- Home
- Business
- Gold Silver: ಸಂಬಳ ಆಗ್ತಿದ್ದಂತೆ ಚಿನ್ನ ಖರೀದಿಸೋ ಪ್ಲಾನ್ ಇದ್ಯಾ? ಇಂದು 1 ಗ್ರಾಂ ಬಂಗಾರದ ಬೆಲೆ ಎಷ್ಟಿದೆ?
Gold Silver: ಸಂಬಳ ಆಗ್ತಿದ್ದಂತೆ ಚಿನ್ನ ಖರೀದಿಸೋ ಪ್ಲಾನ್ ಇದ್ಯಾ? ಇಂದು 1 ಗ್ರಾಂ ಬಂಗಾರದ ಬೆಲೆ ಎಷ್ಟಿದೆ?
Gold And Silver Price Today: ಶ್ರಾವಣ ಮಾಸದಲ್ಲಿ ಚಿನ್ನ ಖರೀದಿ ಭರಾಟೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆಗಳ ಮಾಹಿತಿ ಇಲ್ಲಿದೆ. 22 ಮತ್ತು 24 ಕ್ಯಾರಟ್ ಚಿನ್ನದ ದರಗಳನ್ನು ಪ್ರಮುಖ ನಗರಗಳಲ್ಲಿ ಹೋಲಿಸಲಾಗಿದೆ.

ಸದ್ಯ ಶ್ರಾವಣ ಮಾಸ ಆರಂಭವಾಗಿದ್ದು, ವರಮಹಾಲಕ್ಷ್ಮೀ ಪೂಜೆಗೆ ಕಲೆವರು ಕನಿಷ್ಠ 1 ಗ್ರಾಂನಷ್ಟಾದ್ರೂ ಚಿನ್ನವನ್ನು ಖರೀದಿಸುತ್ತಾರೆ. ಹಾಗಾಗಿ ಸಂಬಳ ಆಗುತ್ತಿದ್ದಂತೆ ಚಿನ್ನ ಖರೀದಿಗೆ ಪ್ಲಾನ್ ಮಾಡಿಕೊಂಡಿರುತ್ತಾರೆ. ನೀವು ಸಹ ಚಿನ್ನ ಖರೀದಿಗೆ ಯೋಚಿಸಿದ್ರೆ ಇಂದಿನ ಬೆಲೆ ಎಷ್ಟಿದೆ ಎಂದು ತಿಳಿದುಕೊಳ್ಳಿ.
ಪ್ರತಿದಿನ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತವಾಗುತ್ತಿರುತ್ತದೆ. ಚಿನ್ನ ಖರೀದಿಗೂ ಮುನ್ನ ಇಂದಿನ ಬೆಲೆ ಎಷ್ಟು ಎಂಬುದರ ಕುರಿತು ತಿಳಿದುಕೊಳ್ಳಿ. ಇಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,295 ರೂಪಾಯಿ
8 ಗ್ರಾಂ: 74,360 ರೂಪಾಯಿ
10 ಗ್ರಾಂ: 92,950 ರೂಪಾಯಿ
100 ಗ್ರಾಂ: 9,29,500 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 10,140 ರೂಪಾಯಿ
8 ಗ್ರಾಂ: 81,120 ರೂಪಾಯಿ
10 ಗ್ರಾಂ: 1,01,400 ರೂಪಾಯಿ
100 ಗ್ರಾಂ: 10,14,000 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 92,950 ರೂಪಾಯಿ, ದೆಹಲಿ: 93,100 ರೂಪಾಯಿ, ಮುಂಬೈ: 92,950 ರೂಪಾಯಿ, ಕೋಲ್ಕತ್ತಾ: 92,950 ರೂಪಾಯಿ, ಬೆಂಗಳೂರು: 92,950 ರೂಪಾಯಿ, ಅಹಮದಾಬಾದ್: 93,000 ರೂಪಾಯಿ, ವಡೋದರ: 93,000 ರೂಪಾಯಿ, ಹೈದರಾಬಾದ್: 92,950 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಇಂದು ಹೂಡಿಕೆದಾರರು ಬೆಳ್ಳಿ ಮೇಲೆ ಹೂಡಿಕೆ ಮಾಡಲು ಮುಂದಾಗುತ್ತಿದ್ದಾರೆ. ಈ ಕಾರಣದಿಂದಾಗಿ ಬೆಳ್ಳಿಯೂ ಸಹ ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ. 1 ಕೆಜಿ ಬೆಳ್ಳಿ ಬೆಲೆ 1 ಲಕ್ಷ ರೂಪಾಯಿಗೂ ಅಧಿಕವಾಗಿ ತಿಂಗಳುಗಳೇ ಕಳೆದಿವೆ. ಇಂದಿನ ಬೆಳ್ಳಿ ದರ ಎಷ್ಟಿದೆ ಎಂದು ನೋಡೋಣ ಬನ್ನಿ.
10 ಗ್ರಾಂ: 1,130 ರೂಪಾಯಿ
100 ಗ್ರಾಂ: 11,300 ರೂಪಾಯಿ
1000 ಗ್ರಾಂ: 1,13,000 ರೂಪಾಯಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

