- Home
- Entertainment
- Cine World
- ಪರಭಾಷೆಗೆ ಹಾವಳಿ ಕೊಡುವ ಚಿತ್ರ ಮಾಡಬೇಕು: 45 ಟ್ರೇಲರ್‌ಗೆ ತಲಾ 1 ಕೋಟಿ+ ಹಿಟ್ಸ್, ಭಾರಿ ಮೆಚ್ಚುಗೆ!
ಪರಭಾಷೆಗೆ ಹಾವಳಿ ಕೊಡುವ ಚಿತ್ರ ಮಾಡಬೇಕು: 45 ಟ್ರೇಲರ್‌ಗೆ ತಲಾ 1 ಕೋಟಿ+ ಹಿಟ್ಸ್, ಭಾರಿ ಮೆಚ್ಚುಗೆ!
ಕನ್ನಡ ಮತ್ತು ಹಿಂದಿಯಲ್ಲಿ ‘45’ ಚಿತ್ರದ ಟೀಸರ್ 1 ಕೋಟಿಗೂ ಹೆಚ್ಚು ಹಿಟ್ಸ್ ಗಳಿಸಿದೆ. ತೆಲುಗು, ತಮಿಳು, ಮಲಯಾಳಂನಲ್ಲಿ ಕ್ರಮವಾಗಿ 90 ಲಕ್ಷ, 86 ಲಕ್ಷ, 84 ಲಕ್ಷ ವೀಕ್ಷಣೆ ಪಡೆದಿದೆ. ಈ ಚಿತ್ರವು ಡಿ.25ಕ್ಕೆ ತೆರೆಗೆ ಬರುತ್ತಿದೆ.

ಬಹುಭಾಷೆಯಲ್ಲಿ ಬಿಡುಗಡೆ
ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ. ಶೆಟ್ಟಿ ನಟನೆಯ, ರಮೇಶ್ ರೆಡ್ಡಿ ನಿರ್ಮಾಣದ, ಅರ್ಜುನ್ ಜನ್ಯಾ ನಿರ್ದೇಶನದ ‘45’ ಚಿತ್ರದ ಟೀಸರ್ ಬಹುಭಾಷೆಯಲ್ಲಿ ಬಿಡುಗಡೆಗೊಂಡು ಭಾರಿ ಮೆಚ್ಚುಗೆ ಗಳಿಸಿದೆ.
ಡಿ.25ಕ್ಕೆ ‘45’ ತೆರೆಗೆ
ಕನ್ನಡ ಮತ್ತು ಹಿಂದಿಯಲ್ಲಿ 1 ಕೋಟಿಗೂ ಹೆಚ್ಚು ಹಿಟ್ಸ್ ಗಳಿಸಿದೆ. ತೆಲುಗು, ತಮಿಳು, ಮಲಯಾಳಂನಲ್ಲಿ ಕ್ರಮವಾಗಿ 90 ಲಕ್ಷ, 86 ಲಕ್ಷ, 84 ಲಕ್ಷ ವೀಕ್ಷಣೆ ಪಡೆದಿದೆ. ಈ ಚಿತ್ರವು ಡಿ.25ಕ್ಕೆ ತೆರೆಗೆ ಬರುತ್ತಿದೆ.
ಲೇಡಿ ಗೆಟಪ್ ಸಿಕ್ಕಾಪಟ್ಟೆ ವೈರಲ್
ವಿಶೇಷವೆಂದರೆ ಈ ಟ್ರೇಲರ್‌ನಲ್ಲಿ ಶಿವಣ್ಣ ಅವರು ಸ್ತ್ರೀ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಲೇಡಿ ಗೆಟಪ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾವಿರಾರು ಮಂದಿ ಅವರ ಸ್ತ್ರೀ ಗೆಟಪ್ ಅನ್ನು ಹಂಚಿಕೊಂಡಿದ್ದಾರೆ.
ಅತಿಥಿ ಪಾತ್ರದಲ್ಲಿ ಸುಧಾರಾಣಿ
ಈ ಸಂದರ್ಭದಲ್ಲಿ ಶಿವರಾಜ್ ಕುಮಾರ್, ‘ಉಪೇಂದ್ರ, ರಾಜ್ ಬಿ ಶೆಟ್ಟಿ ಜೊತೆಗೆ ಕೆಲಸ ಮಾಡಿದ್ದು ಖುಷಿಯಾಗಿದೆ. ಸುಧಾರಾಣಿ ಅತಿಥಿ ಪಾತ್ರದಲ್ಲಿ ನಟಿಸಿರುವುದು ಮತ್ತೊಂದು ವಿಶೇಷ. ನಿರ್ಮಾಪಕ ರಮೇಶ್ ರೆಡ್ಡಿ ಯಾವುದಕ್ಕೂ ಕಡಿಮೆ ಮಾಡದೆ ಚಿತ್ರವನ್ನು ನಿರ್ಮಿಸಿದ್ದಾರೆ’ ಎಂದರು.
ಇವರ ಶ್ರಮದಿಂದ ಸಿನಿಮಾ ಇಷ್ಟು ಚೆನ್ನಾಗಿ ಮೂಡಿ ಬಂದಿದೆ
ಉಪೇಂದ್ರ, ‘ತೆರೆ ಮೇಲೆ ಮೂವರು ಸ್ಟಾರ್‌ಗಳನ್ನು ನೋಡಿದ್ದೀರಿ. ತೆರೆಯ ಹಿಂದೆ ರಮೇಶ್ ರೆಡ್ಡಿ, ಅರ್ಜುನ್ ಜನ್ಯ ಮತ್ತು ಛಾಯಾಗ್ರಹಕ ಸತ್ಯ ಹೆಗಡೆ ಸ್ಟಾರ್‌ಗಳು. ಇವರ ಶ್ರಮದಿಂದ ಸಿನಿಮಾ ಇಷ್ಟು ಚೆನ್ನಾಗಿ ಮೂಡಿ ಬಂದಿದೆ’ ಎಂದರು.
ಶಿವಣ್ಣ, ಉಪೇಂದ್ರ ಸರಳ
ರಾಜ್ ಬಿ. ಶೆಟ್ಟಿ, ‘ನಾನು ಈ ಚಿತ್ರದಲ್ಲಿ ಸ್ಟಾರ್‌ಗಳ ಜೊತೆಗೆ ಕೆಲಸ ಮಾಡಿದ್ದೇನೆ ಅನಿಸಲಿಲ್ಲ. ಶಿವಣ್ಣ, ಉಪೇಂದ್ರ ಅವರು ಅಷ್ಟು ಸರಳವಾಗಿದ್ದರು. ನಾವು ಪರಭಾಷೆ ಹಾವಳಿ ಎನ್ನುತ್ತೇವೆ. ನಾವು ಕೂಡ ಹಾವಳಿ ಕೊಡುವ ಚಿತ್ರ ಮಾಡಬೇಕು. ಆ ರೀತಿಯ ಚಿತ್ರ ‘45’ ಆಗಲಿದೆ ಎನ್ನುವ ಭರವಸೆ ಇದೆ’ ಎಂದರು.
ಸಂಸ್ಕೃತಿಯನ್ನು ನಾವು ಮರೆತಿದ್ದೇವೆ
ಅರ್ಜುನ್ ಜನ್ಯ, ‘ಮೂರು ಜನ ನಟರ ಅಭಿಮಾನಿಯಾಗಿ ಸಿನಿಮಾ ಮಾಡಿದ್ದೇನೆ. ನಮ್ಮ ಹಿರಿಯರು ನಮಗೆ ತಿಳಿಸಿಕೊಟ್ಟಿರುವ ಸಂಸ್ಕೃತಿಯನ್ನು ನಾವು ಮರೆತಿದ್ದೇವೆ. ಆ ವಿಷಯವನ್ನು ಇಟ್ಟುಕೊಂಡು ಈ ಸಿನಿಮಾ ಕತೆ ಮಾಡಿದ್ದೇನೆ’ ಎಂದರು. ನಿರ್ಮಾಪಕ ರಮೇಶ್ ರೆಡ್ಡಿ, ಸುಧಾರಾಣಿ, ಪ್ರಮೋದ್ ಶೆಟ್ಟಿ ಇದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

