- Home
- Entertainment
- Cine World
- ಮನೆಗೆ ಬಂದವ್ರಿಗೆ ನಾನು ಇದ್ದರೂ ಊಟ ಹಾಕಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಗೆ ಇಂಥ ಬುದ್ಧಿ ಯಾಕೆ?
ಮನೆಗೆ ಬಂದವ್ರಿಗೆ ನಾನು ಇದ್ದರೂ ಊಟ ಹಾಕಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಗೆ ಇಂಥ ಬುದ್ಧಿ ಯಾಕೆ?
ಮನೆಗೆ ಅತಿಥಿಗಳು ಬಂದರೆ ಊಟ ಹಾಕಿ ಕಳುಹಿಸುವುದು ನಮ್ಮ ಸಂಪ್ರದಾಯ. ಆದರೆ, ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾತ್ರ ತಮ್ಮ ಮನೆಗೆ ಬಂದವರಿಗೆ ಊಟ ಹಾಕುವುದಿಲ್ಲವಂತೆ. ಯಾಕೆ ಗೊತ್ತಾ?

ವಿವಾದಗಳಿಗೆ ಕೇರ್ ಆಫ್ ಅಡ್ರೆಸ್ RGV
ಭಾರತೀಯ ಚಿತ್ರರಂಗದಲ್ಲಿ ಟ್ರೆಂಡ್ ಸೆಟ್ಟರ್ ಆಗಿದ್ದ ವರ್ಮಾ, ಅನೇಕ ವಿವಾದಾತ್ಮಕ ಚಿತ್ರಗಳನ್ನು ಮಾಡಿ ಟೀಕೆಗೆ ಗುರಿಯಾಗಿದ್ದರು. ಒಂದು ಕಾಲದಲ್ಲಿ ಅದ್ಭುತ ಸಿನಿಮಾಗಳಿಂದ ದೇಶಾದ್ಯಂತ ಹೆಸರು ಮಾಡಿದ್ದ ಆರ್ಜಿವಿ, ನಂತರ ರಾಜಕೀಯ ಹಾಗೂ ಗ್ಲಾಮರ್ ಚಿತ್ರಗಳಿಂದ ತಮ್ಮ ಇಮೇಜ್‌ಗೆ ಧಕ್ಕೆ ತಂದುಕೊಂಡರು.
ಟ್ರೆಂಡ್ ಸೆಟ್ಟರ್
ಹಿಂದೆಲ್ಲಾ ಆರ್ಜಿವಿ ಯಾವುದೇ ಕಾಮೆಂಟ್ ಮಾಡಿದರೂ ಅದು ದೊಡ್ಡ ವಿವಾದಕ್ಕೆ ಕಾರಣವಾಗುತ್ತಿತ್ತು. ಅವರು ಇದ್ದದ್ದನ್ನು ಇದ್ದ ಹಾಗೆ ನೇರವಾಗಿ ಮಾತನಾಡುತ್ತಾರೆ. ಯಾರು ಏನೇ ಹೇಳಿದರೂ ತಲೆಕೆಡಿಸಿಕೊಳ್ಳುವುದಿಲ್ಲ. ಸಂದರ್ಶನವೊಂದರಲ್ಲಿ ತಮ್ಮ ವಿಚಿತ್ರ ಹವ್ಯಾಸವೊಂದರ ಬಗ್ಗೆ ಹೇಳಿ ಎಲ್ಲರಿಗೂ ಶಾಕ್ ನೀಡಿದ್ದರು.
ಊಟ ಇದ್ರೂ ಹಾಕಲ್ಲ
ರಾಮ್ ಗೋಪಾಲ್ ವರ್ಮಾ ಅವರ ಮನೆ ಅಥವಾ ಕಚೇರಿಗೆ ಯಾರೇ ಹೋದರೂ, ಅಲ್ಲಿ ಉಪಚಾರವನ್ನು ನಿರೀಕ್ಷಿಸುವಂತಿಲ್ಲ. ಯಾರು ಬಂದರೂ ಅವರು 'ಊಟ ಮಾಡಿ' ಎಂದು ಕೇಳುವುದಿಲ್ಲ. ಈ ಬಗ್ಗೆ ಸಂದರ್ಶನವೊಂದರಲ್ಲಿ ವರ್ಮಾ ಅವರೇ ಹೇಳಿಕೊಂಡಿದ್ದಾರೆ. 'ನನ್ನ ಬಳಿ ಯಾರು ಬಂದರೂ ಊಟ ಮಾಡಲು ಕೇಳುವುದಿಲ್ಲ. ಮನೆಯಲ್ಲಿ ಊಟ ಇದ್ದರೂ ಹಾಕುವುದಿಲ್ಲ' ಎಂದಿದ್ದಾರೆ.
ಯಾಕೆ ಊಟ ಹಾಕಲ್ಲ?
'ನನಗೆ ಮಾತ್ರ ಅನ್ನ ಅಷ್ಟೇ ಇದೆ ಎಂದು ಹೇಳಿಬಿಡುತ್ತೇನೆ. ಬಂದವರಿಗೆ ಊಟ ಬಡಿಸುವುದು, ಅವರು ತಿನ್ನುವಾಗ ಬರುವ ಶಬ್ದಗಳು ನನಗೆ ಇಷ್ಟವಾಗುವುದಿಲ್ಲ. ಅದಕ್ಕಾಗಿಯೇ ನಾನು ಯಾರಿಗೂ ಅಂತಹ ಆಫರ್ ನೀಡುವುದಿಲ್ಲ' ಎಂದು ರಾಮ್ ಗೋಪಾಲ್ ವರ್ಮಾ ಖಡಾಖಂಡಿತವಾಗಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

