- Home
- Entertainment
- Cine World
- ವಿಜ್ಜು.. ಆ ಸಿನಿಮಾದಿಂದ ನಿನ್ನ ಹೆಮ್ಮೆ ಪಡುವಂತೆ ಮಾಡ್ತೀನಿ: ದೇವರಕೊಂಡಗೆ ರಶ್ಮಿಕಾ ಹೀಗಾ ಹೇಳೋದು!
ವಿಜ್ಜು.. ಆ ಸಿನಿಮಾದಿಂದ ನಿನ್ನ ಹೆಮ್ಮೆ ಪಡುವಂತೆ ಮಾಡ್ತೀನಿ: ದೇವರಕೊಂಡಗೆ ರಶ್ಮಿಕಾ ಹೀಗಾ ಹೇಳೋದು!
ರಶ್ಮಿಕಾ ಮಂದಣ್ಣ ಎಲ್ಲಿದ್ರೂ ಹಿಟ್ ಗ್ಯಾರಂಟಿ ಅನ್ನೋ ಹಾಗೆ ಈಗ ಆಕೆಯ ಹವಾ. ಪುಷ್ಪ 2, ಛಾವಾ, ಅನಿಮಲ್, ಈಗ ಕುಬೇರ ಸಿನಿಮಾಗಳ ಸಕ್ಸಸ್‌ನಿಂದ ರಶ್ಮಿಕಾ ಫುಲ್ ಫಾರ್ಮ್‌ನಲ್ಲಿದ್ದಾರೆ.

ರಶ್ಮಿಕಾ ಮಂದಣ್ಣ ಎಲ್ಲಿದ್ರೂ ಹಿಟ್ ಗ್ಯಾರಂಟಿ ಅನ್ನೋ ಹಾಗೆ ಈಗ ಆಕೆಯ ಹವಾ. ಪುಷ್ಪ 2, ಛಾವಾ, ಅನಿಮಲ್, ಈಗ ಕುಬೇರ ಸಿನಿಮಾಗಳ ಸಕ್ಸಸ್‌ನಿಂದ ರಶ್ಮಿಕಾ ಫುಲ್ ಫಾರ್ಮ್‌ನಲ್ಲಿದ್ದಾರೆ. ಲೇಡಿ ಓರಿಯೆಂಟೆಡ್ ಸಿನಿಮಾಗಳಲ್ಲೂ ರಶ್ಮಿಕಾ ಬ್ಯುಸಿ.
ರಶ್ಮಿಕಾ ಮಂದಣ್ಣ ನಟಿಸುತ್ತಿರುವ 'ಮೈಸಾ' ಸಿನಿಮಾದ ಫಸ್ಟ್ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಲುಕ್ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ತಾನು ಈವರೆಗೆ ಮಾಡದ, ತೀವ್ರತೆಯ ಪಾತ್ರ ಅಂತ ರಶ್ಮಿಕಾ ಹೇಳಿದ್ದಾರೆ. ಸೆಲೆಬ್ರಿಟಿಗಳೂ ರಶ್ಮಿಕಾ ಲುಕ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೈಸಾ ಫಸ್ಟ್ ಲುಕ್ ಬಗ್ಗೆ ವಿಜಯ್ ದೇವರಕೊಂಡ ಇನ್‌ಸ್ಟಾದಲ್ಲಿ "This one is going to be terrific" ಅಂತ ಪೋಸ್ಟ್ ಮಾಡಿದ್ರು. ಇದಕ್ಕೆ ರಶ್ಮಿಕಾ "ವಿಜ್ಜು! ಈ ಸಿನಿಮಾದಿಂದ ನಿನ್ನ ಹೆಮ್ಮೆ ಪಡುವಂತೆ ಮಾಡ್ತೀನಿ" ಅಂತ ರಿಪ್ಲೈ ಕೊಟ್ಟಿದ್ದಾರೆ. ಇವರಿಬ್ಬರ ಈ ಮಾತು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಫಸ್ಟ್ ಲುಕ್ ಬಿಡುಗಡೆ ವೇಳೆ ರಶ್ಮಿಕಾ, "ನಾನು ಯಾವಾಗಲೂ ಹೊಸತು, ವಿಭಿನ್ನ, ಆಸಕ್ತಿದಾಯಕ ಏನನ್ನಾದರೂ ಕೊಡಲು ಪ್ರಯತ್ನಿಸುತ್ತೇನೆ. ಮೈಸಾ ಅಂತಹದ್ದೇ ಒಂದು ಪ್ರಯೋಗ. ನಾನು ಹಿಂದೆಂದೂ ಮಾಡದ ಪಾತ್ರ, ಹೊಸ ಲೋಕಕ್ಕೆ ಕರೆದೊಯ್ದಿದೆ. ನನ್ನಲ್ಲಿ ನಾನೇ ನೋಡದ ಹೊಸ ರೂಪ ಕಂಡುಕೊಂಡೆ. ಇದು ಬಲಿಷ್ಠ, ತೀವ್ರ, ವಾಸ್ತವಿಕ. ನರ್ವಸ್ ಆಗಿದ್ದರೂ ಉತ್ಸುಕಳಾಗಿದ್ದೇನೆ" ಅಂದಿದ್ದಾರೆ.
ರಶ್ಮಿಕಾ ಈಗ ಧನುಷ್ ಜೊತೆ ನಟಿಸಿರುವ 'ಕುಬೇರ' ಸಿನಿಮಾ ಚೆನ್ನಾಗಿ ಓಡ್ತಿದೆ. ರಾಹುಲ್ ರವೀಂದ್ರನ್ ನಿರ್ದೇಶನದ 'ದಿ ಗರ್ಲ್ ಫ್ರೆಂಡ್' ಸಿನಿಮಾದಲ್ಲೂ ನಟಿಸ್ತಿದ್ದಾರೆ. ಇನ್ನೂ ಕೆಲವು ಸಿನಿಮಾಗಳು ಬರಲಿವೆ. ಒಂದೆಡೆ ವಿಭಿನ್ನ ಪಾತ್ರಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ರಶ್ಮಿಕಾ, ವಿಜಯ್ ದೇವರಕೊಂಡ ಜೊತೆಗಿನ ಸಂಬಂಧದ ಬಗ್ಗೆಯೂ ಫ್ಯಾನ್ಸ್‌ಗೆ ಪರೋಕ್ಷವಾಗಿ ಹಿಂಟ್ ಕೊಡ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

