- Home
- Entertainment
- Cine World
- 'ನನಗೆ ಡೈವೋರ್ಸ್ ಸಿಗೋದು ಪಕ್ಕಾ..' ನ್ಯಾಷನಲ್ ಕ್ರಶ್ ಗಿರಿಜಾ ಓಕ್ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್
'ನನಗೆ ಡೈವೋರ್ಸ್ ಸಿಗೋದು ಪಕ್ಕಾ..' ನ್ಯಾಷನಲ್ ಕ್ರಶ್ ಗಿರಿಜಾ ಓಕ್ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್
ಲಲ್ಲನ್‌ಟೋಪ್ ಪಾಡ್‌ಕಾಸ್ಟ್‌ನಿಂದ 'ನ್ಯಾಷನಲ್ ಕ್ರಶ್' ಎಂದು ಖ್ಯಾತರಾದ ನಟಿ ಗಿರಿಜಾ ಓಕ್, ಇದೀಗ ತಮ್ಮ ಹೊಸ ಫೋಟೋಶೂಟ್‌ನಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಬೀಚ್‌ನಲ್ಲಿ ತೆಗೆದ ಅವರ ಸುಂದರ ಫೋಟೋಗಳು ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆಯ ಸುರಿಮಳೆಗೈಯುತ್ತಿವೆ.

ನಟಿ ಗಿರಿಜಾ ಓಕ್ ತಮ್ಮ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ನೆಟಿಜನ್‌ಗಳಿಂದ ಸಾಕಷ್ಟು ಲೈಕ್‌ಗಳು ಮತ್ತು ಕಾಮೆಂಟ್‌ಗಳನ್ನು ಪಡೆಯುತ್ತಿದ್ದಾರೆ.
ಈ ಫೋಟೋಗಳಲ್ಲಿ ಗಿರಿಜಾ ಓಕ್ ಅವರ ಅವರ ಸರಳ ಆದರೆ ಆಕರ್ಷಕ ಸೌಂದರ್ಯ ನೆಟ್ಟಿಗರ ಗಮನ ಸೆಳೆಯುತ್ತಿದೆ.
ನಟಿ ಗಿರಿಜಾ ಓಕ್ ಅವರು ಇತ್ತೀಚೆಗೆ ಇಂಡಿಯಾ ಟುಡೇಯ ಮಾಲೀಕತ್ವದ ಲಲ್ಲನ್‌ಟೋಪ್‌ನ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದರು. ಅಂದಿನಿಂದ ಅವರು ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ.
ನೀಲಿ ಸೀರೆ ಧರಿಸಿ ಸಹಜ ಸೌಂದರ್ಯದಿಂದ ಗಮನಸೆಳೆದಿದ್ದ ಗಿರಿಜಾ ಓಕ್, ಅಂದಿನಿಂದ ದೊಡ್ಡ ಮಟ್ಟದಲ್ಲಿ ತಮ್ಮ ಫಾಲೋವರ್ಸ್ ಸಂಖ್ಯೆ ಏರಿಸಿಕೊಂಡಿದ್ದಾರೆ.
ನೀಲಿ ಸೀರೆ ಧರಿಸಿರುವ ಈ ನಟಿ ನಟಿ ಯಾರು ಎನ್ನುವ ಚರ್ಚೆಯೇ ಆಗ ಜೋರಾಗಿತ್ತು. ಇದರಿಂದಾಗಿ ಗಿರಿಜಾ ಓಕ್, ರಾತ್ರೋರಾತ್ರಿ ನ್ಯಾಷನಲ್ ಕ್ರಶ್ ಅನ್ನೋ ಪಟ್ಟ ಪಡೆದುಕೊಂಡಿದ್ದರು.
ಗಿರಿಜಾ ಮರಾಠಿ ಚಲನಚಿತ್ರೋದ್ಯಮದಲ್ಲಿ ಜನಪ್ರಿಯ ನಟಿಯಾಗಿದ್ದರೂ, ದೇಶಾದ್ಯಂತ ಅವರ ಬಗ್ಗೆ ತಿಳಿದಿಲ್ಲದ ಅನೇಕ ಜನರಿದ್ದಾರೆ.
ಆದರೆ, ಆ ಒಂದು ಕ್ಲಿಪ್‌ನಿಂದಾಗಿ ಅವರ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಆರಂಭವಾಗಿತ್ತು. ಅನೇಕ ಜನರು ಆಕೆಗೆ ಇನ್ಸ್‌ಟಾಗ್ರಾಮ್‌ನಲ್ಲಿ ಡಿಎಂ ಮಾಡಲು ಆರಂಭಿಸಿದ್ದರು.
ನ್ಯಾಷನಲ್ ಕ್ರಶ್ ಆಗಿರುವ ಗಿರಿಜಾ ಮತ್ತೊಮ್ಮೆ ಹೊಸ ಫೋಟೋಶೂಟ್ ಮೂಲಕ ನೆಟಿಜನ್‌ಗಳ ಗಮನ ಸೆಳೆದಿದ್ದಾರೆ. ಈ ಫೋಟೋಗಳಿಗೆ ಸಾಕಷ್ಟು ಉತ್ತಮ ಕಾಮೆಂಟ್ಸ್‌ಗಳೂ ಬಂದಿವೆ
ಗಿರಿಜಾ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅವರು ಬೀಚ್‌ನಲ್ಲಿ ಈ ಸುಂದರವಾದ ಫೋಟೋಶೂಟ್ ಮಾಡಿದ್ದಾರೆ.
ಗಿರಿಜಾ ಅವರ ಈ ಫೋಟೋಗಳಿಗೆ ಅಭಿಮಾನಿಗಳು ಲೈಕ್‌ಗಳು ಮತ್ತು ಕಾಮೆಂಟ್‌ಗಳ ಸುರಿಮಳೆಯೇ ಹರಿಸುತ್ತಿದ್ದಾರೆ. ಒಬ್ಬರು 'ಮರಾಠಿ ರಂಗಭೂಮಿಯ ರಾಣಿ' ಎಂದು ಹೇಳಿದ್ದಾರೆ.
ಮತ್ತೊಬ್ಬ ಯೂಸರ್ 'ಇದೇ ರೀತಿಯ ಫೋಟೋಗಳನ್ನು ನಾನು ನೋಡುತ್ತಿದ್ದರೆ, ನಾನು ವಿಚ್ಛೇದನ ಪಡೆಯುವ ಸಾಧ್ಯತೆ ಹೆಚ್ಚು' ಎಂಬಂತಹ ತಮಾಷೆಯ ಕಾಮೆಂಟ್ ಮಾಡಿದ್ದಾರೆ. ನಟಿ ಪ್ರಿಯಾ ಬಾಪತ್ 'ಆಹ್... ಸುಂದರ' ಎಂದು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

