ಸಲ್ಮಾನ್ ಖಾನ್ ಈ 10 ಸಿನಿಮಾಗಳು ಸೌತ್ ಸಿನಿಮಾಗಳ ರಿಮೇಕ್
ಸಲ್ಮಾನ್ ಖಾನ್ ಅವರು ಅನೇಕ ಸೌತ್ ರಿಮೇಕ್ ಚಿತ್ರಗಳಲ್ಲಿ ನಟಿಸಿದ್ದಾರೆ. ಕೆಲವೊಂದನ್ನು ಬಿಟ್ಟರೆ ಬಹುತೇಕ ರಿಮೇಕ್ ಆದ ಎಲ್ಲಾ ಸಿನಿಮಾಗಳು ಬ್ಲಾಕ್‌ಬಸ್ಟರ್‌ಗಳಾಗಿವೆ. ಈ ಚಿತ್ರಗಳ ಬಗ್ಗೆ ತಿಳಿದುಕೊಳ್ಳೋಣ...

ಸಲ್ಮಾನ್ ಖಾನ್‌ರ ಸುಮಾರು 10 ಸಿನಿಮಾಗಳು ಸೌತ್ ರಿಮೇಕ್ ಇದರಲ್ಲಿ 2 ಬಿಟ್ಟು ಉಳಿದವು ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಸಿನಿಮಾಗಳು ಎನಿಸಿವೆ.
2003ರಲ್ಲಿ ತೆರೆಗೆ ಬಂದ ಸಲ್ಮಾನ್ ಖಾನ್ ಅವರ 'ತೇರೆ ನಾಮ್' 1999ರ ತಮಿಳು ಸಿನಿಮಾ 'ಸೇತು' ರಿಮೇಕ್. ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ ಸೂಪರ್ ಹಿಟ್ ಆಗಿದೆ.
ಹಾಗೆಯೇ ಸಲ್ಮಾನ್ ಖಾನ್ ಅವರ 2005ರ 'ನೋ ಎಂಟ್ರಿ' ಸಿನಿಮಾವೂ ಕೂಡ 2002ರ ತಮಿಳು ಸಿನಿಮಾ 'ಚಾರ್ಲಿ ಚಾಪ್ಲಿನ್' ರಿಮೇಕ್ ಆಗಿದೆ.
2011ರ 'ಬಾಡಿಗಾರ್ಡ್' ಸಿನಿಮಾವೂ ಕೂಡ 2010ರ ಮಲಯಾಳಂ ಸಿನಿಮಾ 'ಬಾಡಿಗಾರ್ಡ್' ರಿಮೇಕ್ ಆಗಿದ್ದು, ಈ ಸಿನಿಮಾ ಸೂಪರ್ ಹಿಟ್ ಆಗಿತ್ತು.
2011ರ 'ರೆಡಿ' ಸಿನಿಮಾವೂ ಕೂಡ 2008ರ ತೆಲುಗು ಸಿನಿಮಾ 'ರೆಡಿ' ರಿಮೇಕ್ ಆಗಿದೆ. ಈ ಸಿನಿಮಾವೂ ಕೂಡ ಸೂಪರ್ ಹಿಟ್ ಆಗಿತ್ತು.
2009ರ 'ವಾಂಟೆಡ್' ಸಿನಿಮಾವೂ ಕೂಡ ತಮಿಳು ಮತ್ತು ತೆಲುಗಿನ 'ಪೋಕಿರಿ' ಸಿನಿಮಾದ ರಿಮೇಕ್ ಆಗಿದ್ದು, ಇದು ಬಾಲಿವುಡ್‌ನಲ್ಲಿ ಸೂಪರ್ ಹಿಟ್ಟ ಸಿನಿಮಾ ಆಗಿತ್ತು.
ಹಾಗೆಯೇ 2014ರಲ್ಲಿ ತೆರೆಕಂಡ 'ಕಿಕ್' ಸಿನಿಮಾವೂ ಕೂಡ 2009ರ ತೆಲುಗು ಸಿನಿಮಾ 'ಕಿಕ್' ರಿಮೇಕ್ ಆಗಿದ್ದು, ಬಾಲಿವುಡ್‌ನಲ್ಲಿ ಸೂಪರ್ ಹಿಟ್ ಆಯ್ತು
2014ರ 'ಜೈ ಹೋ' ಸಿನಿಮಾವೂ ಕೂಡ 2006ರ ತೆಲುಗಿನ ಸಿನಿಮಾ 'ಸ್ಟಾಲಿನ್' ರಿಮೇಕ್ ಆಗಿತ್ತು. ಆದರೆ ಇದು ಬಾಕ್ಸಾಫೀಸಲ್ಲಿ ಹಿಟ್ ಆಗಲು ವಿಫಲ ಆಯ್ತು.
2023ರ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಬಾಲಿವುಡ್ ಸಿನಿಮಾವೂ ಕೂಡ' 2014ರ ತಮಿಳು ಸಿನಿಮಾ 'ವೀರಂ' ರಿಮೇಕ್ ಆಗಿತ್ತು. ಆದರೆ ಈ ಸಿನಿಮಾವೂ ಕೂಡ ಬಾಕ್ಸಾಫೀಸಲ್ಲಿ ಹಿಟ್ ಆಗಲು ವಿಫಲವಾಯ್ತು.
ಹಾಗೇಯೇ 1999ರ 'ಬೀವಿ ನಂ.1 ಸಿನಿಮಾವೂ ಕೂಡ 1995ರ ತಮಿಳು ಸಿನಿಮಾ 'ಸಾಥಿ ಲೀಲಾವತಿ' ಯ ರಿಮೇಕ್.ಈ ಸಿನಿಮಾ ಬಾಲಿವುಡ್‌ನಲ್ಲಿ ಸೂಪರ್ ಹಿಟ್.
ಹಾಗೆಯೇ ಸಲ್ಮಾನ್ ಖಾನ್ ಅವರ 1997ರ 'ಜುಡ್ವಾ ಸಿನಿಮಾವೂ ಕೂಡ 1994ರ ತೆಲುಗು 'ಹಲೋ ಬ್ರದರ್'ಸಿನಿಮಾದ ರಿಮೇಕ್ ಆಗಿದೆ. ಈ ಸಿನಿಮಾವೂ ಕೂಡ ಸೂಪರ್ ಹಿಟ್ ಆಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

