- Home
- Entertainment
- Cine World
- Amitabh Bachchan-Rekha: ಅಮಿತಾಭ್ ಜೊತೆ ಸಮಯ ಕಳೆಯೋದಕ್ಕೆ ಒಪ್ಪಿಕೊಂಡ ಸಿನಿಮಾನೆ ಕೈ ಬಿಟ್ಟಿದ್ರಾ ರೇಖಾ?
Amitabh Bachchan-Rekha: ಅಮಿತಾಭ್ ಜೊತೆ ಸಮಯ ಕಳೆಯೋದಕ್ಕೆ ಒಪ್ಪಿಕೊಂಡ ಸಿನಿಮಾನೆ ಕೈ ಬಿಟ್ಟಿದ್ರಾ ರೇಖಾ?
ನಟ ಅಮಿತಾಭ್ ಬಚ್ಚನ್ ಜೊತೆ ಸಂಜೆ ಕಳೆಯೋದಕ್ಕಾಗಿ ಕರಣಮಾ ಸಿನಿಮಾದಿಂದಲೇ ನಟಿ ರೇಖಾ ಹೊರ ಬಂದಿದ್ದರಂತೆ. ಅಷ್ಟೊಂದು ಲವ್ ಮಾಡ್ತಿದ್ರು ರೇಖಾ.

ಅಮಿತಾಭ್ ಬಚ್ಚನ್ ಮತ್ತು ರೇಖಾ (Amitabh Bachchan and Rekha) ಬಗ್ಗೆ ಹಲವು ಕಥೆಗಳನ್ನು ನೀವು ಕೇಳಿರುವಿರಿ, ಕೆಲವು ತೆರೆಯ ಮೇಲೆ ಮತ್ತು ಕೆಲವು ತೆರೆಯ ಹೊರಗಿನ ಕಥೆಗಳು. ಅವರಿಬ್ಬರು ದೂರವಾಗಿ ಅದೆಷ್ಟೋ ಸಮಯ ಕಳೆದಿದೆ, ಇವರ ಸಂಬಂಧವು ಮುಗಿದು ಹಲವು ವರ್ಷಗಳ ನಂತರವೂ ಚರ್ಚೆಯಲ್ಲಿದೆ. ಇಂದಿಗೂ ಪ್ರತಿದಿನ ಅವರ ಬಗ್ಗೆ ಏನಾದರೂ ಸುದ್ದಿಗಳು ಹೊರಬರುತ್ತಲೇ ಇರುತ್ತವೆ. 2015 ರಲ್ಲಿ ರೇಖಾ ಮತ್ತು ಅಮಿತಾಬ್ ನಡುವೆ ಏನು ನಡೆದಿತ್ತು ಎನ್ನುವ ಬಗ್ಗೆ ನಿರ್ದೇಶಕ ರಂಜಿತ್ ಹೇಳಿದ್ದೇನು?
2015 ರಲ್ಲಿ ರೆಡಿಫ್ ಜೊತೆಗಿನ ಸಂಭಾಷಣೆಯಲ್ಲಿ, ಮಾತನಾಡಿದ ರಂಜಿತ್, ರೇಖಾ ಅವರ ಪರ್ಸನಲ್ ರಿಕ್ವೆಸ್ಟ್ (personal request) ಮೇರೆಗೆ ರಂಜಿತ್ ನಿರ್ದೇಶನದ ಸಿನಿಮಾದಲ್ಲಿನ ಪಾತ್ರವರ್ಗದಲ್ಲಿ ಬದಲಾವಣೆ ಮಾಡಲಾಯಿತು ಎಂದಿದ್ದಾರೆ. ನಟನೆ ಬಿಟ್ಟ ಬಳಿಕ, ರಂಜಿತ್ ಸ್ಕ್ರಿಪ್ಟ್ ಬರೆದು ಧರ್ಮೇಂದ್ರ, ರೇಖಾ ಮತ್ತು ಜಯಪ್ರದಾ ಅವರೊಂದಿಗೆ ಚಿತ್ರ ನಿರ್ದೇಶಿಸಲು ಮಾಡಲು ನಿರ್ಧರಿಸಿದ್ದರಂತೆ. ರೇಖಾ ,ರಂಜಿತ್ ಅವರ ಸ್ನೇಹಿತೆಯಾಗಿದ್ದರಿಂದ ಅವರನ್ನು ಸಹ ಸಿನಿಮಾದಲ್ಲಿ ನಾಯಕಿಯನ್ನಾಗಿ ಮಾಡಿದ್ದರಂತೆ.
ಆ ಸಿನಿಮಾ ಹೆಸರು 'ಕರಣಮಾ (Karama)', . ಈ ಸಿನಿಮಾದ ಸಂಪೂರ್ಣ ಮೊದಲ ಶೆಡ್ಯೂಲ್ ಸಂಜೆಯ ವೇಳೆ ಶೂಟಿಂಗ್ ಇತ್ತು. ಒಂದು ದಿನ ರೇಖಾ ಕರೆ ಮಾಡಿ, ಸಂಜೆ ಅಮಿತಾಭ್ ಬಚ್ಚನ್ ಜೊತೆ ಸಮಯ ಕಳೆಯಲು ಬಯಸಿದ್ದರಿಂದ ಸಂಜೆಯ ಶೂಟಿಂಗ್ ಕ್ಯಾನ್ಸಲ್ ಮಾಡಿ, ಶೂಟಿಂಗ್ ಬೆಳಗ್ಗಿನ ಸಮಯಕ್ಕೆ ಮುಂದೂಡಬೇಕೆಂದು ಕೇಳಿದ್ದರಂತೆ.
ರೇಖಾ ಅವರಿಂದ ಈ ಮಾತನ್ನು ಕೇಳಿ ರಂಜಿತ್ ಗೆ ಅಚ್ಚರಿಯಾಗಿತ್ತಂತೆ. ಯಾಕಂದ್ರೆ ಅದು ಪರ್ಸನಲ್ ವಿಷಯ ಆಗಿದ್ದರಿಂದ ಅದನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಅವರ ರಿಕ್ವೆಸ್ಟನ್ನು ನಿರಾಕರಿಸಿದ್ದರಂತೆ ರಂಜಿತ್. ಇದರಿಂದಾಗಿ ರೇಖಾ ಆ ಸಿನಿಮಾವನ್ನೇ ತೊರೆದು ಸಹಿ ಮಾಡಿದ ಹಣವನ್ನು ಮತ್ತೆ ಹಿಂದಿರುಗಿಸಿದ್ದರು ಎಂದಿದ್ದಾರೆ ರಂಜಿತ್. ಕೊನೆಗೆ ಫಿಲಂ ಶೆಡ್ಯೂಲ್ ಮುಂದೂಡಲಾಯಿತು. ಧರ್ಮೇಂದ್ರ ಇತರ ಕೆಲಸಗಳಲ್ಲಿ ಬ್ಯುಸಿಯಾದರು, ರೇಖಾ ಬದಲು ಅನಿತಾ ರಾಜ್ ಅವರನ್ನು ಸಿನಿಮಾಗೆ ಆಯ್ಕೆ ಮಾಡಲಾಯಿತು. ಅಂತಿಮವಾಗಿ, ಫರಾಹ್, ಕಿಮಿ ಕಟ್ಕರ್ ಮತ್ತು ವಿನೋದ್ ಖನ್ನಾ ಅವರನ್ನು ಸಿನಿಮಾಗೆ ಆಯ್ಕೆ ಮಾಡುವ ಮೂಲಕ ಸಿನಿಮಾವನ್ನು ಕಂಪ್ಲೀಟ್ ಮಾಡಲಾಯಿತು.
ರೇಖಾ ಮತ್ತು ಅಮಿತಾಭ್ ಚಲನಚಿತ್ರಗಳು
ಅಮಿತಾಭ್ ಬಚ್ಚನ್ ಮತ್ತು ರೇಖಾ ಅವರ ತೆರೆಯ ಮೇಲಿನ ಕೆಮೆಸ್ಟ್ರಿ, ವಿಶೇಷವಾಗಿ ಸಿಲ್ಸಿಲಾ (1981) ಚಿತ್ರದಲ್ಲಿ ಎದ್ದು ಕಾಣುತ್ತೆ. ಇದಲ್ಲದೇ ಈ ಜೋಡಿ ಮುಖದ್ದರ್ ಕಾ ಸಿಕಂದರ್ (1978), ಮಿಸ್ಟರ್ ನಟವರ್‌ಲಾಲ್ (1979), ಸುಹಾಗ್ (1979), ದೋ ಅಂಜಾನೆ (1976) ಮತ್ತು ರಾಮ್ ಬಲರಾಮ್ (1980) ಸಿನಿಮಾಗಳಲ್ಲೂ ಜೊತೆಯಾಗಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

