕೊಂಡ ಆನಂದ್ ಮಹೀಂದ್ರ, ಸನಾತನ ಹಿರಿಮೆಗೆ ಸಾಟಿ ಎಲ್ಲಿ?
Related Stories
Recommended image1
ಭಾರತದ ಎಲ್‌ಪಿಜಿ ಪೂರೈಕೆಗೆ ಹೊಸ ಭರವಸೆ? ಹರ್ಮೋಜ್ ಜಲಸಂಧಿ ದಾಟಿದ ಜಗ್ ವಿಕ್ರಮ್ ನೌಕೆ
Recommended image2
LPG Cylinder Price: ಎಲ್‌ಪಿಜಿ ಬಳಕೆದಾರರಿಗೆ ನೆಮ್ಮದಿಯ ಸುದ್ದಿ; ಸಿಗ್ತಿದೆ ಭರ್ಜರಿ ರಿಯಾಯಿತಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved