- Home
- Entertainment
- Cine World
- Photos: ಬೇರೆ ಧರ್ಮದಲ್ಲಿ ಹುಟ್ಟಿದರೂ, ಮದುವೆ ಬಳಿಕ ಪತಿಯ ಧರ್ಮವನ್ನು ಪಾಲಿಸುತ್ತಿರುವ ದಕ್ಷಿಣ ಭಾರತದ ಖ್ಯಾತ ನಟಿಯರು
Photos: ಬೇರೆ ಧರ್ಮದಲ್ಲಿ ಹುಟ್ಟಿದರೂ, ಮದುವೆ ಬಳಿಕ ಪತಿಯ ಧರ್ಮವನ್ನು ಪಾಲಿಸುತ್ತಿರುವ ದಕ್ಷಿಣ ಭಾರತದ ಖ್ಯಾತ ನಟಿಯರು
Actress List Who Are Following Husband Religion: ಕೆಲ ನಟಿಯರು ಬೇರೆ ಧರ್ಮದಲ್ಲಿ ಹುಟ್ಟಿದರೂ ಕೂಡ ಮದುವೆಯಾದ ಬಳಿಕ ಪತಿಯ ಧರ್ಮವನ್ನು, ಅಲ್ಲಿನ ಸಂಪ್ರದಾಯಗಳನ್ನು ತಪ್ಪದೆ ಪಾಲಿಸುತ್ತಿದ್ದಾರೆ. ಹಾಗಾದರೆ ಯಾರು ಅವರು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಶರ್ಮಿಳಾ ಟ್ಯಾಗೋರ್
ಬಾಲಿವುಡ್ ನಟಿ ಶರ್ಮಿಳಾ ಟ್ಯಾಗೋರ್ ಅವರು ಹಿಂದೂ ಧರ್ಮದಲ್ಲಿ ಜನಿಸಿದರು. ಕ್ರಿಕೆಟ್ ಆಟಗಾರ ಮನ್ಸೂರ್ ಅಲಿ ಖಾನ್ ಪಟೌಡಿ ಅವರನ್ನು ಮದುವೆಯಾಗಬೇಕು ಎಂದು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು. ಮದುವೆಯ ನಂತರ ತಮ್ಮ ಹೆಸರನ್ನು 'ಆಯೇಷಾ ಸುಲ್ತಾನಾ' ಎಂದು ಬದಲಿಸಿಕೊಂಡರು ಎನ್ನಲಾಗಿದೆ. ಆದರೆ ಸಿನಿಮಾ ಜಗತ್ತು ಮಾತ್ರ ಇವರನ್ನು ಶರ್ಮಿಳಾ ಟ್ಯಾಗೋರ್ ಎಂದು ಕರೆಯುವುದು.
ಜಿನೆಲಿಯಾ ಡಿಸೋಜಾ
ಕ್ರೈಸ್ತ ಧರ್ಮದ ಜಿನೆಲಿಯಾ, ರಿತೇಶ್ ದೇಶ್ಮುಖ್ ಅವರನ್ನು ಮದುವೆಯಾದ ನಂತರ ಮರಾಠಿ ಸಂಪ್ರದಾಯ, ಹಿಂದೂ ಧರ್ಮದ ಹಬ್ಬಗಳನ್ನು ಆಚರಿಸುತ್ತಾರೆ.
ದೀಪಿಕಾ ಕಕ್ಕರ್
ಹಿಂದೂ ಧರ್ಮದ ದೀಪಿಕಾ ಕಕ್ಕರ್ ಅವರು ಶೋಯೆಬ್ ಇಬ್ರಾಹಿಂ ಅವರನ್ನು ಮದುವೆಯಾದರು. ಆಮೇಲೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತಮ್ಮ ಹೆಸರನ್ನು 'ಫೈಜಾ' ಎಂದು ಬದಲಿಸಿಕೊಂಡಿದ್ದಾರೆ. ಇಸ್ಲಾಂ ಪದ್ಧತಿ ಅನುಸರಿಸುವ ದೀಪಿಕಾ ಚಿತ್ರರಂಗಕ್ಕೆ ಮಾತ್ರ ದೀಪಿಕಾ ಕಕ್ಕರ್.
ನರ್ಗಿಸ್ ದತ್
ಮುಸ್ಲಿಂ ಕುಟುಂಬದಲ್ಲಿ ಜನಿಸಿದ ನರ್ಗಿಸ್, ನಟ ಸುನಿಲ್ ದತ್ ಅವರನ್ನು ಮದುವೆಯಾದರು. ಆಮೇಲೆ ಹಿಂದೂ ಧರ್ಮಕ್ಕೆ ಮತಾಂತರಗೊಂಡರು. ಇವರ ಹಿಂದೂ ಹೆಸರು 'ಸರಸ್ವತಿ ದೇವಿ'.
ಖುಷ್ಬೂ ಸುಂದರ್
ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಖುಷ್ಬೂ, ನಿರ್ದೇಶಕ ಸುಂದರ್ ಸಿ ಅವರನ್ನು ಮದುವೆಯಾದರು. ಆಮೇಲೆ ಹಿಂದೂ ಧರ್ಮಕ್ಕೆ ಮತಾಂತರಗೊಂಡು, ಅದರ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆ.
ನಯನತಾರಾ
ಕ್ರೈಸ್ತ ಧರ್ಮದಲ್ಲಿ ಜನಿಸಿದ ನಯನತಾರಾ ಅವರ ಮೂಲ ಹೆಸರು ಡಯಾನಾ ಮರಿಯಂ ಕುರಿಯನ್. ಆಮೇಲೆ ಹಿಂದೂ ಧರ್ಮಕ್ಕೆ ಮತಾಂತರಗೊಂಡರು. ಪತಿ ವಿಘ್ನೇಶ್ ಶಿವನ್ ಅವರೊಂದಿಗೆ ಹಿಂದೂ ಸಂಪ್ರದಾಯಗಳನ್ನು ಪಾಲಿಸುತ್ತಿದ್ದಾರೆ.
ಪವನ್ ಕಲ್ಯಾಣ್
ನಟ ಪವನ್ ಕಲ್ಯಾಣ್ ಅವರು Anna Lezhneva ಅವರನ್ನು ಮದುವೆಯಾಗಿದ್ದಾರೆ. ಅನ್ನಾ ಅವರು ಕ್ರೈಸ್ತ ಸಂಪ್ರದಾಯಸ್ಥರು, ಆದರೆ ಪವನ್ ಧರ್ಮವನ್ನು ಅವರು ಪಾಲಿಸುತ್ತಾರೆ.
ಜ್ಯೋತಿಕಾ
ಮುಸ್ಲಿಂ ತಂದೆ, ಪಂಜಾಬಿ ಮೂಲದ ತಾಯಿಗೆ ಜನಿಸಿದ ಜ್ಯೋತಿಕಾ, ತಮಿಳು ನಟ ಸೂರ್ಯ ಅವರನ್ನು ಮದುವೆಯಾದ ಬಳಿಕ ಹಿಂದೂ ಧರ್ಮದ ಸಂಪ್ರದಾಯಗಳನ್ನು ಪಾಲಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

