- Home
- Entertainment
- Cine World
- ಕರಣ್ ಜೋಹರ್ ಮನೆಯ ಗೆಟ್ ಟು ಗೆದರ್: ತಡರಾತ್ರಿಯಲ್ಲಿ ಕಾಣಿಸಿಕೊಂಡ ಸ್ಟಾರ್ ಕಿಡ್ಸ್
ಕರಣ್ ಜೋಹರ್ ಮನೆಯ ಗೆಟ್ ಟು ಗೆದರ್: ತಡರಾತ್ರಿಯಲ್ಲಿ ಕಾಣಿಸಿಕೊಂಡ ಸ್ಟಾರ್ ಕಿಡ್ಸ್
ಬಾಲಿವುಡ್ ಉದ್ಯಮದಲ್ಲಿ ಕರಣ್ ಜೋಹರ್ (Karan Johar) ಸ್ಟಾರ್ ಕಿಡ್ಸ್ ಲಾಂಚ್ ಮಾಡುವ ಕಾರಣಕ್ಕೆ ಯಾವಾಗಲೂ ಸುದ್ದಿಯಲ್ಲಿ ಇರುತ್ತಾರೆ. ಅದೇ ರೀತಿ ಕರಣ್ ತಮ್ಮ ಮನೆಯಲ್ಲಿ ಗ್ರ್ಯಾಂಡ್ ಪಾರ್ಟಿಗಳನ್ನು ಆಯೋಜಿಸುವ ಸಲುವಾಗಿಯೂ ಸಖತ್ ಫೇಮಸ್. ಕಳೆದ ರಾತ್ರಿ ಅವರು ಬಾಲಿವುಡ್‌ನ ಸ್ಟಾರ್ ಮಕ್ಕಳಿಗಾಗಿ ಒಂದು ಗೆಟ್ ಟುಗೆದರ್ ಹಮ್ಮಿಕೊಂಡಿದ್ದು ಖುಷಿ ಕಪೂರ್, ಶನಯಾ ಕಪೂರ್, ಅಗಸ್ತ್ಯ ನಂದಾ, ನವ್ಯಾ ನವೇಲಿ ನಂದಾ, ಅನನ್ಯ ಪಾಂಡೆ, ಆದಿತ್ಯ ರಾಯ್ ಕಪೂರ್, ಜಾನ್ವಿ ಕಪೂರ್ ಮುಂತಾದವರು ತಡ ರಾತ್ರಿಯಲ್ಲಿ ಕರಣ್ ಮನೆಯಿಂದ ಹೊರಬಿದ್ದ ಸಮಯದಲ್ಲಿ ಕ್ಯಾಮರಾಗೆ ಸಿಕ್ಕಿದ್ದಾರೆ.

ಕಳೆದ ರಾತ್ರಿ ಬಾಲಿವುಡ್ ಫೇಮಸ್ ಚಿತ್ರ ನಿರ್ಮಾಪಕ ಕರಣ್ ಜೋಹರ್ ಸೋಮವಾರ ರಾತ್ರಿ ತಮ್ಮ ಮುಂಬೈ ನಿವಾಸದಲ್ಲಿ ಬಾಲಿವುಡ್ ಸ್ಟಾರ್ ಕಿಡ್ಸ್‌ಗೆ ಆತಿಥ್ಯ ನೀಡಿದರು. ಆದರೆ ಈ ಪಾರ್ಟಿ ಯಾವ ಕಾರಣಕ್ಕೆ ಎಂದು ತಿಳಿದಿಲ್ಲ.
ಅನನ್ಯಾ ಪಾಂಡೆ ಅವರನ್ನು ಸಹ ಕರಣ್ ಜೋಹರ್ ಅವರೇ ಲಾಂಚ್ ಮಾಡಿರುವುದು. ಧರ್ಮ ಪ್ರೊಡಕ್ಷನ್ಸ್‌ನ ಸ್ಟೂಡೆಂಟ್ ಆಫ್ ದಿ ಇಯರ್ 2 ಮೂಲಕ ಅನನ್ಯಾ ಬಾಲಿವುಡ್‌ಗೆ ಕಾಲಿಟ್ಟರು.
ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನಂದ ನವೇಲಿ ಸಹ ಕರಣ್ ಜೋಹರ್ ಆಯೋಜಿಸಿದ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ನವ್ಯಾ ಅವರ ಅಗಸ್ತ್ಯ ನಂದಾ ಕೂಡ ಜೋಯಾ ಅಖ್ತರ್ ಅವರ ದಿ ಆರ್ಚೀಸ್ ಮೂಲಕ ಬಾಲಿವುಡ್‌ಗೆ ಕಾಲಿಡಲಿದ್ದಾರೆ
ಶಾರುಖ್ ಖಾನ್ ಪುತ್ರಿ ಸುಹಾನ್ ಖಾನ್ ಸಹ ಈ ಸಮಯದಲ್ಲಿ ಕಾಣಿಸಿಕೊಂಡಿದ್ದಾರೆ. ಸುಹಾನಾ ಖಾನ್ ಮತ್ತು ಖುಷಿ ಕಪೂರ್ ಇಬ್ಬರೂ ಜೋಯಾ ಅಖ್ತರ್ ಅವರ ದಿ ಆರ್ಚೀಸ್ ಮೂಲಕ ಬಾಲಿವುಡ್‌ಗೆ ಕಾಲಿಡಲಿದ್ದಾರೆ.
ಖುಷಿ ಕಪೂರ್ ಈ ಗೆಟ್ ಟುಗೆದರ್‌ನಲ್ಲಿ ಹಾಜರಿದ್ದರು. ಖುಷಿ ಮತ್ತು ಅವರ ಕಸಿನ್ ಶನಯಾ ಕಪೂರ್ ಒಟ್ಟಿಗೆ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ.
ಸಂಜಯ್ ಮತ್ತು ಮಹೀಪ್ ಕಪೂರ್ ಅವರ ಪುತ್ರಿ ಶನಯಾ, ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿದ ಬೇಧಡಕ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.
ನಟ ಆದಿತ್ಯ ರಾಯ್ ಕಪೂರ್ ಸಹ ಕರಣ್ ಅವರ ಮನೆಯಂದ ಪಾರ್ಟಿ ಮುಗಿಸಿ ತಡರಾತ್ರಿ ಹೊರಡುವಾಗ ಕ್ಯಾಮರಾಗೆ ಕಾಣಿಸಿಕೊಂಡಿದ್ದು ಹೀಗೆ.
ಈ ನಡುವೆ ಜಾನ್ವಿ ಕಪೂರ್ ಮತ್ತು ಶಿಖರ್ ಪಹಾರಿಯಾ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಳ್ಳುವುದು ಕಾಮನ್ ಆಗಿದೆ. ಈಗ ಮತ್ತೊಮ್ಮ ಇಬ್ಬರು ಜೊತೆಯಾಗಿ ಕಾಣಿಸಿಕೊಂಡು ಅವರ ಅಫೇರ್ ರೂಮರ್ಸ್‌ಗೆ ಇನ್ನಷ್ಷು ಬಲ ಬಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.