- Home
- Entertainment
- Sandalwood
- ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಮುಂಗಡವಾಗಿ ಪಾಸ್ ಪಡೆದುಕೊಂಡವರಿಗೆ ಮಾತ್ರ ಚಿತ್ರಮಂದಿರ ಪ್ರವೇಶ ದೊರೆಯಲಿದೆ. ಅರ್ಜುನ್ ಜನ್ಯ ನಿರ್ದೇಶಿಸಿ, ರಮೇಶ್ ರೆಡ್ಡಿ ನಿರ್ಮಿಸಿರುವ ‘45’ ಚಿತ್ರವು ಡಿ.25ರಂದು ತೆರೆಗೆ ಬರುತ್ತಿದೆ.

ವಿಶೇಷ ಕಾರ್ಯಕ್ರಮ
ಡಿ.15ರಂದು ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ ಬಹು ಭಾಷೆಯ ‘45’ ಚಿತ್ರದ ಟ್ರೇಲರ್ ಬಿಡುಗಡೆ ಆಗಲಿದೆ. ಅಂದು ಸಂಜೆ ಬೆಂಗಳೂರಿನ ವಿದ್ಯಾಪೀಠದ ಬಳಿಯ ಕೆಂಪೇಗೌಡ ಮೈದಾನದಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿವೆ.
ಕ್ಯೂಬ್ ಮೂಲಕ ಟ್ರೇಲರ್ ಬಿಡುಗಡೆ
ಜೊತೆಗೆ ಮೈಸೂರು, ಮಂಗಳೂರು, ತುಮಕೂರು, ದಾವಣಗೆರೆ, ಶಿವಮೊಗ್ಗ, ಹೊಸಪೇಟೆ, ಹುಬ್ಬಳ್ಳಿ ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಕ್ಯೂಬ್ ಮೂಲಕ ಈ ಟ್ರೇಲರ್ ಬಿಡುಗಡೆ ಕಾರ್ಯಕ್ರಮದ ನೇರ ಪ್ರಸಾರ ಆಯೋಜಿಸಲಾಗಿದೆ.
ಡಿ.25ರಂದು ತೆರೆಗೆ
ಮುಂಗಡವಾಗಿ ಪಾಸ್ ಪಡೆದುಕೊಂಡವರಿಗೆ ಮಾತ್ರ ಚಿತ್ರಮಂದಿರ ಪ್ರವೇಶ ದೊರೆಯಲಿದೆ. ಅರ್ಜುನ್ ಜನ್ಯ ನಿರ್ದೇಶಿಸಿ, ರಮೇಶ್ ರೆಡ್ಡಿ ನಿರ್ಮಿಸಿರುವ ಈ ಚಿತ್ರವು ಡಿ.25ರಂದು ತೆರೆಗೆ ಬರುತ್ತಿದೆ.
ಇಂಥ ಪ್ರಯತ್ನ ಯಾರೂ ಮಾಡಿಲ್ಲ
ಆರಂಭದಿಂದಲೂ ಎಲ್ಲವನ್ನೂ ವಿಶೇಷವಾಗಿಯೇ ಮಾಡಿಕೊಂಡು ಬಂದಿದ್ದೇವೆ. ಟ್ರೇಲರ್ ಬಿಡುಗಡೆ ಕೂಡ ವಿಶೇಷವಾಗಿರಬೇಕು ಎನ್ನುವ ಕಾರಣಕ್ಕೆ 7 ಜಿಲ್ಲಾ ಕೇಂದ್ರಗಳಲ್ಲಿ ಒಟ್ಟಿಗೆ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಆಯೋಜಿಸಿದ್ದೇವೆ. ಈ ನಿಟ್ಟಿನಲ್ಲಿ ಎಲ್ಲಾ ತಯಾರಿ ಆಗಿದೆ. ಇದುವರೆಗೂ ಇಂಥ ಪ್ರಯತ್ನ ಯಾರೂ ಮಾಡಿಲ್ಲ. ನಾವೇ ಮೊದಲು’ ಎಂದು ಅರ್ಜುನ್ ಜನ್ಯ ಹೇಳಿಕೊಂಡರು.
ಜನ ನೋಡುತ್ತಾರೆಂಬ ಭರವಸೆ ಇದೆ
ರಮೇಶ್ ರೆಡ್ಡಿ, ‘ನಾವು ಅಂದುಕೊಂಡಂತೆ ಸಿನಿಮಾ ಬಂದಿದೆ. ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ ಮಾಡಿದ ಹೆಮ್ಮೆ ನನಗೆ ಇದೆ. ಜನ ನೋಡುತ್ತಾರೆಂಬ ಭರವಸೆ ಇದೆ’ ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

