Top 8 Richest Royal Families: ನಮ್ಮ ಮೈಸೂರಿನ ಮಹಾರಾಜರ ಆಸ್ತಿ ಮೌಲ್ಯ ಎಷ್ಟಿದೆ?
Top 8 Richest Royal Families: ದೇಶದಲ್ಲಿ ಕೋಟ್ಯಾಧಿಪತಿಗಳಾಗಿರುವ ಉದ್ಯಮಿಗಳು ಮಾತ್ರ ಇಲ್ಲ. ಇವತ್ತಿಗೂ ಕೂಡ ಕೆಲವು ರಾಜ ವಂಶಸ್ಥರು, ಸಾವಿರಾರು ಕೋಟಿಯ ಆಸ್ತಿಯನ್ನು ಹೊಂದಿದ್ದಾರೆ. ಇಲ್ಲಿದೆ ಟಾಪ್ 8 ಶ್ರೀಮಂತ ರಾಜವಂಶಸ್ಥರ ಲಿಸ್ಟ್. ನಮ್ಮ ಮೈಸೂರಿನ ರಾಜರು ಯಾವ ಸ್ಥಾನದಲ್ಲಿದ್ದಾರೆ ನೋಡೋಣ.

ಟಾಪ್ 8 ಶ್ರೀಮಂತ ರಾಜವಂಶಸ್ಥರು
ನಮ್ಮ ದೇಶದಲ್ಲಿ ಇಂದಿಗೂ ಕೂಡ ರಾಜವಂಶಸ್ಥರಿದ್ದಾರೆ. ಅವರು ನಮ್ಮ ದೇಶದ ಉದ್ಯಮಿಗಳಿಗಿಂತ ಹೆಚ್ಚು ಶ್ರೀಮಂತರೂ ಕೂಡ ಆಗಿದ್ದಾರೆ. ಇಲ್ಲಿದೆ ನಮ್ಮ ದೇಶದ ಟಾಪ್ 8 ಶ್ರೀಮಂತ ರಾಜವಂಶಸ್ಥರ ಲಿಸ್ಟ್. ಜೋಧ್ ಪುರದ ಮಹಾರಾಜರಿಂದ ಹಿಡಿದು, ಮೈಸೂರಿನ ಮಹಾರಾಜವರೆಗೂ ಯಾರ ಬಳಿ ಎಷ್ಟೆಷ್ಟು ಆಸ್ತಿ ಮೌಲ್ಯ ಇದೆ ನೋಡೋಣ.
ಜೋಧಪುರದ ರಾಜವಂಶಸ್ಥರು
ಇವರು ದೇಶದ ಅತ್ಯಂತ ಶ್ರೀಮಂತ ರಾಜ ವಂಶಸ್ಥರು. ಇವರ ಆಸ್ತಿ ಮೌಲ್ಯ 22,000 ಕೋಟಿ. ಎಚ್ಎಚ್ ಮಹಾರಾಜ ಗಜ್ ಸಿಂಗ್ II ಅವರು ಇಂದಿನ ಮಹಾರಾಜರು. ಈ ಕುಟುಂಬ ಉಮೈದ್ ಭವನ ಅರಮನೆಯಲ್ಲಿ ವಾಸಿಸುವ ಪ್ರಮುಖ ರಾಥೋಡ್ ರಾಜವಂಶವಾಗಿದೆ. ಗಜ್ ಸಿಂಗ್ II ತನ್ನ ಮಗ ಯುವರಾಜ್ ಶಿವರಾಜ್ ಸಿಂಗ್ ಮತ್ತು ಮಗಳು ಮಹಾರಾಜಕುಮಾರಿ ಶಿವರಂಜಿನಿ ರಾಜ್ಯೇ ಅವರೊಂದಿಗೆ ಕೋಟೆಗಳು ಮತ್ತು ಐಷಾರಾಮಿ ಹೋಟೆಲ್ಗಳು ಸೇರಿದಂತೆ ಪಾರಂಪರಿಕ ಆಸ್ತಿಗಳನ್ನು ನಿರ್ವಹಿಸುತ್ತಿದ್ದಾರೆ.
ಜೈಪುರ ರಾಜವಂಶಸ್ಥರು
ಜೈಪುರ ಮಹಾರಾಜರು ದೇಶದ ಎರಡನೇ ಅತ್ಯಂತ ಶ್ರೀಮಂತ ರಾಜವಂಶಸ್ಥರು. ಇವರ ಆಸ್ತಿ ಮೌಲ್ಯ 20,000 ಕೋಟಿ ರೂಪಾಯಿ. ಯುವ ಮಹಾರಾಜ ಸವಾಯಿ ಪದ್ಮನಾಭ ಸಿಂಗ್ ಇಂದಿನ ಮಹಾರಾಜ. ಸಿಟಿ ಪ್ಯಾಲೇಸ್ನಲ್ಲಿ ವಾಸಿಸುವ ಈ ಕುಟುಂಬವು ಪ್ರವಾಸೋದ್ಯಮ, ಪೋಲೊ ಮತ್ತು ಪಾರಂಪರಿಕ ಆಸ್ತಿಗಳನ್ನು ನಿರ್ವಹಿಸುವ ಮೂಲಕ ತಮ್ಮ ಪರಂಪರೆಯನ್ನು ಕಾಯ್ದುಕೊಳ್ಳುತ್ತದೆ.
ರಾಜಕೋಟ್ ರಾಜವಂಶಸ್ಥರು
ರಾಜಕೋಟ್ ರಾಜವಂಶಸ್ಥರು ಶ್ರೀಮಂತ ರಾಜಮನೆತನದ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇವರ ಆಸ್ತಿ ಮೌಲ್ಯ ಕೂಡ 20,000 ಕೋಟಿ ರೂಪಾಯಿ. ಇವರು ರಜಪೂತರ ಜಡೇಜಾ ಕುಲಕ್ಕೆ ಸೇರಿದವರಾಗಿದ್ದು, ಜಾಮ್ನಗರದಿಂದ ಹುಟ್ಟಿ 1612 ರಲ್ಲಿ ರಾಜವಂಶ ಸ್ಥಾಪನೆಯಾದರು. ಮಾಂಧತಸಿಂಹ ಜಡೇಜಾ, ರಾಜ್ಯದ 17 ನೇ ರಾಜ. ಅವರು ರಂಜಿತ್ ವಿಲಾಸ್ ಅರಮನೆಯಲ್ಲಿ ವಾಸಿಸುತ್ತಿದ್ದಾರೆ ಮತ್ತು ವಿಶಾಲವಾದ ಎಸ್ಟೇಟ್ ಮತ್ತು ವಿಂಟೇಜ್ ಕಾರು ಸಂಗ್ರಹವನ್ನು ನಿರ್ವಹಿಸುತ್ತಾರೆ.
ಬರೋಡಾದ ಗಾಯಕ್’ವಾಡ್ ರಾಜವಂಶಸ್ಥರು
ಇವರು ನಾಲ್ಕನೇ ಅತ್ಯಂತ ಶ್ರೀಮಂತ ರಾಜವಂಶಸ್ಥರು. ಇವರ ಆಸ್ತಿ ಮೌಲ್ಯ ಕೂಡ 20,000 ಕೋಟಿ. ಇವರು ಗುಜರಾತ್ನಲ್ಲಿರುವ ಲಕ್ಷ್ಮೀ ನಿವಾಸ ಅರಮನೆಯಲ್ಲಿ ವಾಸ ಮಾಡುತ್ತಾರೆ. ಈ ನಿವಾಸವು ಬಕಿಂಗ್ಹ್ಯಾಮ್ ಅರಮನೆಗಿಂತ ನಾಲ್ಕು ಪಟ್ಟು ದೊಡ್ಡದಾಗಿದ್ದು, ವಸ್ತುಸಂಗ್ರಹಾಲಯ, ಗಾಲ್ಫ್ ಕೋರ್ಸ್ ಮತ್ತು ವಿಸ್ತಾರವಾದ, ಭವ್ಯವಾದ ಮೈದಾನಗಳನ್ನು ಹೊಂದಿದೆ. ಸದ್ಯ ಸಮರ್ಜಿತ್ ಸಿಂಹ್ ಗಾಯ್ಕ್’ವಾಡ್ ರಾಜರಾಗಿದ್ದಾರೆ.
ಮೇವರ್ ರಾಜವಂಶಸ್ಥರು
ಐದನೇ ಸ್ಥಾನದಲ್ಲಿರುವ ಮೇವರ್ ರಾಜವಂಶಸ್ಥರ ಆಸ್ತಿ ಮೌಲ್ಯ 10,000 ಕೋಟಿ. ಮಹಾರಾಜ ಲಕ್ಷರಾಜಸಿಂಹ ಮೇವರ್ ಇಂದಿನ ಮಹಾರಾಜರಾಗಿದ್ದಾರೆ. ಅವರು ರಾಯಲ್ ಟ್ರಸ್ಟ್ಗಳು, ಪರಂಪರೆಯ ಆಸ್ತಿಗಳು ಮತ್ತು ಸಾಂಸ್ಕೃತಿಕ ಉಪಕ್ರಮಗಳನ್ನು ನೋಡಿಕೊಳ್ಳುತ್ತಾರೆ.
ಒಡೆಯರ್ ರಾಜವಂಶಸ್ಥರು
ಆರನೇ ಸ್ಥಾನದಲ್ಲಿ ಮೈಸೂರಿನ ಒಡೆಯರ್ ರಾಜವಂಶಸ್ಥರಿದ್ದಾರೆ. ಇವರ ಆಸ್ತಿ ಮೌಲ್ಯ 10,000 ಕೋಟಿ. ಸದ್ಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಾಂಕೇತಿಕ ಮಹಾರಾಜರಾಗಿದ್ದಾರೆ. ಐತಿಹಾಸಿಕ ಮೈಸೂರು ಅರಮನೆ ಮತ್ತು ಬೆಂಗಳೂರು ಅರಮನೆಯ ಪಾಲನೆ, ಪ್ರವಾಸೋದ್ಯಮ, ದೇವಾಲಯ ಟ್ರಸ್ಟ್ಗಳು ಮತ್ತು ಮೈಸೂರು ರೇಷ್ಮೆ ಉದ್ಯಮ ಸೇರಿದಂತೆ ಪಾರಂಪರಿಕ ಆಸ್ತಿಗಳು ಎಲ್ಲವೂ ಮೈಸೂರು ಒಡೆಯರ್ ಗೆ ಸೇರಿದ್ದು.
ತಿರುವಾಂಕೂರು ರಾಜವಂಶಸ್ಥರು
ತಿರುವಾಂಕೂರು ರಾಜವಂಶಸ್ಥರು ಏಳನೇ ಸ್ಥಾನದಲ್ಲಿದ್ದಾರೆ. ಇವರ ಆಸ್ತಿ ಮೌಲ್ಯ 10,000 ಕೋಟಿ. ಮೂಲಂ ತಿರುನಾಲ್ ರಾಮವರ್ಮ ಇಂದಿನ ಮಹಾರಾಜರು. ಶ್ರೀ ಪದ್ಮನಾಭಸ್ವಾಮಿ ದೇವಾಲಯದ ಪಾಲನಾ ಕರ್ತವ್ಯಗಳನ್ನು ಕುಟುಂಬವು ಉಳಿಸಿಕೊಂಡಿದೆ.
ಅಲ್ಸಿಸರ್ ರಾಜವಂಶಸ್ಥರು
ರಾಜಸ್ಥಾನದ ಖೇತ್ರಿ ರಾಜ್ಯದ ಆಡಳಿತ ಮಾಡಿದವರು ಅಲ್ಸಿಸರ್ ರಾಜವಂಶಸ್ಥರು. ಅಭಿಮನ್ಯು ಸಿಂಗ್ ಅಲ್ಸಿಸರ್ ನೇತೃತ್ವದ ಈ ಕುಟುಂಬವು ಅಲ್ಸಿಸರ್ ಮಹಲ್ ಮತ್ತು ನಹರ್ಗಢ ಕೋಟೆ ಸೇರಿದಂತೆ ಐಷಾರಾಮಿ ಪರಂಪರೆಯ ಹೋಟೆಲ್ಗಳಿಂದ ಮತ್ತು ಮ್ಯಾಗ್ನೆಟಿಕ್ ಫೀಲ್ಡ್ಸ್ ಸಂಗೀತ ಉತ್ಸವವನ್ನು ಆಯೋಜಿಸುವ ಮೂಲಕ ತಮ್ಮ ಸಂಪತ್ತನ್ನು ಗಳಿಸುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.

