ಟೀಕೆಗಳು ನನ್ನನ್ನು ನೋಯಿಸುತ್ತವೆ, ನಾನೂ ಮನುಷ್ಯಳು: ರಶ್ಮಿಕಾ ಮಂದಣ್ಣ
ನಾನೊಬ್ಬ ನಟಿಯಾಗುತ್ತೇನೆ ಅಂತ ಅಂದುಕೊಂಡಿರಲೇ ಇಲ್ಲ. ಆದರೆ ಬದುಕು ಅದನ್ನು ಸಾಧ್ಯವಾಗಿಸಿತು. 8 ವರ್ಷಗಳಿಂದ ಮನರಂಜನಾ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದೇನೆ.

ಟೀಕೆಗಳು ನನ್ನನ್ನು ನೋಯಿಸುತ್ತವೆ, ನಾನೂ ಮನುಷ್ಯಳು. ಆದರೆ ನನ್ನ ಬೆಳವಣಿಗೆ, ನನಗೆ ಸಿಕ್ಕಿರುವ ಬೆಂಬಲ ನಾನು ಸರಿಯಾದ ದಾರಿಯಲ್ಲೇ ನಡೆಯುತ್ತಿದ್ದೇನೆ ಎಂಬುದನ್ನು ಮನದಟ್ಟು ಮಾಡುತ್ತದೆ ಎಂದು ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ನಾನೊಬ್ಬ ನಟಿಯಾಗುತ್ತೇನೆ ಅಂತ ಅಂದುಕೊಂಡಿರಲೇ ಇಲ್ಲ. ಆದರೆ ಬದುಕು ಅದನ್ನು ಸಾಧ್ಯವಾಗಿಸಿತು. 8 ವರ್ಷಗಳಿಂದ ಮನರಂಜನಾ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದೇನೆ.
ಈ ವರ್ಷಗಳಲ್ಲಿ ನಾನು ಯಾವುದು ಬೊಗಳೆ, ಯಾವುದು ರಚನಾತ್ಮಕ ಟೀಕೆ ಅರಿಯಲು ಪ್ರಯತ್ನಿಸುತ್ತಿದ್ದೇನೆ. ವಸ್ತುನಿಷ್ಠ ವಿಮರ್ಶೆಗಳು ನನ್ನ ನಟನೆಯನ್ನು, ಬದುಕನ್ನು ತಿದ್ದುತ್ತಿವೆ. ಅಹಂಕಾರ ನನ್ನತ್ತ ಸುಳಿಯದಂತೆ ಮಾಡುತ್ತಿವೆ ಎಂದು ರಶ್ಮಿಕಾ ಹೇಳಿದ್ದಾರೆ.
ಇಷ್ಟಾಗಿಯೂ ಟೀಕೆಗಳು ನನ್ನನ್ನು ಕೊಂಚವೂ ಅಲುಗಾಡಿಸುವುದಿಲ್ಲ ಎನ್ನಲಾರೆ, ಏಕೆಂದರೆ ನಾನೂ ಮನುಷ್ಯಳು. ಹಲವು ಬಾರಿ ಟೀಕೆಗಳು ನನ್ನನ್ನು ನೋಯಿಸಿವೆ.
ಆದರೆ ನಾನು ನಟನಾ ವೃತ್ತಿಯಲ್ಲಿ ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂಬುದೇ ಇದೆಲ್ಲವನ್ನೂ ಮೀರಿ ನಾನು ಸರಿಯಾದ ದಾರಿಯಲ್ಲಿದ್ದೇನೆ ಎಂಬ ಆತ್ಮವಿಶ್ವಾಸ ಬೆಳೆಸುತ್ತದೆ. ಜೊತೆಗೆ ನನಗೆ ಸಿಗುತ್ತಿರುವ ಬೆಂಬಲ ನನ್ನನ್ನು ಮುನ್ನಡೆಸುತ್ತಿದೆ.
ನೀವು ನನ್ನ ನಟನೆಯನ್ನು ವಿಮರ್ಶಿಸಿ, ತಪ್ಪಿದ್ದರೆ ಹೇಳಿ. ಅರಿತುಕೊಂಡು ಬೆಳೆಯುತ್ತೇನೆ. ಒಂದಂತೂ ನಿಜ, ನನ್ನ ಬೆಳವಣಿಗೆ ನಿರಂತರ, ಟೀಕೆಗಳಿಗೆ ಹೆದರಿ ಈ ಬೆಳವಣಿಗೆ ನಿಲ್ಲೋದಿಲ್ಲ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

