- Home
- Sports
- Cricket
- ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಶುಭ್‌ಮನ್ ಗಿಲ್ ಆರ್ಭಟಕ್ಕೆ ದಿಗ್ಗಜರ ಅಪರೂಪದ ರೆಕಾರ್ಡ್ಸ್ ನುಚ್ಚುನೂರು!
ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಶುಭ್‌ಮನ್ ಗಿಲ್ ಆರ್ಭಟಕ್ಕೆ ದಿಗ್ಗಜರ ಅಪರೂಪದ ರೆಕಾರ್ಡ್ಸ್ ನುಚ್ಚುನೂರು!
ಮ್ಯಾಂಚೆಸ್ಟರ್: ಇಂಗ್ಲೆಂಡ್ ಸರಣಿಯಲ್ಲಿ ತಮ್ಮ ಅಭೂತಪೂರ್ವ ಪ್ರದರ್ಶನ ಮುಂದುವರಿಸಿರುವ ಭಾರತದ ನಾಯಕ ಶುಭ್‌ಮನ್ ಗಿಲ್ ಮತ್ತಷ್ಟು ದಾಖಲೆ ಬರೆದಿದ್ದಾರೆ.
ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಆಕರ್ಷಕ ಶತಕ ಸಿಡಿಸಿದ ಶುಭ್‌ಮನ್ ಗಿಲ್ ಹಲವು ಅಪರೂಪದ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಅವರು 4ನೇ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ 103 ರನ್ ಗಳಿಸಿದ್ದು, ಸರಣಿಯ ಒಟ್ಟು ಗಳಿಕೆಯನ್ನು 722ಕ್ಕೆ ಹೆಚ್ಚಿಸಿದ್ದಾರೆ.
ಈ ಮೂಲಕ ವಿದೇಶಿ ಟೆಸ್ಟ್ ಸರಣಿಯೊಂದರಲ್ಲಿ 700+ ರನ್ ಗಳಿಸಿದ 2ನೇ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ.
1971ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಸರಣಿಯಲ್ಲಿ ಭಾರತದ ನಾಯಕರಾಗಿ ಸುನಿಲ್ ಗವಾಸ್ಕರ್ 774 ರನ್ ಗಳಿಸಿದ್ದರು. ಒಟ್ಟಾರೆ ಒಂದು ಸರಣಿಯಲ್ಲಿ 700+ ರನ್ ಗಳಿಸಿದ ಭಾರತದ 3ನೇ ಬ್ಯಾಟರ್.
ಗವಾಸ್ಕರ್ 1978-79ರಲ್ಲಿ ವಿಂಡೀಸ್ ವಿರುದ್ಧ 732 ರನ್ ಗಳಿಸಿದರೆ, ಯಶಸ್ವಿ ಜೈಸ್ವಾಲ್ 2024ರಲ್ಲಿ ಇಂಗ್ಲೆಂಡ್ ವಿರುದ್ಧ 712 ರನ್ ಗಳಿಸಿದ್ದರು. ಇವೆರಡೂ ತವರಿನ ಸರಣಿಯಲ್ಲಿ ದಾಖಲಾಗಿವೆ.
4 ಶತಕ: ಸರಣಿವೊಂದರಲ್ಲಿ 4 ಶತಕ ಬಾರಿಸಿದ ವಿಶ್ವದ 3ನೇ ನಾಯಕ ಗಿಲ್. 1947/48ರಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್, 1978/79ರಲ್ಲಿ ವಿಂಡೀಸ್ ವಿರುದ್ಧ ಸುನಿಲ್ ಗವಾಸ್ಕರ್ ಈ ಸಾಧನೆ ಮಾಡಿದ್ದರು.
ಇನ್ನು, ಟೆಸ್ಟ್ ನಾಯಕನಾಗಿ ಚೊಚ್ಚಲ ಸರಣಿಯಲ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ಗಿಲ್(722 ರನ್) 2ನೇ ಸ್ಥಾನಕ್ಕೇರಿದ್ದಾರೆ. 1936-37ರಲ್ಲಿ ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ ಇಂಗ್ಲೆಂಡ್ ವಿರುದ್ಧ 810 ರನ್ ಗಳಿಸಿದ್ದರು.
01ನೇ ನಾಯಕ: ನಾಯಕತ್ವದ ಚೊಚ್ಚಲ ಸರಣಿಯಲ್ಲಿ 4 ಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ ಶುಭ್‌ಮನ್ ಗಿಲ್.
ಟೆಸ್ಟ್ ಸರಣಿಯಲ್ಲಿ ಭಾರತೀಯರ ಗರಿಷ್ಠ ರನ್
ಆಟಗಾರ ರನ್ ಪಂದ್ಯ ಎದುರಾಳಿ ವರ್ಷ
ಗವಾಸ್ಕರ್ 774 4 ವಿಂಡೀಸ್ 1970/71
ಗವಾಸ್ಕರ್ 732 6 ವಿಂಡೀಸ್ 1978/79
ಶುಭ್‌ಮನ್ 722* 4* ಇಂಗ್ಲೆಂಡ್ 2025
ಜೈಸ್ವಾಲ್ 712 5 ಇಂಗ್ಲೆಂಡ್ 2023/24
ವಿರಾಟ್ 692 4 ಆಸ್ಟ್ರೇಲಿಯಾ 2014/15
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

