ನಂಗೆ ಫಹಾದ್ ಫಾಸಿಲ್ ಆಕ್ಟಿಂಗ್ ಇಷ್ಟ: ಕಾನ್ಸ್‌ನಲ್ಲಿ ಆಲಿಯಾ ಭಟ್ ಹೇಳಿಕೆ
ಯಶ್‌ರಾಜ್ ಫಿಲಂಸ್ ಜೊತೆ ‘ಅಲ್ಛಾ’ ಹಾಗೂ ಸಂಜಯ್ ಲೀಲಾ ಬನ್ಸಾಲಿ ಅವರ ‘ಲವ್ ಆ್ಯಂಡ್ ವಾರ್’ ಸಿನಿಮಾದಲ್ಲಿ ಆಲಿಯಾ ನಟಿಸುತ್ತಿದ್ದಾರೆ.

ಬಾಲಿವುಡ್ ನಟಿ ಆಲಿಯಾ ಭಟ್ ದಕ್ಷಿಣ ಭಾರತದ ಖ್ಯಾತ ನಟ ಫಹಾದ್ ಫಾಸಿನ್ ನಟನೆಯನ್ನು ಹಾಡಿ ಹೊಗಳಿದ್ದಾರೆ.
ಕಾನ್ಸ್ ಅಂತಾರಾಷ್ಟ್ರೀಯ ಸಿನಿಮೋತ್ಸವದ ಕೊನೆಯ ದಿನ ಮಾಧ್ಯಮ ಸಂದರ್ಶನದಲ್ಲಿ, ನಂಗೆ ಮಲಯಾಳಂ ಮೂಲದ ನಟ ಫಹಾದ್ ಫಾಸಿಲ್ ನಟನೆ ಬಹಳ ಇಷ್ಟ.
ಅವರ ಆವೇಶಂ ಸಿನಿಮಾ ನನ್ನ ಫೇವರಿಟ್‌ಗಳಲ್ಲೊಂದು. ಊಹೆಯನ್ನೂ ಮೀರಿದ ನಟನೆ ಅವರದು. ಮುಂದೆ ಅವರೊಂದಿಗೆ ನಟಿಸುವ ದಿನಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
ಸದ್ಯ ಯಶ್‌ರಾಜ್ ಫಿಲಂಸ್ ಜೊತೆ ‘ಅಲ್ಛಾ’ ಹಾಗೂ ಸಂಜಯ್ ಲೀಲಾ ಬನ್ಸಾಲಿ ಅವರ ‘ಲವ್ ಆ್ಯಂಡ್ ವಾರ್’ ಸಿನಿಮಾದಲ್ಲಿ ಆಲಿಯಾ ನಟಿಸುತ್ತಿದ್ದಾರೆ.
ಅದಷ್ಟೇ ಅಲ್ಲ, ಮಲಯಾಳಂ ಸಿನಿಮಾಗಳ ಬಗ್ಗೆ ಆಲಿಯಾ ಮೆಚ್ಚುಗೆ ವ್ಯಕ್ತಪಡಿಸಿದರು. ಆಗ ‘ಡಾರ್ಲಿಂಗ್ಸ್’ ಎಂಬ ಸಿನಿಮಾದಲ್ಲಿ ಮಲಯಾಳಂ ನಟ ರೋಷನ್ ಮ್ಯಾಥ್ಯು ಅವರೊಂದಿಗೆ ನಟಿಸಿದ್ದೆ. ಅವರು ಅದ್ಭುತ ಪ್ರತಿಭೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

