- Home
- Entertainment
- TV Talk
- ಧಾರಾವಾಹಿಗಳಲ್ಲಿ ನಟಿಸುವಾಗಲೇ ಭಿನ್ನಾಭಿಪ್ರಾಯ ಹೊರಹಾಕಿದ ಸೆಲೆಬ್ರಿಟಿಗಳಿವರು! ಯಾಕೆ? ಅಂಥದ್ದೇನಾಯ್ತು?
ಧಾರಾವಾಹಿಗಳಲ್ಲಿ ನಟಿಸುವಾಗಲೇ ಭಿನ್ನಾಭಿಪ್ರಾಯ ಹೊರಹಾಕಿದ ಸೆಲೆಬ್ರಿಟಿಗಳಿವರು! ಯಾಕೆ? ಅಂಥದ್ದೇನಾಯ್ತು?
ಧಾರಾವಾಹಿ ಎನ್ನೋದು ಒಂದು ತಂಡ, ತಿಂಗಳಲ್ಲಿ ಒಂದಿಷ್ಟು ದಿನ ಒಂದು ಧಾರಾವಾಹಿ ಶೂಟಿಂಗ್ ನಡೆಯುವುದು. ಒಂದು ಸೀರಿಯಲ್ ತಂಡದಲ್ಲಿ ಐವತ್ತು ಜನ ಇದ್ದೇ ಇರುತ್ತಾರೆ. ಆ ವೇಳೆ ಮನಸ್ತಾಪ, ಭಿನ್ನಾಭಿಪ್ರಾಯ ಬರೋದು ಸಹಜ. ಅಂತೆಯೇ ಕನ್ನಡದ ಕೆಲ ಸೆಲೆಬ್ರಿಟಿಗಳು ಸೀರಿಯಲ್ ಟೀಂ ವಿರುದ್ಧ ಬೇಸರ ಹೊರಹಾಕಿದ್ದರು.

ಅನಿರುದ್ಧ ಜತ್ಕರ್
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟ ಅನಿರುದ್ಧ ಅವರು ನಿರ್ದೇಶಕ ಆರೂರು ಜಗದೀಶ್ ವಿರುದ್ಧ ಬೇಸರ ಹೊರಹಾಕಿದ್ದರು. ಪಾತ್ರಕ್ಕೂ, ಸೀರಿಯಲ್ನಲ್ಲಿ ಕೊಡುತ್ತಿರುವ ವ್ಯವಸ್ಥೆಗೂ ಸಂಭಂಧವೇ ಇಲ್ಲ ಎಂದು ಹೇಳಿದ್ದರು. ಈ ಬಗ್ಗೆ ದೊಡ್ಡ ಮಟ್ಟದಲ್ಲಿ ವಾದ-ವಿವಾದ, ಚರ್ಚೆ ಆಗಿತ್ತು. ಆ ಬಳಿಕ ಈ ಸಮಸ್ಯೆ ಬಗೆಹರಿದಿತ್ತು.
ಇದಾದ ಬಳಿಕ ಅವರು ಸೂರ್ಯವಂಶ ಧಾರಾವಾಹಿಯಲ್ಲಿ ನಟಿಸಿದ್ದರು.
ನಟಿ ವಿಜಯಲಕ್ಷ್ಮೀ
ನಟಿ ವಿಜಯಲಕ್ಷ್ಮೀ ಕೂಡ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನಟಿಸಿದ್ದರು. ನನಗೆ ಹೇಳದೆ ಪಾತ್ರ ರಿಪ್ಲೇಸ್ ಮಾಡಿದರು ಎಂದು ಅವರು ಆರೋಪ ಮಾಡಿದ್ದರು. ಅಂದಹಾಗೆ ಈ ಪಾತ್ರವನ್ನು ಕೂಡ ಅಂತ್ಯ ಮಾಡಿದ್ದರು. ಅನವಶ್ಯಕವಾಗಿ ಪಾತ್ರ ಮುಕ್ತಾಯ ಮಾಡಿದ್ದರು ಎಂದು ಬೇಸರ ಹೊರಹಾಕಿದ್ದರು.
ನಟ ಚಂದನ್
ನಟ ಚಂದನ್ ಅವರು ತೆಲುಗು ಕಿರುತೆರೆಯಲ್ಲಿ ಸಮಸ್ಯೆ ಮಾಡಿಕೊಂಡಿದ್ದರು. ಸೀರಿಯಲ್ ಸೆಟ್ನಲ್ಲಿ ಚಂದನ್ಗೂ, ಅಲ್ಲಿದ್ದ ತಾಂತ್ರಿಕ ವರ್ಗದವರಿಗೂ ಮಾತಿನ ಜಟಾಪಟಿ ನಡೆದಿತ್ತು. ಆ ನಂತರದಲ್ಲಿ ಚಂದನ್ ಅವರನ್ನು ತೆಲುಗು ಕಿರುತೆರೆ ಬ್ಯಾನ್ ಮಾಡಿತ್ತು. ನಾನು ಕೂಡ ತೆಲುಗು ಸೀರಿಯಲ್ನಲ್ಲಿ ನಟಿಸೋದಿಲ್ಲ ಎಂದು ಚಂದನ್ ಹೇಳಿದ್ದರು. ಈಗ ಚಂದನ್ ಅವರು ಕನ್ನಡದಲ್ಲಿಯೂ ಕೂಡ ಯಾವುದೇ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ.
ಅಂಜಲಿ
ನಟಿ ಅಂಜಲಿ ಅವರು ಲಕ್ಷ್ಮೀ ನಿವಾಸ ಧಾರಾವಾಹಿ ಬಗ್ಗೆ ಬೇಸರ ಹೊರಹಾಕಿದ್ದರು. ಮೊದಲು ಕಥೆ ಹೇಳಿದಾಗ ಒಂದು ಥರ ಪಾತ್ರ ಇತ್ತು, ಈಗ ಬೇರೆ ಥರ ಇದೆ ಎಂದು ಅವರು ಹೇಳಿದ್ದರು. ಹೀಗಾಗಿ ಅವರು ಸೀರಿಯಲ್ ಬಿಟ್ಟಿದ್ದರು.
ಅಂಜಲಿ ಅವರು ಸ್ಟಾರ್ ಸುವರ್ಣ ವಾಹಿನಿಯ ವಸುದೇವ ಕುಟುಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

