- Home
- Sports
- Cricket
- ಮೇ.17ರ ಬೆಂಗಳೂರು ಪಂದ್ಯಕ್ಕೆ ಮಳೆ ಭೀತಿ, ಮ್ಯಾಚ್ ರದ್ದಾದ್ರೆ ಆರ್‌ಸಿಬಿ-ಕೆಕೆಆರ್ ಪ್ಲೇಆಫ್ ಕತೆ ಏನು?
ಮೇ.17ರ ಬೆಂಗಳೂರು ಪಂದ್ಯಕ್ಕೆ ಮಳೆ ಭೀತಿ, ಮ್ಯಾಚ್ ರದ್ದಾದ್ರೆ ಆರ್‌ಸಿಬಿ-ಕೆಕೆಆರ್ ಪ್ಲೇಆಫ್ ಕತೆ ಏನು?
ಮೇ.17ರಿಂದ ಪುನರ್ ಆರಂಭಗೊಳ್ಳುತ್ತಿರುವ ಐಪಿಎಲ್ 2025 ಟೂರ್ನಿಗೆ ಇದೀಗ ಮಳೆ ಭೀತಿ ಎದುರಾಗಿದೆ. ಹವಾಮಾನ ಇಲಾಖೆ ವರದಿಯಂತೆ ಬೆಂಗಳೂರಿನಲ್ಲಿ ಭಾರಿ ಮಳೆಯಾಗಲಿದೆ. ಹೀಗೆ ಮಳೆಯಿಂದ ಆರ್‌ಸಿಬಿ-ಕೆಕೆಆರ್ ನಡುವಿನ ಪಂದ್ಯ ರದ್ದಾದರೆ ತಂಡಗಳ ಪ್ಲೇ ಆಫ್ ಕತೆ ಏನು?

ಸ್ಥಗಿತಗೊಂಡಿದ್ದ ಐಪಿಎಲ್ ಟೂರ್ನಿ ಇದೀಗ ಮೇ.17ರಿಂದ ಪುನರ್ ಆರಂಭಗೊಳ್ಳುತ್ತಿದೆ. ಪುನರ್ ಆರಂಭದ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್ ತಂಡ ಹೋರಾಟ ನಡೆಸಲಿದೆ. ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗದಲ್ಲಿ ನಡೆಯಲಿದೆ. ಆದರೆ ಹವಾಮಾನ ಇಲಾಖೆ ವರದಿ ಪ್ರಕಾರ ಮೇ.17ರಂದು ಬೆಂಗಳೂರಿನಲ್ಲಿ ಭಾರಿ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
ಮಳೆಯಿಂದ ಪಂದ್ಯರದ್ದಾದರೆ ಆರ್‌ಸಿಬಿ ಅಭಿಮಾನಿಗಳು ಆತಂಕ ಪಡಬೇಕಿಲ್ಲ. ಕಾರಣ ಈ ಪಂದ್ಯ ಮಳೆಯಿಂದ ರದ್ದಾದರೆ ಉಭಯ ತಂಡಗಳು ಒಂದೊಂದು ಅಂಕ ಹಂಚಿಕೊಳ್ಳಲಿದೆ. ಈ ಮೂಲಕ ಆರ್‌ಸಿಬಿ 17 ಅಂಕ ಪಡೆಯಲಿದೆ. ಇಷ್ಟೇ ಅಲ್ಲ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲಿದೆ. ಇಷ್ಟೇ ಅಲ್ಲ ಪ್ಲೇ ಆಫ್ ಸ್ಥಾನಕ್ಕೇರಲಿದೆ. ಈ ಮೂಲಕ ಮೊದಲ ತಂಡವಾಗಿ ಪ್ಲೇ ಆಫ್ ಹಂತಕ್ಕೇರಲಿದೆ.
ಆರ್‌ಸಿಬಿ ಈ ಪಂದ್ಯದಲ್ಲಿ ಗೆದ್ದರೂ ಅಥವಾ ಮಳೆಯಿಂದ ಪಂದ್ಯ ರದ್ದಾದರೂ ಪ್ಲೇ ಆಫ್ ಸ್ಥಾನಕ್ಕೇರಲಿದೆ. ಆದರೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರಿಸ್ಥಿತಿ ಶೋಚನೀಯಾಗಲಿದೆ. ಕಾರಣ ಮಳೆಯಿಂದ ಪಂದ್ಯ ರದ್ದಾದರೆ ಕೆಕೆಆರ್ ಪ್ಲೇ ಆಫ್ ರೇಸ್‌ನಿಂದ ಹೊರಬೀಳಲಿದೆ. ಈ ಮೂಲಕ ಐಪಿಎಲ್ 2025 ಟೂರ್ನಿಯಿಂದ ಹೊರಬಿದ್ದ ನಾಲ್ಕನೇ ತಂಡವಾಗಲಿದೆ.
ಆರ್‌ಸಿಬಿ ಆಟಗಾರರ ಸ್ವಾಗತಿಸಿದ ಮಳೆರಾಯ
ಮೇ.14ರಂದು ಆರ್‌ಸಿಬಿ ಆಟಗಾರರು ಬೆಂಗಳೂರಿಗೆ ಆಗಮಿಸಿದ್ದಾರೆ. ಆದರೆ ಮಂಗಳವಾರ ಬೆಂಗಳೂರಿನಲ್ಲಿ ಭಾರಿ ಮಳೆಯಾಗಿತ್ತು. ಆಟಗಾರರು ಆಗಮಿಸುತ್ತಿದ್ದಂತೆ ಮಳೆರಾಯ ಭರ್ಜರಿ ಸ್ವಾಗತ ನೀಡಿತ್ತು. ಇದೀಗ ಬೆಂಗಳೂರಿನಲ್ಲಿ ಭಾರಿ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ಮೇ.17ರ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸುವ ಸಾಧ್ಯತೆ ಇದೆ.
ಶೇಕಡಾ 75ರಷ್ಟು ಮಳೆ ಚಾನ್ಸ್
ಮೇ.17ರ ಸಂಜೆ ಬೆಂಗಳೂರಿನಲ್ಲಿ ಮಳೆ ಸಂಭವ ಹೆಚ್ಚು ಎಂದು ವರದಿ ಹೇಳುತ್ತಿದೆ. ಶೇಕಡಾ 75ರಷ್ಟು ಪಂದ್ಯದ ದಿನ ಮಳೆ ಸಂಭವ ಇದೆ ಎಂದು ಹವಾಮಾನ ವರದಿ ಹೇಳುತ್ತಿದೆ. ಆರ್‌ಸಿಬಿ ಉತ್ತಮ ಫಾರ್ಮ್‌ನಲ್ಲಿರುವ ಕಾರಣ ಹಾಗೂ ತವರಿನಲ್ಲೂ ಲಯಕ್ಕೆ ಬಂದಿರುವ ಕಾರಣ ಅಭಿಮಾನಿಗಳು ಇದೀಗ ರೋಚಕ ಪಂದ್ಯ ನಿರೀಕ್ಷಿಸುತ್ತಿದ್ದಾರೆ.
ಗಡಿ ಸಂಘರ್ಷದಿಂದ ಮುಂದೂಡಿಕೆಯಾಗಿದ್ದ ಐಪಿಎಲ್
ಭಾರತ ಹಾಗೂ ಪಾಕಿಸ್ತಾನ ನಡುವಿನ ಗಡಿ ಸಂಘರ್ಷದಿಂದ ಐಪಿಎಲ್ ಟೂರ್ನಿ ಮೇಲೆ ಹೊಡೆತ ಬಿದ್ದಿತ್ತು. ಸುರಕ್ಷತಾ ದೃಷ್ಟಿಯಿಂದ ಐಪಿಎಲ್ ಟೂರ್ನಿಯನ್ನು ತಾತ್ಕಾಲಿಕವಾಗಿ ಸ್ಥಗತಿಗೊಳಿಸಲಾಗಿತ್ತು. ಆದರೆ ಭಾರತ ಹಾಗೂ ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾದ ಕಾರಣ ಇದೀಗ ಮೇ.17 ರಿಂದ ಐಪಿಎಲ್ ಟೂರ್ನಿ ಪುನರ್ ಆರಂಭಗೊಳ್ಳುತ್ತಿದೆ.
ನಿಯಮ ಬದಲಿಸಿದ ಬಿಸಿಸಿಐ
ಐಪಿಎಲ್ ವೇಳಾಪಟ್ಟಿ ಬದಲಾವಣೆ ಹಾಗೂ ಇತರ ಕಾರಣಗಳಿಂದ ಹಲವು ವಿದೇಶಿ ಆಟಾರರು ಐಪಿಎಲ್ ಟೂರ್ನಿಗೆ ಲಭ್ಯರಿಲ್ಲ. ಹೀಗಾಗಿ ಬಸಿಸಿಐ ಪ್ಲೇಯರ್ ರಿಪ್ಲೇಸ್‌ಮೆಂಟ್ ನಿಯಮದಲ್ಲಿ ಬದಲಾವಣೆ ಮಾಡಿದೆ. ಇದೀಗ ಫ್ರಾಂಚೈಸಿಗಳಿಗೆ ಅಲಭ್ಯರಾಗಿರುವ ಆಟಗಾರರ ಸ್ಥಾನದಲ್ಲಿ ಬದಲಿ ಆಟಗಾರರ ಆಯ್ಕೆ ಮಾಡುವ ಅವಕಾಶ ನೀಡಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

