ಮೆಗಾಸ್ಟಾರ್ ಚಿರಂಜೀವಿ ಸಿನಿಮಾಗೆ 'ನೋ' ಎಂದ ಟಾಪ್ 5 ನಟಿಯರಿವರು! ಕಾರಣಗಳೇನು ಗೊತ್ತಾ?
ಚಿರಂಜೀವಿ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ ಯಾವುದೇ ನಟಿ ಬಿಟ್ಟುಕೊಳ್ಳುವುದಿಲ್ಲ. ಆದರೆ, ಮೆಗಾಸ್ಟಾರ್ ಚಿರಂಜೀವಿ ಅವರ ಸಿನಿಮಾಗಳನ್ನೇ ತಿರಸ್ಕರಿಸಿದ ಕೆಲ ನಟಿಯರೂ ಇದ್ದಾರೆ. ಅವರ ಬಗ್ಗೆ ಇಲ್ಲಿದೆ ಮಾಹಿತಿ.
16

Image Credit : Asianet News
ಮೆಗಾಸ್ಟಾರ್ ಚಿರಂಜೀವಿ
ಮೆಗಾಸ್ಟಾರ್ ಚಿರಂಜೀವಿ ಸಿನಿಮಾದಲ್ಲಿ ನಟಿಸಬೇಕೆಂದು ಪ್ರತಿಯೊಬ್ಬ ನಟ-ನಟಿಯರಿಗೂ ಆಸೆ ಇರುತ್ತದೆ. ಆದರೆ ಕೆಲ ನಟಿಯರು ಚಿರಂಜೀವಿ ಅವರ ಸಿನಿಮಾಗಳನ್ನೇ ತಿರಸ್ಕರಿಸಿದ್ದಾರೆ. ಆ ನಟಿಯರು ಯಾರು ಮತ್ತು ಅವರು ಯಾಕೆ ಚಿರಂಜೀವಿ ಚಿತ್ರಗಳನ್ನು ತಿರಸ್ಕರಿಸಿದರು ಎಂಬ ವಿವರ ಇಲ್ಲಿದೆ.
26
Image Credit : Asianet News
ಶ್ರೀದೇವಿ
ಬೆಳ್ಳಿತೆರೆ ಮೇಲೆ ಶ್ರೀದೇವಿ ಮತ್ತು ಚಿರಂಜೀವಿ ಜೋಡಿ ಎಂದರೆ ಅದೊಂದು ಹಿಟ್ ಕಾಂಬಿನೇಷನ್. ಇವರಿಬ್ಬರೂ ನಟಿಸಿದ 'ಜಗದೇಕ ವೀರುಡು ಅತಿಲೋಕ ಸುಂದರಿ' ಚಿತ್ರ ತೆಲುಗು ಸಿನಿಮಾ ಇತಿಹಾಸದಲ್ಲಿ ಕ್ಲಾಸಿಕ್ ಎನಿಸಿದೆ. 'ಕೊಂಡವೀಟಿ ದೊಂಗ' ಚಿತ್ರಕ್ಕೆ ಶ್ರೀದೇವಿಯವರೇ ನಾಯಕಿಯಾಗಬೇಕಿತ್ತು. ಆದರೆ, ಚಿರಂಜೀವಿಗೆ ಸಮನಾದ ಪಾತ್ರ ತನಗೂ ಬೇಕೆಂದು ಶ್ರೀದೇವಿ ಬೇಡಿಕೆ ಇಟ್ಟರಂತೆ. ಅದು ಸಾಧ್ಯವಾಗದಿದ್ದಾಗ, ಅವರು ಸಿನಿಮಾದಿಂದ ಹೊರನಡೆದರು. ನಂತರ ಆ ಪಾತ್ರ ವಿಜಯಶಾಂತಿಯವರ ಪಾಲಾಯಿತು.
36
Image Credit : Actress Aamani\Instagram
ಆಮನಿ
ಆಮನಿ ಮತ್ತು ಚಿರಂಜೀವಿ ಕಾಂಬಿನೇಷನ್‌ನಲ್ಲಿ ಒಂದೇ ಒಂದು ಸಿನಿಮಾ ಕೂಡ ಬಂದಿಲ್ಲ. 'ಸ್ಟಾಲಿನ್' ಸಿನಿಮಾದಲ್ಲಿ ಚಿರಂಜೀವಿ ಅವರ ತಂಗಿ ಪಾತ್ರಕ್ಕೆ ಆಮನಿಗೆ ಆಫರ್ ಬಂದಿತ್ತು. ಆದರೆ, 'ನಾನು ಚಿರಂಜೀವಿ ಜೊತೆ ನಟಿಸಿದರೆ ನಾಯಕಿಯಾಗಿಯೇ ನಟಿಸುತ್ತೇನೆ, ತಂಗಿಯಾಗಿ ಅಲ್ಲ' ಎಂದು ಹೇಳಿ ಆಮನಿ ಆ ಸಿನಿಮಾವನ್ನು ತಿರಸ್ಕರಿಸಿದರು.
46
Image Credit : Actress Indraja\Instagram
ಇಂದ್ರಜಾ
ಚಿರಂಜೀವಿ ಮತ್ತು ಇಂದ್ರಜಾ ಜೋಡಿಯಲ್ಲೂ ಯಾವುದೇ ಸಿನಿಮಾ ಬಂದಿಲ್ಲ. ಒಂದು ಸಂದರ್ಶನದಲ್ಲಿ ಇಂದ್ರಜಾ, ತಮಗೂ ಚಿರಂಜೀವಿ ಅವರ ತಂಗಿಯಾಗಿ ನಟಿಸಲು ಕೇಳಲಾಗಿತ್ತು, ಆದರೆ ಒಪ್ಪಿಕೊಳ್ಳಲಿಲ್ಲ ಎಂದಿದ್ದರು. 'ನಾನು ಚಿರಂಜೀವಿ ಅವರೊಂದಿಗೆ ಡ್ಯಾನ್ಸ್ ಮಾಡಬೇಕು, ನಾಯಕಿಯಾಗಿ ನಟಿಸಬೇಕು. ಅದು ನನ್ನ ಆಸೆ. ತಂಗಿಯಾಗಿ ನಟಿಸುವುದಿಲ್ಲ' ಎಂದು ಇಂದ್ರಜಾ ಸ್ಪಷ್ಟಪಡಿಸಿದ್ದರು.
56
Image Credit : instagram
ಸಾಯಿ ಪಲ್ಲವಿ
'ಭೋಳಾ ಶಂಕರ್' ಚಿತ್ರದಲ್ಲಿ ಚಿರಂಜೀವಿ ಅವರ ತಂಗಿ ಪಾತ್ರದಲ್ಲಿ ನಟಿಸುವ ಅವಕಾಶ ಸಾಯಿ ಪಲ್ಲವಿಗೆ ಸಿಕ್ಕಿತ್ತು. ಆದರೆ, ಆ ಪಾತ್ರ ಮಾಡಲು ಇಷ್ಟವಿಲ್ಲದ ಕಾರಣ ಸಾಯಿ ಪಲ್ಲವಿ ಅದನ್ನು ತಿರಸ್ಕರಿಸಿದರು. ನಂತರ, ಅವರ ಸ್ಥಾನಕ್ಕೆ ಕೀರ್ತಿ ಸುರೇಶ್ ಅವರನ್ನು ನಾಯಕಿಯಾಗಿ ತೆಗೆದುಕೊಳ್ಳಲಾಯಿತು.
66
Image Credit : parineetichopra/instagram
ಪರಿಣೀತಿ ಚೋಪ್ರಾ
ಕೊರಟಾಲ ಶಿವ ಮತ್ತು ಚಿರಂಜೀವಿ ಕಾಂಬಿನೇಷನ್‌ನಲ್ಲಿ ಬಂದ 'ಆಚಾರ್ಯ' ಸಿನಿಮಾ ದೊಡ್ಡ ಡಿಸಾಸ್ಟರ್ ಆಗಿತ್ತು. ಈ ಚಿತ್ರಕ್ಕೆ ಮೊದಲು ನಾಯಕಿಯಾಗಿ ಪರಿಣಿತಿ ಚೋಪ್ರಾರನ್ನು ಸಂಪರ್ಕಿಸಲಾಗಿತ್ತು. ಆದರೆ, ಬಿಝಿ ಶೆಡ್ಯೂಲ್ ಕಾರಣದಿಂದ ಅವರು ಈ ಸಿನಿಮಾವನ್ನು ರಿಜೆಕ್ಟ್ ಮಾಡಿದರು. ಇದರಿಂದ ಪರಿಣಿತಿ ಚೋಪ್ರಾ ಒಂದು ದೊಡ್ಡ ಫ್ಲಾಪ್ ಸಿನಿಮಾದಿಂದ ಪಾರಾದರು ಅಂತಾನೇ ಹೇಳಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos

