- Home
- Entertainment
- Cine World
- ಇವರೇ ನೋಡಿ ಪ್ರಪಂಚದ ಶ್ರೀಮಂತ ಹಾಸ್ಯನಟ… ಇವರ ಒಟ್ಟು ಆಸ್ತಿ 7,00,95,33,830 ಬಿಲಿಯನ್!
ಇವರೇ ನೋಡಿ ಪ್ರಪಂಚದ ಶ್ರೀಮಂತ ಹಾಸ್ಯನಟ… ಇವರ ಒಟ್ಟು ಆಸ್ತಿ 7,00,95,33,830 ಬಿಲಿಯನ್!
ವಿಶ್ವದಲ್ಲೇ ಅತಿ ಹೆಚ್ಚು ಹಣ ಗಳಿಸುವ ಈ ಹಾಸ್ಯನಟ ಈತ, ಈತ ಶಾರುಖ್, ಸಲ್ಮಾನ್, ಅಮಿತಾಬ್ ಬಚ್ಚನ್ ಮತ್ತು ರಜನಿಕಾಂತ್ ಅವರಂತಹ ಟಾಪ್ ಭಾರತೀಯ ನಟರಿಗಿಂತ ಹೆಚ್ಚು ಗಳಿಸ್ತಾರೆ, ಯಾರವರು ಗೊತ್ತಾ?

ಈ ತಿಂಗಳ ಆರಂಭದಲ್ಲಿ, ಫೋರ್ಬ್ಸ್ ನಿಯತಕಾಲಿಕವು (Forbes Magazine) ಅತಿ ಹೆಚ್ಚು ನೆಟ್ ವರ್ತ್ ಹೊಂದಿರುವ ನಟರ ವಾರ್ಷಿಕ ಪಟ್ಟಿಯನ್ನು ಬಿಡುಗಡೆ ಮಾಡಿತು. ಡ್ವೇನ್ ಜಾನ್ಸನ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕುಸ್ತಿಪಟು-ನಟ ಆಗಿರುವ ಡ್ವೇನ್ ಜಾನ್ಸನ್ ಕಳೆದ ಎರಡು ವರ್ಷಗಳಲ್ಲಿ 'ಮೋನಾ 2' ಮತ್ತು 'ರೆಡ್ ಒನ್' ಎರಡು ಸಿನಿಮಾಗಳಲ್ಲಿ ನಟಿಸಿದ್ದರು.
ಆದರೆ ಈ ಲಿಸ್ಟ್ ನಲ್ಲಿ ಮತ್ತೊಬ್ಬ ಹಾಸ್ಯನಟ ಇದ್ದಾರೆ. ಇವರು ವಿಶ್ವದಲ್ಲೇ ಅತಿ ಹೆಚ್ಚು ನೆಟ್ ವರ್ತ್ ಅಥವಾ ಆಸ್ತಿ ಮೌಲ್ಯ ಹೊಂದಿರುವ ನಟರಾಗಿದ್ದಾರೆ. ಅಷ್ಟೇ ಅಲ್ಲ ಇವರ ಒಟ್ಟು ಗಳಿಕೆ ಕೇಳಿದ್ರೆ ನೀವು ಶಾಕ್ ಆಗ್ತೀರಿ. ಈ ನಟನ ಆಸ್ತಿ ಶಾರುಕ್ ಖಾನ್, ಸಲ್ಮಾನ್ ಖಾನ್, ಅಲ್ಲು ಅರ್ಜುನ್, ರಜನಿ ಕಾಂತ್ ಗಿಮ್ತಲೂ ಹೆಚ್ಚಾಗಿದೆ. ಅವರು ಯಾರು ಗೊತ್ತಾ?
ಅವರೇ ಕೆವಿನ್ ಹಾರ್ಟ್ (Kevin Hart). ಹೌದು, ಫೋರ್ಬ್ಸ್ ಪಟ್ಟಿಯ ವಿಶ್ವದ ಅತಿ ಹೆಚ್ಚು ಗಳಿಸುವ ನಟರ ಸಾಲಿನಲ್ಲಿ ಹಾಸ್ಯನಟ ಕೆವಿನ್ ಹಾರ್ಟ್ ಕೂಡ ಸೇರಿದ್ದಾರೆ. ಈ ವಿಷಯದಲ್ಲಿ ಅವರು ಟಾಮ್ ಕ್ರೂಸ್ (Tom Cruise) ಮತ್ತು ಹಗ್ ಜಾಕ್ಮನ್ ಅವರಂತಹ ತಾರೆಗಳನ್ನು ಕೂಡ ಹಿಂದಿಕ್ಕಿ, ಮುಂದೆ ಬಂದಿದ್ದಾರೆ ಎಂದರೆ ಅಚ್ಚರಿಯಾಗೋದು ಖಚಿತ.
ಇಲ್ಲಿವರೆಗೆ ಈ ಹಾಸ್ಯ ನಟ ಕೆವಿನ್ ಹಾರ್ಟ್ (Kevin Hart) ಬರೋಬ್ಬರಿ 81 ಮಿಲಿಯನ್ ಡಾಲರ್ (7,00,95,33,830) ನಿವ್ವಳ ಆದಾಯವನ್ನು ಗಳಿಸಿದ್ದಾರೆ. ಎಲ್ಲಾ ನಟರ ಪಟ್ಟಿಯಲ್ಲಿ, ಕೆವಿನ್ ಹಾರ್ಟ್ ಮೂರನೇ ಸ್ಥಾನದಲ್ಲಿದ್ದರೆ, ಡ್ವೇನ್ ಜಾನ್ಸನ್ (88 ಮಿಲಿಯನ್ ಡಾಲರ್) ಮತ್ತು ರಿಯಾನ್ ರೆನಾಲ್ಡ್ಸ್ (83 ಮಿಲಿಯನ್ ಡಾಲರ್) ನಂತರದ ಸ್ಥಾನದಲ್ಲಿದ್ದಾರೆ. ಹಾಸ್ಯನಟ ಜೆರ್ರಿ ಸೀನ್ಫೆಲ್ಡ್ 60 ಮಿಲಿಯನ್ ಡಾಲರ್ ಗಳಿಸುವ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಕಳೆದ ವರ್ಷ ಕೆವಿನ್ ಹಾರ್ಟ್ ಗೆ ಹೆಚ್ಚಿನ ಪ್ರಮಾಣದಲ್ಲಿ ಯಶಸ್ಸು ಸಿಕ್ಕಿತ್ತು. ಹಾಗಾಗಿ ಅವರು ಟಾಮ್ ಕ್ರೂಸ್ (15 ಮಿಲಿಯನ್ ಡಾಲರ್), ಹಗ್ ಜಾಕ್ಮನ್ (50 ಮಿಲಿಯನ್ ಡಾಲರ್), ಬ್ರಾಡ್ ಪಿಟ್ (32 ಮಿಲಿಯನ್ ಡಾಲರ್) ಮತ್ತು ಜಾರ್ಜ್ ಕ್ಲೂನಿ (31 ಮಿಲಿಯನ್ ಡಾಲರ್) ಅವರಿಗಿಂತ ಹೆಚ್ಚು ಸಂಪಾದಿಸಿದ್ದಾರೆ.
ಕೆವಿನ್ ಹಾರ್ಟ್ ಹೇಗೆ ಮಿಲಿಯನ್ ಗಳಿಸಿದರು?
ಕೆವಿನ್ ಹಲವು ಸೂಪರ್ ಹಿಟ್ ಸಿನಿಮಾಗಳ ಮೂಲಕ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದಾರೆ. ಬಾರ್ಡರ್ ಲ್ಯಾಂಡ್ಸ್ ನ ಥ್ರಿಯೇಟರ್ ರಿಲೀಸ್ ನೊಂದಿಗೆ ಇವರ ಯಶಸ್ಸು ಆರಂಭವಾಯಿತು.
ನಂತರ ನೆಟ್ ಫ್ಲಿಕ್ಸ್ ನಲ್ಲಿ (Netflix) 'ಲಿಫ್ಟ್', 'ದಿ ರೋಸ್ಟ್ ಆಫ್ ಟಾಮ್ ಬ್ರಾಡಿ' , ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಡೈ ಹಾರ್ಟ್ 2, ಡೈ ಹಾರ್ಟರ್, ಅದರ ಮೂರನೇ ಸೀಸನ್, 'ಫೈಟ್ ನೈಟ್' ಸೀರೀಸ್ ಗಳಲ್ಲಿ ನಟಿಸಿದ್ದಾರೆ ಹಾಗೂ ವೀಕ್ಲಿ ಪಾಡ್ ಕಾಸ್ಟ್ 'ಗೋಲ್ಡ್ ಮೈಂಡ್ಸ್' ಕಾರ್ಯಕ್ರಮ ನೀಡಿದ್ದಾರೆ.
ಅಷ್ಟೇ ಅಲ್ಲ ಇವರು ಇಲ್ಲಿವರೆಗೆ ಬರೋಬ್ಬರಿ 90 ಸ್ಟ್ಯಾಂಡ್-ಅಪ್ ಕಾಮಿಡಿ (stand up comedy show) ಕಾರ್ಯಕ್ರಮಗಳನ್ನು ಸಹ ನೀಡಿದ್ದಾರೆ. ಇದರ ಜೊತೆಗೆ ಈ ಹಾಸ್ಯನಟ ಜಾಹೀರಾತುಗಳಿಂದ ಜೊತೆಗೆ ಮನರಂಜನಾ ಕೆಲಸದಿಂದ 81 ಮಿಲಿಯನ್ ಡಾಲರ್ ಗಳಿಸಿದ್ದಾರೆ. ಹಾಗಾಗಿಯೇ ಇವರು ವಿಶ್ವದ ಶ್ರೀಮಂತ ಹಾಸ್ಯ ನಟನಾಗಿ ಹೊರಹೊಮ್ಮಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.