- Home
- Entertainment
- Cine World
- Actress Rekha: ಮೊದಲ ಪತಿಯ ನಿಧನದ ಬಳಿಕ ಮತ್ಯಾಕೆ ಇನ್ನೊಂದು ಮದುವೆಯಾಗಿಲ್ಲ ನಟಿ ರೇಖಾ
Actress Rekha: ಮೊದಲ ಪತಿಯ ನಿಧನದ ಬಳಿಕ ಮತ್ಯಾಕೆ ಇನ್ನೊಂದು ಮದುವೆಯಾಗಿಲ್ಲ ನಟಿ ರೇಖಾ
ಹಳೆಯ ಸಂದರ್ಶನವೊಂದರಲ್ಲಿ, ರೇಖಾ ತಮ್ಮ ಮೊದಲನೇ ಪತಿಯ ನಿಧನದ ಬಳಿಕ ಮತ್ತೆ ಮದುವೆಯಾಗದಿರಲು ನಿಜವಾದ ಕಾರಣ ಏನು ಅನ್ನೋದನ್ನು ಬಹಿರಂಗಪಡಿಸಿದ್ದಾರೆ.

ರೇಖಾ ಬಾಲಿವುಡ್‌ನ (Bollywood Actress Rekha) ಅತ್ಯಂತ ಪ್ರಸಿದ್ಧ ತಾರೆಗಳಲ್ಲಿ ಒಬ್ಬರು ಮತ್ತುಇವರು 70ನೇ ವಯಸ್ಸಿನಲ್ಲೂ ಅಪ್ಸರೆಯಂತೆ ಮಿಂಚುತ್ತಾರೆ, ಅವರ ಡ್ಯಾನ್ಸಿಂಗ್ ಸ್ಟೈಲ್ ಗೆ ಮನಸೋಲದವರು ಯಾರಿದ್ದಾರೆ, ನಟನೆ ಬಗ್ಗೆಯಂತೂ ಹೇಳೋದೆ ಬೇಡ. ಆದರೆ ಅವರು ತಮ್ಮ ವೈಯಕ್ತಿಕ ಜೀವನದ ವಿಷಯಕ್ಕೆ ಬಂದಾಗ ಯಾವಾಗಲೂ ಹಲವು ವಿಷ್ಯಗಳಲ್ಲಿ ನಿಗೂಢತೆಯನ್ನು ಕಾಪಾಡುತ್ತಿದ್ದಾರೆ.
ರೇಖಾ ಅವರ ಹಿತೈಷಿಗಳು ಮತ್ತು ಅಭಿಮಾನಿಗಳು ರೇಖಾ ಅವರಿಗೆ ಅಮಿತಾಬ್ ಬಚ್ಚನ್ ಬಗ್ಗೆ ಇನ್ನೂ ಫೀಲಿಂಗ್ ಇದೆ ಎಂದು ಹೇಳುತ್ತಾರೆ, ಆದರೆ ಅಮಿತಾಬ್ ಜಯಾ ಅವರೊಂದಿಗಿನ ವಿವಾಹದ ನಂತರ, ರೇಖಾ ಕೂಡ ನೆಲೆಸಲು ಪ್ರಯತ್ನಿಸಿದರು ಮತ್ತು ದೆಹಲಿ ಮೂಲದ ಉದ್ಯಮಿ ಮುಖೇಶ್ ಅಗರ್ವಾಲ್ (Mukesh Agarwal_ ಅವರನ್ನು ವಿವಾಹವಾಗಿದ್ದರು ಅನ್ನೋದು ಹಲವರಿಗೆ ತಿಳಿದಿಲ್ಲ.
ದುಃಖಕರ ವಿಷಯವೆಂದರೆ, ಅದೃಷ್ಟ ಎಂದಿಗೂ ರೇಖಾಗೆ ಅನುಕೂಲಕರವಾಗಲಿಲ್ಲ ಮತ್ತು ಮುಖೇಶ್ ಜೊತೆ ಒಂದು ವರ್ಷ ಸಹ ರೇಖಾ ಬಾಳೋದಕ್ಕೆ ಸಾಧ್ಯ ಆಗಲೇ ಇಲ್ಲ. ಯಾಕಂದ್ರೆ, ಮದುವೆಯಾಗಿ ಒಂದು ವರ್ಷಕ್ಕೂ ಮುನ್ನ ಮುಖೇಶ್ ಸಾವನ್ನಪ್ಪಿದ್ದರು. ಇದರಿಂದಾಗಿ ರೇಖಾ ಬದುಕು ಛಿದ್ರವಾಯಿತು. ಅಂದಿನಿಂದ, ನಟಿ ಮದುವೆಯಾಗದಿರಲು ನಿರ್ಧರಿಸಿದರು ಮತ್ತು ತಮ್ಮ ಜೀವನದ ಅರ್ಧದಷ್ಟು ಭಾಗವನ್ನು ಒಂಟಿಯಾಗಿ ಕಳೆದರು.
ನಿಮ್ಮ ಜೀವನದಲ್ಲಿ ಮಕ್ಕಳನ್ನು ಮಿಸ್ ಮಾಡಿಕೊಳ್ಳುತ್ತೀರಾ ಎಂದು ಹಿರಿಯ ನಟಿಯನ್ನು ಸಂದರ್ಶನವೊಂದರಲ್ಲಿ ಕೇಳಿದಾಗ, ಅವರು, 'ನಾನು ಇನ್ನು ಮುಂದೆ ಮಕ್ಕಳನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಮಕ್ಕಳನ್ನು ಹೊಂದಲು ಪರಿಪೂರ್ಣ ವ್ಯಕ್ತಿಯನ್ನು ಕಂಡುಕೊಂಡರೂ ಅದು ಅವರ ಮೌಲ್ಯಗಳು(values of life) ಅಥವಾ ಜೀವನದ ಆಕಾಂಕ್ಷೆಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ರೇಖಾ ಹೇಳಿದರು.
'ನಾನು ಒಬ್ಬ ವ್ಯಕ್ತಿಗೆ ಮಾತ್ರ ನನ್ನನ್ನು ಅರ್ಪಿಸಿಕೊಳ್ಳುವ ವ್ಯಕ್ತಿಯಲ್ಲ. ನನಗೆ ಮಗುವಾಗಿದ್ದರೆ, ನನ್ನ ಸಂಪೂರ್ಣ ಗಮನ ಅವರ ಕಡೆಗೆ ಹೋಗುತ್ತಿತ್ತು ಮತ್ತು ನಾನು ಬೇರೆ ಯಾವುದಕ್ಕೂ ಸಮಯ ಅಥವಾ ಶಕ್ತಿಯನ್ನು ವಿನಿಯೋಗಿಸಲು ಸಾಧ್ಯವಾಗುವುದಿಲ್ಲ ಎಂದು ರೇಖಾ ಹೇಳಿದ್ದಾರೆ.
ಈ ಹಿಂದೆ ಹೇಳಿದ ಸಂದರ್ಶನವೊಂದರಲ್ಲಿ ರೇಖಾ ತಾವು ಮತ್ತೆ ಯಾವತ್ತೂ ಮದುವೆಯಾಗದಿರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಆದರೆ ಒಂದು ವೇಳೆ ರಿಲೇಶನ್ ಶಿಪ್ (relationship) ನಲ್ಲಿ ಉಳಿದರೂ ಸಹ, ಅದರಲ್ಲಿ 100 % ನೀಡುವುದಾಗಿ ಹೇಳಿದ್ದರು. ಮೋಸ ಮಾಡುವ ಮಾತಿಲ್ಲ ಎಂದು ಹೇಳಿದ್ದರು.
'ನಾನು ಸಂಬಂಧದಲ್ಲಿ ನನ್ನ ಎಲ್ಲವನ್ನೂ ಸಂಪೂರ್ಣವಾಗಿ ನೀಡುವ ವ್ಯಕ್ತಿ. ನಾನು ನನ್ನವನ ಹಾಸಿಗೆಯನ್ನು ರೆಡಿ ಮಾಡುವೆ, ಅವನ ಬಟ್ಟೆಗಳನ್ನು ಸೆಲೆಕ್ಟ್ ಮಾಡುತ್ತೇನೆ, ಅವನ ಆಹಾರವನ್ನು ನೋಡಿಕೊಳ್ಳುತ್ತೇನೆ ಮತ್ತು ಅವನ ಊಟವನ್ನು ಪ್ಯಾಕ್ ಮಾಡುತ್ತೇನೆ ಮತ್ತು ಅದನ್ನು ನಾನೇ ತಲುಪಿಸುತ್ತೇನೆ ಈ ರೀತಿಯಾಗಿ ನಾನು ಆ ವ್ಯಕ್ತಿಯನ್ನು ನೋಡಿಕೊಳ್ಳುವುದಾಗಿ ರೇಖಾ ತಿಳಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

