ಏಷ್ಯಾಕಪ್ ಟ್ರೋಫಿ ಸ್ವೀಕರಿಸದ ಚಾಂಪಿಯನ್ ಭಾರತ! ಕ್ರಿಕೆಟ್ ಇತಿಹಾಸದಲ್ಲೇ ಕಂಡು ಕೇಳರಿಯದ ಘಟನೆ
ದುಬೈ: 2025ರ ಏಷ್ಯಾಕಪ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಬದ್ದ ಎದುರಾಳಿ ಪಾಕಿಸ್ತಾನ ತಂಡವನ್ನು ರೋಚಕವಾಗಿ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರ ಜತೆಗೆ ಚಾಂಪಿಯನ್ ಆದರೂ ಟ್ರೋಫಿ ಸ್ವೀಕರಿಸಿದೇ ಪಾಕ್‌ಗೆ ಮತ್ತೆ ಮುಖಭಂಗ ಮಾಡಿದೆ.

1. ಗೆಲುವಿಗೆ ಸಿಂದೂರ ತಿಲಕ:
ತಿಲಕ್ ವರ್ಮಾ ಅಮೋಘ ಬ್ಯಾಟಿಂಗ್ ನೆರವಿನಿಂದ ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು 5 ವಿಕೆಟ್‌ಗಳ ಅಂತರದಿಂದ ಮಣಿಸಿದ ಭಾರತ. ಪಹಾಂ ದಾಳಿಗೆ ಪಿಚ್‌ನಲ್ಲೂ ಭಾರತದಿಂದ ಪ್ರತೀಕಾರ
2 ಪಂದ್ಯ ಬಳಿಕ ನಾಟಕೀಯ ಬೆಳವಣಿಗೆ:
ಪಾಕಿಸ್ತಾನದ ಗೃಹಮಂತ್ರಿಯೂ ಆಗಿರುವ ಏಷ್ಯಾ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಮೊಹ್ಸಿನ್ ನ್ ನಖಿಯಿಂದ ಟ್ರೋಫಿ ಸ್ವೀಕಾರಕ್ಕೆ ಭಾರತ ನಕಾರ
3.ರಾಜೀ ಸಂಧಾನಕ್ಕೆ ಕಸರತ್ತು
ಪ್ರಶಸ್ತಿ ಪ್ರದಾನ ಸಮಾರಂಭದಿಂದ 20 ಅಡಿ ದೂರದಲ್ಲೇ ನಿಂತ ಆಟಗಾರರು ರಾಜೀ ಸಂಧಾನಕ್ಕೆ ಭಾರಿ ಕಸರತ್ತು. ಕಾರ್ಯಕ್ರಮ ದಿಂದ ಏಷ್ಯಾಕಪ್ ಟ್ರೋಫಿಯೇ ಮಾಯ!
4. ಮ್ಯಾಚ್ ಮುಗಿದ ಒಂದು ಗಂಟೆ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭ
ಪಂದ್ಯ ಮುಗಿದ ಒಂದು ಗಂಟೆ ಬಳಿಕ ಕಡೆಗೂ ' ಪ್ರಶಸ್ತಿ ವಿತರಣೆ ಸಮಾರಂಭ ಆರಂಭ. ಮೊದಲಿಗೆ ಪಾಕಿಸ್ತಾನ ಆಟಗಾರರಿಗೆ ರನ್ನರ್ ಅಪ್ ಬಹುಮಾನ ವಿತರಣೆ
5. ಪಾಕ್‌ಗೆ ಮುಜುಗರ
ಪಾಕ್‌ನ ಪ್ರತಿ ಆಟಗಾರ ವೇದಿಕೆ ಮೇಲೆ ಬಂದಾಗಲೂ, 'ಮೋದಿ ಮೋದಿ' 'ಇಂಡಿಯಾ.. ಇಂಡಿಯಾ..' ಎಂದು ಕೂಗಿದ ಪ್ರೇಕ್ಷಕರು. ಪಾಕ್ ಆಟಗಾರರಿಗೆ ಮುಜುಗರ
6. ಚೆಕ್ ಎಸೆದ ಪಾಕ್ ಕ್ಯಾಪ್ಟನ್
ರನ್ನರ್ ಅಪ್ ನಗದು ಬಹುಮಾನಕ್ಕೆ ಬಂದ ಪಾಕ್ ಕ್ಯಾಪ್ಟನ್ ಸಲ್ಮಾನ್ ಅಲಿ ಅಘಾ. ಚೆಕ್ ಸ್ವೀಕಾರ ಬಳಿಕ ಅದನ್ನು ಎಸೆದ ಪಾಕ್ ನಾಯಕ
ಚಾಂಪಿಯನ್ ಆದರೂ ಕಪ್ ಇಲ್ಲದೇ ಭಾರತ ಸಂಭ್ರಮ
7 ಟ್ರೋಫಿಯನ್ನು ಇಂದು ಭಾರತ ಪಡೆಯುತ್ತಿಲ್ಲ ಎಂದು ನಿರೂಪಕರ ಎಂಬ ಘೋಷಣೆ. ಟ್ರೋಫಿ ಗೆದ್ದರೂ ಸ್ವೀಕರಿಸದೆ ಪಾಕಿಸ್ತಾನಕ್ಕೆ ಮಂಗಳಾರತಿ ಮಾಡಿದ ಭಾರತದ ವರ್ತನೆಗೆ ದೇಶವಾಸಿಗಳ ಪ್ರಶಂಸೆ. ಟ್ರೋಫಿ ಇಲ್ಲದಿದ್ದರೂ ಮೈದಾನದಲ್ಲಿ ಭಾರತೀಯ ಆಟಗಾರರ ಸಂಭ್ರಮ!
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

