- Home
- Entertainment
- Cine World
- ಒಜಿ ನಿರ್ದೇಶಕನಿಗೆ 3 ಕೋಟಿ ರೂ ಕಾರು ಗಿಫ್ಟ್ ಕೊಟ್ಟ ಪವನ್ ಕಲ್ಯಾಣ್, ಭಾವುಕರಾದ್ ಸುಜೀತ್
ಒಜಿ ನಿರ್ದೇಶಕನಿಗೆ 3 ಕೋಟಿ ರೂ ಕಾರು ಗಿಫ್ಟ್ ಕೊಟ್ಟ ಪವನ್ ಕಲ್ಯಾಣ್, ಭಾವುಕರಾದ್ ಸುಜೀತ್
ಒಜಿ ನಿರ್ದೇಶಕನಿಗೆ 3 ಕೋಟಿ ರೂ ಕಾರು ಗಿಫ್ಟ್ ಕೊಟ್ಟ ಪವನ್ ಕಲ್ಯಾಣ್, ನಟ, ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಉಡುಗೊರೆಯಾಗಿ ನೀಡಿದ್ದು ಯಾವ ಕಾರು? ನಿರ್ದೇಶಕ ಸುಜೀತ್ ಭಾವುಕರಾಗಿದ್ದೇಕೆ?

ನಿರ್ದೇಶಕನಿಗೆ ದುಬಾರಿ ಉಡುಗೊರೆ
ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಈ ವರ್ಷ ಎರಡು ಭಾರಿ ನಿರೀಕ್ಷೆಯ ಚಿತ್ರದಲ್ಲಿ ಸಿಹಿ ಕಹಿ ಕಂಡಿದ್ದಾರೆ. ಹರಿ ಹರ ವೀರ ಮಲ್ಲೂ ಸಿನಿಮಾ ಹಾಗೂ ದೆ ಕಾಲ್ ಹಿಮ್ ಒಜಿ ಸಿನಿಮಾ ಬಹು ನಿರೀಕ್ಷೆ ಸಿನಿಮಾ ಆಗಿತ್ತು. ಈ ಪೈಕಿ ದೆ ಕಾಲ್ ಹಿಮ್ ಒಜಿ ಸಿನಿಮಾ ಭಾರಿ ಯಶಸ್ಸ ಕಂಡಿದೆ. ಈ ಸಿನಿಮಾದ ಯಶಸ್ಸಿಗೆ ಪ್ರಮುಖ ಕಾರಣರಾದ ನಿರ್ದೇಶಕ ಸುಜೀತ್‌ಗೆ ಪವನ್ ಕಲ್ಯಾಣ್ ದುಬಾರಿ ಉಡುಗೊರೆ ನೀಡಿದ್ದಾರೆ.
ಲ್ಯಾಂಡ್ ರೋವರ್ ಡಿಫೆಂಡರ್ ಉಡುಗೊರೆ
ದೆ ಕಾಲ್ ಹಿಮ್ ಒಜಿ ಸಿನಿಮಾಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಸಿನಿಮಾ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಪವನ್ ಕಲ್ಯಾಣ್‌ಗೆ ಭರ್ಜರಿ ಯಶಸ್ಸು ಕೊಟ್ಟ ನಿರ್ದೇಶಕ ಸುಜೀತ್‌ಗೆ, ಲ್ಯಾಂಡ್ ರೋವರ್ ಡಿಫೆಂಡರ್ ಕಾರು ಉಡುಗೊರೆಯಾಗಿ ನೀಡಿದ್ದಾರೆ.
3 ಕೋಟಿ ರೂಪಾಯಿ ಬೆಲೆಯ ಕಾರು
ಲ್ಯಾಂಡ್ ರೋವರ್ ಡಿಫೆಂಡರ್ ಕಾರು ದುಬಾರಿ ಕಾರು. ಇದರ ಆರಂಭಿಕ ಬೆಲೆ 98 ಲಕ್ಷ ರೂಪಾಯಿ, ಗರಿಷ್ಠ ಬೆಲೆ 2.6 ಕೋಟಿ ರೂಪಾಯಿ (ಎಕ್ಸ್ ಶೋ ರೂಂ). ಇದರ ಆನ್‌ರೋಡ್ ಬೆಲೆ 3 ಕೋಟಿ ರೂಪಾಯಿ ಗಡಿ ದಾಟಲಿದೆ. ಈ ದುಬಾರಿ ಹಾಗೂ ಅತ್ಯಂತ ಆಕರ್ಷಕ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ.
ಸುಜೀತ್‌ಗೆ ಕಾರಿನ ಡೋರ್ ತೆರೆದುಕೊಟ್ಟ ಪವನ್ ಕಲ್ಯಾಣ್
ನಿರ್ದೇಶಕ ಸುಜೀತ್‌ಗೆ ಉಡುಗೊರೆ ನೀಡಿದ ಪವನ್ ಕಲ್ಯಾಣ್ ಕಾರಿನ ಡೋರ್ ತೆರೆದು ಸುಜೀತ್‌ನ ಡ್ರೈವರ್ ಸೀಟಿನಲ್ಲಿ ಕುಳ್ಳಿರಿಸಿದ್ದಾರೆ. ಸುಜೀತ್‌ಗೆ ಉಡುಗೊರೆ ಜೊತೆ ವಿಶೇಷ ಗೌರವ ನೀಡಿದ್ದರೆ. ಈ ಫೋಟೋಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಭಾವುಕರಾದ ಸುಜೀತ್
ಪವನ್ ಕಲ್ಯಾಣ್ ಉಡುಗೊರೆ ನೋಡಿ ನಿರ್ದೇಶಕ ಸುಜೀತ್ ಭಾವುಕರಾಗಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದಾರೆ. ನಾನು ಇಲ್ಲೀವರೆಗೆ ಪಡೆದ ಅತ್ಯುತ್ತಮ ಉಡುಗೊರೆ ಇದಾಗಿದೆ. ಮಾತು, ಪದಗಳಲ್ಲಿ ಹೇಳಲಾಗದಷ್ಟು ಭಾವುಕನಾಗಿದ್ದೇನೆ. ಜೊತೆಗೆ ಕೃತಜ್ಞತಾ ಭಾವದಲ್ಲಿದ್ದೇನೆ. ನನ್ನ ಅತ್ಯಂತ ಪ್ರೀತಿಯ ಒಜ ಕಲ್ಯಾಣ್‌ಗಾರು ನೀಡಿದ ಪ್ರೀತಿ, ಪ್ರೋತ್ಸಾಹ ಹೇಳಲು ಅಸಾಧ್ಯಯ. ಬಾಲ್ಯದಲ್ಲಿ ನಾನು ಅವರ ಅಭಿಮಾನಿಯಾಗಿದ್ದ ಕಾಲದಿಂದ ಈ ವಿಶೇಷ ಕ್ಷಣದ ವರೆಗಿನ ಪ್ರಯಾಣ ಅಮೂಲ್ಯ. ಜೀವನ ಪೂರ್ತಿ ಋಣಿಯಾಗಿರುತ್ತೇನೆ ಎಂದು ಸುಜೀತ್ ಹೇಳಿಕೊಂಡಿದ್ದಾರೆ.
ಭಾವುಕರಾದ ಸುಜೀತ್
ಡಿಸಿಎಂ-ಸಿನಿಮಾ ಸಂಪೂರ್ಣ ಬ್ಯೂಸಿ
ಪವನ್ ಕಲ್ಯಾಣ್ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದರ ಜೊತೆಗೆ ಸಿನಿಮಾದಲ್ಲೂ ತೊಡಗಿಸಿಕೊಂಡಿದ್ದಾರೆ. ಎರಡು ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪವನ್ ಕಲ್ಯಾಣ್ ಬ್ಯೂಸಿಯಾಗಿದ್ದಾರೆ. ಸದ್ಯ ಉಸ್ತಾದ್ ಭಗತ್ ಸಿಂಗ್ ಸಿನಿಮಾ ಶೂಟಿಂಗ್‌ನಲ್ಲೂ ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾ 2026ಕ್ಕೆ ಬಿಡುಗಡೆಯಾಗಲಿದೆ.
ಡಿಸಿಎಂ-ಸಿನಿಮಾ ಸಂಪೂರ್ಣ ಬ್ಯೂಸಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

