ಜಿಯೋದಿಂದ ಹೊಸ Only Calling Plan; ಕಡಿಮೆ ಬೆಲೆಗೆ 336 ದಿನ ವ್ಯಾಲಿಡಿಟಿಯ ಪ್ಲಾನ್
Reliance Jio Plans: ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಎರಡು ಹೊಸ ಕಾಲಿಂಗ್ ಪ್ಲಾನ್‌ಗಳನ್ನು ಪರಿಚಯಿಸಿದೆ. ಎರಡೂ ಪ್ಲಾನ್‌ಗಳು ಅನ್‌ಲಿಮಿಟೆಡ್ ಕರೆಗಳು, ಉಚಿತ SMS ಮತ್ತು ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಒಳಗೊಂಡಿವೆ.

ನೀವು ಜಿಯೋ ಬಳಕೆದಾರರಾಗಿದ್ದು, ಬೇಸ್ ಪ್ಲಾನ್‌ನ ಹುಡುಕಾಟದಲ್ಲಿದ್ದೀರಾ? ರಿಲಯನ್ಸ್ ಜಿಯೋ ತನ್ನ ಕೋಟ್ಯಂತರ ಬಳಕೆದಾರರಿಗಿ ಹೊಸ ಪ್ಲಾನ್‌ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಬಳಕೆದಾರರ ಬೇಡಿಕೆಗನುಸಾರವಾಗಿ ಪ್ಲಾನ್‌ಗಳು ಜಿಯೋ ಅನೌನ್ಸ್ ಮಾಡುತ್ತಿರುತ್ತದೆ.
ಈಗ ಬಿಡುಗಡೆ ಮಾಡಿರುವ ಪ್ಲಾನ್ ಪ್ರಕಾರ, ಬಳಕೆದಾರರು ಕೇವಲ ಅನ್‌ಲಿಮಿಟೆಡ್ ಕಾಲ್ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಈ ಪ್ಲಾನ್ ಜೊತೆ ಗ್ರಾಹಕರಿಗೆ ಉಚಿತವಾಗಿ ಎಸ್ಎಂಎಸ್ ಕಳುಹಿಸುವ ಸೌಲಭ್ಯವೂ ಸಿಗಲಿದೆ. ಕೇವಲ ಕಾಲಿಂಗ್‌ಗಾಗಿ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಎರಡು ಪ್ಲಾನ್‌ಗಳನ್ನು ತಂದಿದೆ.
Rs 448 ಮತ್ತು Rs 1,748
ಕೇವಲ ಕಾಲಿಂಗ್‌ಗಾಗಿ ರಿಲಯನ್ಸ್ ಜಿಯೋ Rs 448 ಮತ್ತು Rs 1,748 ಎರಡು ಪ್ಲಾನ್‌ಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಈ ಪ್ಲಾನ್‌ಗಳು ಕ್ರಮವಾಗಿ 84 ಮತ್ತು 336 ದಿನದ ವ್ಯಾಲಿಡಿಟಿಯನ್ನು ಹೊಂದಿವೆ. 336 ದಿನ ವ್ಯಾಲಿಡಿಟಿಯ ಪ್ಲಾನ್ ರೀಚಾರ್ಜ್ ಮಾಡಿಕೊಂಡರೆ ಒಂದು ವರ್ಷದವರೆಗೆ ಯಾವುದೇ ರೀಚಾರ್ಜ್ ಮಾಡಿಕೊಳ್ಳುವ ಅವಶ್ಯಕತೆ ಇರಲ್ಲ.
ಜಿಯೋದ Rs 448 ಪ್ರಿಪೇಯ್ಡ್ ಪ್ಲಾನ್
ಜಿಯೋ ಗ್ರಾಹಕರು 448 ರೂಪಾಯಿ ಪ್ಲಾನ್ 84 ದಿನದ ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ಲಾನ್‌ನಲ್ಲಿ ಗ್ರಾಹಕರು ಉಚಿತವಾಗಿ 1000 ಎಸಎಂಎಸ್ ಕಳುಹಿಸಬಹುದು. ಇನ್ನುಳಿದಂತೆ ಜಿಯೋ ಸಿನಿಮಾ ಮತ್ತು ಜಿಯೋ ಟಿವಿಯ ಉಚಿತ ಆಕ್ಸೆಸ್ ಸಿಗಲಿದೆ.
ಜಿಯೋದ Rs 1748 ಪ್ರಿಪೇಯ್ಡ್ ಪ್ಲಾನ್
1,748 ರೂಪಾಯಿಯ ಒನ್ಲಿ ಕಾಲಿಂಗ್ ಪ್ಲಾನ್ 336 ದಿನದ ವ್ಯಾಲಿಡಿಟಿಯನ್ನು ಹೊಂದಿದೆ. 11 ತಿಂಗಳು ಕಾಲ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕಾಲ್ ಮಾಡಬಹುದಾಗಿದೆ. ಗ್ರಾಹಕರಿಗೆ ಉಚಿತವಾಗಿ 3,600 ಎಸ್‌ಎಂಎಸ್ ಕಳುಹಿಸಬಹುದು. ಹಾಗೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ಫ್ರೀ ಆಕ್ಸೆಸ್ ಸಿಗಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

