ಚಾಹಲ್ ಜೊತೆ ಡಿವೋರ್ಸ್ ಬಳಿಕ ಐಟಂ ಸಾಂಗ್ ಮೂಲಕ ಕಿಚ್ಚು ಹಚ್ಚಿದ ಧನಶ್ರೀ ವರ್ಮಾ
ರಾಜ್‌ಕುಮಾರ್ ರಾವ್ ಅಭಿನಯದ 'ಭೂಲ್ ಚೂಕ್ ಮಾಫ್' ಚಿತ್ರದ ಹೊಸ ಹಾಡಿನಲ್ಲಿ, ಡ್ಯಾನ್ಸರ್ ಹಾಗೂ ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಸೊಂಟ ಬಳುಕಿಸುವ ಮೂಲಕ ಕಿಚ್ಚು ಹಚ್ಚಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಡ್ಯಾನ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುವ ಡ್ಯಾನ್ಸರ್ ಹಾಗೂ ನೃತ್ಯ ಸಂಯೋಜಕಿ ಧನಶ್ರೀ ವರ್ಮಾ (Dhanashree Verma) ತಮ್ಮ ಅಭಿಮಾನಿಗಳಿಗೆ ದೊಡ್ಡ ಸಪ್ರೈಸ್ ನೀಡಿದ್ದಾರೆ.
ಇತ್ತೀಚೆಗೆ ರಾಜಕುಮಾರ್ ರಾವ್(Rajkumar Rao) ಅಭಿನಯದ 'ಭೂಲ್ ಚೂಕ್ ಮಾಫ್' ಚಿತ್ರದ ನಿರ್ಮಾಪಕರು ಚಿತ್ರದ ಹೊಸ ಹಾಡನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಧನಶ್ರೀ ವರ್ಮಾ ತಮ್ಮ ಐಟಂ ಡ್ಯಾನ್ಸ್ ಮೂಲಕ, ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾರೆ.
ರಾಜ್‌ಕುಮಾರ್ ರಾವ್ ಮತ್ತು ವಾಮಿಕಾ ಗಬ್ಬಿ (Vamika Gabbi) ನಟಿಸಿರುವ 'ಭೂಲ್ ಚೂಕ್ ಮಾಫ್' ಚಿತ್ರದ ನಾಲ್ಕನೇ ಹಾಡು ಮಂಗಳವಾರ ಬಿಡುಗಡೆಯಾಗಿದೆ. ಈ ಹಾಡಿನ ಹೆಸರು 'ಟಿಂಗ್ ಲಿಂಗ್ ಸಜ್ನಾ'. ಈ ಐಟಂ ಹಾಡಿನಲ್ಲಿ ಧನಶ್ರೀ ವರ್ಮಾ ಅದ್ಭುತವಾಗಿ ನೃತ್ಯ ಮಾಡಿದ್ದಾರೆ.
ಈ ಹಾಡಿನಲ್ಲಿ ನಟ ರಾಜ್‌ಕುಮಾರ್ ರಾವ್ ಅವರೊಂದಿಗೆ ಧನಶ್ರೀ ಹೆಜ್ಜೆ ಹಾಕಿದ್ದಾರೆ (Item Dance), ಬ್ಯಾಚುಲರ್ ಸರ್ಪ್ರೈಸ್ ಪಾರ್ಟಿಯ ಹಾಡು ಇದ್ದಾಗಿದ್ದು, ಪಾರ್ಟಿಯನ್ನು ಎಂಜಾಯ್ ಮಾಡಲು ಹೋಗುವ ಧನಶ್ರೀ, ನಂತರ ಹಾಡಿಗೆ ಸೊಂಟ ಬಳುಕಿಸುವ ದೃಶ್ಯ ಇದೆ.
ಈ ಹಾಡಿನಲ್ಲಿ ಧನಶ್ರೀ ಕೆಂಪು ಸ್ಲೀವ್ ಲೆಸ್ ಡ್ರೆಸ್ ಧರಿಸಿದ್ದು, ಅವರ ಡ್ಯಾನ್ಸ್ ಮೂವ್ ಲ್ಲಿದ್ದ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡೋದು ಸುಳ್ಳಲ್ಲ. ಈ ಹಾಡನ್ನು ತನಿಷ್ಕ್ ಬಾಗ್ಚಿ ಮತ್ತು ಮಧುವಂತಿ ಬಾಗ್ಚಿ ಹಾಡಿದ್ದು, ಸಾಹಿತ್ಯವನ್ನು ಇರ್ಷಾದ್ ಕಾಮಿಲ್ ಬರೆದಿದ್ದಾರೆ.
ಕರಣ್ ಶರ್ಮಾ (Karan Sharma) ನಿರ್ದೇಶನದ 'ಭೂಲ್ ಚೂಕ್ ಮಾಫ್' ಚಿತ್ರ ಮೇ 09 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ರಾಜ್‌ಕುಮಾರ್ ರಾವ್ ಮತ್ತು ವಾಮಿಕಾ ಗಬ್ಬಿ ಜೊತೆಗೆ, ಸೀಮಾ ಪಹ್ವಾ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ. ಇದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದೆ.
ಡ್ಯಾನ್ಸರ್ ಧನಶ್ರೀ ವರ್ಮಾ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಡ್ಯಾನ್ಸ್ ಮೂಲಕವೇ ಸದ್ದು ಮಾಡಿದ್ದ ಈ ಬ್ಯೂಟಿ, ಬಳಿಕ ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ (Yajuvendra Chahal) ಅವರಿಂದ ವಿಚ್ಛೇದನ ಪಡೆದು ಸುದ್ದಿಯಲ್ಲಿದ್ದರು.
ಇದೀಗ 'ಭೂಲ್ ಚೂಕ್ ಮಾಫ್' ಚಿತ್ರದ ಈ ಹಾಡಿಗೆ ಐಟಂ ಡ್ಯಾನ್ಸ್ ಮಾಡುವ ಮೂಲಕ ಧನಶ್ರೀ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಇದಕ್ಕೂ ಮೊದಲು, ನಟಿ 'ಬಲ್ಲೆ ನಿ ಬಲ್ಲೆ' ಚಿತ್ರದ 'ದೇಖಾ ಜಿ ದೇಖಾ ಮೈನೆ' ಹಾಡಿನಲ್ಲಿ ಅಪರ್ಶಕ್ತಿ ಖುರಾನಾ ಜೊತೆ ಹೆಜ್ಜೆ ಹಾಕಿದ್ದರು.
ವರದಿಗಳ ಪ್ರಕಾರ, ಮುಂಬರುವ ದಿನಗಳಲ್ಲಿ, ಧನಶ್ರೀ ವರ್ಮಾ ತೆಲುಗು ಚಿತ್ರ 'ಆಕಾಶಮ್ ದಾಟಿ' ಮೂಲಕ ತಮ್ಮ ನಟನೆಯನ್ನು ಸಹ ಪ್ರದರ್ಶಿಸೋದಕ್ಕೆ ರೆಡಿಯಾಗುತ್ತಿದ್ದಾರೆ. ಉತ್ತರ ಭಾರತದ ಈ ಬ್ಯೂಟಿ ಸದ್ಯದಲ್ಲೇ ದಕ್ಷಿಣದಲ್ಲಿ ಸದ್ದು ಮಾಡೋದಕ್ಕೆ ರೆಡಿಯಾಗ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

