- Home
- Entertainment
- Sandalwood
- 45 Movie Trailer Release: ಚೆಲುವೆಯ ನೋಟ ಚೆನ್ನ..ಸಿನಿಮಾ ನೋಡಲೇಬೇಕು ಎಂದು ಸೈಕ್ ಮಾಡಿದ ಕಾರಣಗಳಿವು!
45 Movie Trailer Release: ಚೆಲುವೆಯ ನೋಟ ಚೆನ್ನ..ಸಿನಿಮಾ ನೋಡಲೇಬೇಕು ಎಂದು ಸೈಕ್ ಮಾಡಿದ ಕಾರಣಗಳಿವು!
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ 45 ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಇಷ್ಟುದಿನಗಳ ಸಂಗೀತ ನಿರ್ದೇಶನ ಮಾಡುತ್ತಿದ್ದ ಅರ್ಜುನ್ ಜನ್ಯ ಮೊದಲ ಬಾರಿಗೆ ಸಿನಿಮಾ ನಿರ್ದೇಶನಕ್ಕಿಳಿದಿದ್ದಾರೆ. ಈ ಸಿನಿಮಾ ಟ್ರೇಲರ್ ನೋಡಿ ಅನೇಕರು ಖುಷಿಪಟ್ಟಿದ್ದು, ಶಿವರಾಜ್‌ಕುಮಾರ್ ಲುಕ್‌ಗೆ ಕಳೆದು ಹೋಗಿದ್ದಾರೆ.

ಅರ್ಜುನ್ ಜನ್ಯ ನಿರ್ದೇಶನ
ಇಷ್ಟುದಿನಗಳ ಕಾಲ ಸಿನಿಮಾದಲ್ಲಿ ಸೂಪರ್ ಹಿಟ್ ಹಾಡುಗಳನ್ನು ಕೊಡುತ್ತಿದ್ದ ಅರ್ಜುನ್ ಜನ್ಯ ಈ ಬಾರಿ ನಿರ್ದೇಶಕರಾಗಿ ಕೆಲಸ ವಹಿಸಿಕೊಂಡಿದ್ದರು. ಎರಡು ವರ್ಷಗಳ ಕಾಲ ಸ್ಕ್ರಿಪ್ಟ್ ರೆಡಿ ಮಾಡಿ, ಅನಿಮೇಶನ್‌ನಲ್ಲಿ ಸಿನಿಮಾ ತೋರಿಸಿದರು. ಆಮೇಲೆ ರಾಜ್ ಬಿ ಶೆಟ್ಟಿ, ಉಪೇಂದ್ರ, ಶಿವರಾಜ್‌ಕುಮಾರ್ ಜೊತೆ ಸಿನಿಮಾ ಮಾಡೋಕೆ ಒಪ್ಪಿಸಿದ್ದರು.
ಭರ್ಜರಿ ವೀಕ್ಷಣೆ
ಈ ಸಿನಿಮಾ ಟ್ರೇಲರ್ ನೋಡಿದವರು ನಿಜಕ್ಕೂ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿ 1೪ ಗಂಟೆಗಳಲ್ಲಿ 19 ಲಕ್ಷ ವೀಕ್ಷಣೆ ಕಂಡಿದೆ. ಇದು ಸಣ್ಣ ವಿಷಯವಲ್ಲ.
ಉಪೇಂದ್ರ ಜಾನರ್ ಡೈಲಾಗ್
ಉಪೇಂದ್ರ ನಿರ್ದೇಶನದ ಸಿನಿಮಾಗಳಲ್ಲಿ ಡೈಲಾಗ್‌ಗಳು ಸಖತ್ ಆಗಿರುತ್ತವೆ, ನಮ್ಮನ್ನು ನಾವೇ ವಿಮರ್ಶೆ ಮಾಡಿಕೊಳ್ಳುವಂತಹ, ಆತ್ಮಾವಲೋಕನ ಮಾಡುವಂತಹ, ಫಿಲಾಸಫಿ ಡೈಲಾಗ್‌ಗಳು ಇರುತ್ತವೆ. ಉಪೇಂದ್ರ ಅವರ ನಟನೆ, ಪಾತ್ರ ಕೂಡ ವಿಭಿನ್ನ ಆಗಿರುತ್ತವೆ. ಹೀಗೆ ಇಲ್ಲಿ ಕೂಡ ಉಪೇಂದ್ರ ಜಾನರ್ ಪಾತ್ರ ಕಾಣುವುದು, ಡೈಲಾಗ್ ಕೂಡ ಇದೆ.
ಭರ್ಜರಿ ಆಕ್ಷನ್
ಈ ಸಿನಿಮಾದಲ್ಲಿ ಕಂಪ್ಲೀಟ್ ಆಕ್ಷನ್ ದೃಶ್ಯಗಳಿವೆ. ಇನ್ನು ಬೈಕ್, ಕಾರ್‌ಗಳನ್ನು ವಿಶೇಷವಾಗಿ ಡಿಸೈನ್ ಮಾಡಲಾಗಿದೆ. ಉಪೇಂದ್ರ, ಶಿವರಾಜ್‌ಕುಮಾರ್, ರಾಜ್ ಬಿ ಶೆಟ್ಟಿ ಅವರ ಫೈಟ್ ಸೀನ್ ಸಖತ್ ಆಗಿವೆ.
ಶಿವರಾಜ್‌ಕುಮಾರ್ ಲುಕ್
ಈ ಸಿನಿಮಾ ಟ್ರೇಲರ್‌ನಲ್ಲಿ ಕೊನೆಯಲ್ಲಿ ಜನರಿಗೆ ಸರ್ಪ್ರೈಸ್ ಎನಿಸುವಂತೆ ಶಿವರಾಜ್‌ಕುಮಾರ್ ಅವರು ಹುಡುಗಿ ಗೆಟಪ್‌ನಲ್ಲಿ ಕಾಣಿಸುತ್ತಾರೆ. ಭರತನಾಟ್ಯ ಲುಕ್‌ನಲ್ಲಿ ಶಿವರಾಜ್‌ಕುಮಾರ್ ಕಾಣಿಸುತ್ತಾರೆ. ಇದನ್ನು ನೋಡಿದವರೆಲ್ಲ ಕಂಗಾಲಾಗಿ ಹೋಗೋದರಲ್ಲಿ ಆಶ್ಚರ್ಯವೇ ಇಲ್ಲ. ಈ ಸಿನಿಮಾ ನೋಡಲು ಈ ಲುಕ್ ದೊಡ್ಡ ಕಾರಣ ಎಂದರೂ ತಪ್ಪಿಲ್ಲ.
ವೀಕ್ಷಕರು ಹೇಳಿದ್ದೇನು?
ಈ ಸಿನಿಮಾ ಟ್ರೇಲರ್‌ಗೆ ಸೋಶಿಯಲ್ ಮೀಡಿಯಾದಲ್ಲಿ 5500 ಕ್ಕಿಂತ ಹೆಚ್ಚಾಗಿ ಕಾಮೆಂಟ್‌ಗಳು ಬಂದಿವೆ.
- ಕನ್ನಡ ಸಿನಿಮಾದಲ್ಲಿ ಇತಿಹಾಸ ಬರೆಯುವ ಸಮಯ ಬಂದಿದೆ
- ಲೆಜೆಂಡರಿ ನಟ ಶಿವರಾಜ್‌ಕುಮಾರ್ ಈಗ ಹೆಣ್ಣಿನ ಪಾತ್ರ ಮಾಡ್ತಾರೆ ಎಂದರೆ ಸಣ್ಣ ವಿಷಯವಲ್ಲ
- ಈ ರೇಂಜ್‌ಗೆ ಟ್ರೇಲರ್ ಇರುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ
- ಟ್ರೇಲರ್ ಹೀಗೆ ಅಂದ್ರೆ ಸಿನಿಮಾ ಹೇಗಿರಬೇಡ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

