- Home
- Entertainment
- Cine World
- ಲೆಜೆಂಡ್ ನಂದಮೂರಿ ಬಾಲಕೃಷ್ಣ ಎಲ್ಲೆ ಹೋದರೂ ಆ ಬ್ಯಾಗ್ ಇರಲೇಬೇಕಂತೆ: ಅಂತದೇನಿದೆ ಅದ್ರಲ್ಲಿ?
ಲೆಜೆಂಡ್ ನಂದಮೂರಿ ಬಾಲಕೃಷ್ಣ ಎಲ್ಲೆ ಹೋದರೂ ಆ ಬ್ಯಾಗ್ ಇರಲೇಬೇಕಂತೆ: ಅಂತದೇನಿದೆ ಅದ್ರಲ್ಲಿ?
ಲೆಜೆಂಡ್ ನಂದಮೂರಿ ಬಾಲಕೃಷ್ಣ ಸ್ಟಾರ್ ಹೀರೋ. ಆತನ ಜೊತೆ ಯಾವಾಗಲೂ ಸಿಬ್ಬಂದಿ ಇರುತ್ತಾರೆ. ಆದರೆ ಒಂದು ಬ್ಯಾಗ್ ಅನ್ನು ಮಾತ್ರ ಬಾಲಕೃಷ್ಣ ಸ್ವತಃ ಕ್ಯಾರಿ ಮಾಡುತ್ತಾರೆ. ಆ ಬ್ಯಾಗಿನಲ್ಲಿ ಏನಿರುತ್ತದೆಂದು ನಿಮಗೆ ಗೊತ್ತಾ?

ಬಾಲಕೃಷ್ಣ ಟಾಲಿವುಡ್‌ನ ಟಾಪ್ ಸ್ಟಾರ್‌ಗಳಲ್ಲಿ ಒಬ್ಬರು. ಅವರ ಹೆಸರಿನಲ್ಲಿ ಹಲವಾರು ದಾಖಲೆಗಳಿವೆ. ಚಕಚಕನೆ ಸಿನಿಮಾವನ್ನು ಪೂರ್ಣಗೊಳಿಸಿ ಬಿಡುಗಡೆ ಮಾಡುವುದು ಆವರ ಅಭ್ಯಾಸ. ಗೆಲುವು - ಸೋಲುಗಳನ್ನು ಲೆಕ್ಕಿಸದೆ ಚಿತ್ರಗಳನ್ನು ಮಾಡುತ್ತಾರೆ. ಬಾಲಯ್ಯ ಅವರಿಗೆ ಕೋಪದ ಜೊತೆ ಪ್ರೀತಿ ಕೂಡ ಹೆಚ್ಚು. ಒಬ್ಬ ಸ್ಟಾರ್ ಹೀರೋ ಆಗಿರುವ ಬಾಲಯ್ಯನ ಜೊತೆ ಯಾವಾಗಲೂ ಭದ್ರತೆ ಜೊತೆಗೆ, ವೈಯಕ್ತಿಕ ವಿಷಯಗಳನ್ನು ನೋಡಿಕೊಳ್ಳುವ ಸಿಬ್ಬಂದಿ ಇರುತ್ತಾರೆ. ಆದರೆ ಅವರಿಗೆ ಬೇಕಾಗಿರುವ ವಸ್ತುಗಳನ್ನು ಅವರೇ ತಮ್ಮ ಬ್ಯಾಗ್‌ನಲ್ಲಿ ಕ್ಯಾರಿ ಮಾಡುತ್ತಾರೆ. ವಿಶೇಷವಾಗಿ ಆ ಬ್ಯಾಗನ್ನು ಮಾತ್ರ ಅವರು ಯಾರಿಗೂ ನೀಡುವುದಿಲ್ಲ. ಆ ಬ್ಯಾಗಿನ ವಿಶೇಷತೆ ಏನು? ಅದರಲ್ಲಿ ಏನಿರುತ್ತದೆ ಎಂಬ ಸಂದೇಹ ನಮಗೆ ಬರಬಹುದು. ವಿಶ್ವಾಸಾರ್ಹ ಮೂಲಗಳ ಪ್ರಕಾರ ಬಾಲಕೃಷ್ಣ ಆ ಬ್ಯಾಗಿನಲ್ಲಿ ಮ್ಯಾನ್ಷನ್ ಹೌಸ್ ವಿಸ್ಕಿ ಬಾಟಲಿಯನ್ನು ಕ್ಯಾರಿ ಮಾಡುತ್ತಾರಂತೆ.
ಬಿಸಿ ನೀರಿನೊಂದಿಗೆ ಮದ್ಯ ಸೇವಿಸುವುದು ಬಾಲಕೃಷ್ಣಗೆ ಅಭ್ಯಾಸವಂತೆ. ಅವರು ಎಲ್ಲಿಗೆ ಹೋದರೂ ಬಿಸಿ ನೀರು, ಮ್ಯಾನ್ಷನ್ ಹೌಸ್ ಬಾಟಲಿಯನ್ನು ಒಂದು ಬ್ಯಾಗಿನಲ್ಲಿಟ್ಟುಕೊಂಡು ಹೋಗುತ್ತಾರಂತೆ. ಕೊನೆಗೆ ವಿದೇಶಕ್ಕೆ ಹೋದರೂ ಕೂಡ... ಬಿಸಿ ನೀರು, ಮ್ಯಾನ್ಷನ್ ಹೌಸ್ ಬಾಟಲ್ ತಮ್ಮ ಜೊತೆ ಇರಲೇಬೇಕಂತೆ. ಈ ವಿಷಯವನ್ನು ಈ ಹಿಂದೆ ಬಾಲಕೃಷ್ಣ ಅವರ ಅಳಿಯ ಶ್ರೀ ಭರತ್ ಹೇಳಿದ್ದಾರೆ.
ಹೌದು! ಈ ಹಿಂದೆ ನಡೆದ ಸಂದರ್ಶನದಲ್ಲಿ ಶ್ರೀ ಭರತ್ ಮಾತನಾಡುತ್ತಾ... ನಮ್ಮ ಮಾವ ಮ್ಯಾನ್ಷನ್ ಹೌಸ್ ಕುಡಿಯುತ್ತಾರೆಂದು ತಿಳಿದ ನಂತರ ಆ ಕಂಪನಿಯ ಷೇರುಗಳ ಮೌಲ್ಯ ಹೆಚ್ಚಾಯಿತು ಎಂದರು. ಅವರು ಬಿಸಿ ನೀರಿನಲ್ಲಿ ಮದ್ಯವನ್ನು ಬೆರೆಸಿ ಕುಡಿಯುತ್ತಾರೆ ಅಲ್ಲವೇ? ಎಂದು ನಿರೂಪಕರು ಭರತ್‌ರನ್ನು ಕೇಳಿದಾಗ... ಹೌದು ಅದು ನಿಜ ಎಂದು ಒಪ್ಪಿಕೊಂಡರು ಭರತ್.
ಅವರ ಬಳಿ ಒಂದು ಬ್ಯಾಗ್ ಇರುತ್ತದೆ. ಅದರಲ್ಲಿ ಬಿಸಿ ನೀರು, ಮದ್ಯದ ಬಾಟಲ್ ಇರುತ್ತದೆ. ಅವರು ಎಲ್ಲಿಗೆ ಹೋದರೂ ಆ ಬ್ಯಾಗ್ ಇರಲೇಬೇಕು. ಅಮೆರಿಕಕ್ಕೆ ಹೋದರೂ ಕೂಡ ಅದನ್ನು ಜೊತೆಗೆ ತೆಗೆದುಕೊಂಡು ಹೋಗುತ್ತಾರೆ ಎಂದು ಭರತ್ ಹೇಳಿದರು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಇನ್ನು ಅನ್‌ಸ್ಟಾಪಬಲ್ ಶೋಗೆ ಬಾಲಕೃಷ್ಣ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದರು. ಆ ಶೋನ ಪ್ರಾಯೋಜಕರಲ್ಲಿ ಮ್ಯಾನ್ಷನ್ ಹೌಸ್ ಕಂಪನಿಯೂ ಒಂದು. ಆ ಟಾಕ್ ಶೋನಲ್ಲಿ ತಮ್ಮ ಮದ್ಯಪಾನದ ಅಭ್ಯಾಸದ ಬಗ್ಗೆ ಬಾಲಕೃಷ್ಣ ಒಬ್ಬಿಬ್ಬರು ಅತಿಥಿಗಳೊಂದಿಗೆ ಮಾತನಾಡುವುದು ವಿಶೇಷ. ಇತ್ತೀಚೆಗೆ ನಡೆದ ಗ್ಯಾಂಗ್ಸ್ ಆಫ್ ಗೋದಾವರಿ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಬಾಲಕೃಷ್ಣ ಮದ್ಯಪಾನ ಮಾಡಿ ಬಂದಿದ್ದಾರೆ, ನಾಯಕಿ ಅಂಜಲಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಸುದ್ದಿಗಳು ವೈರಲ್ ಆಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.