ಪಾಕಿಸ್ತಾನವನ್ನು ಬಗ್ಗುಬಡಿದ ಭಾರತ; ಟೀಂ ಇಂಡಿಯಾ ಗೆದ್ದಿದ್ದು ಹೇಗೆ? ಇಲ್ಲಿವೆ ನೋಡಿ 5 ಕಾರಣಗಳು!
IND vs PAK: ಟಿ20 ವಿಶ್ವಕಪ್ 2026ರ ಪಂದ್ಯದಲ್ಲಿ ಭಾರತ, ಪಾಕಿಸ್ತಾನವನ್ನು ಬಗ್ಗುಬಡಿದಿದೆ. ಇಶಾನ್ ಕಿಶನ್ ಅವರ ಅಬ್ಬರದ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟಿತ ದಾಳಿಗೆ ಪಾಕ್ ತತ್ತರಿಸಿತು. ಈ ಭರ್ಜರಿ ಗೆಲುವಿಗೆ ಕಾರಣವಾದ ಪ್ರಮುಖ ಅಂಶಗಳೇನು? ಇಲ್ಲಿದೆ ವಿವರ.

ಪಾಕಿಸ್ತಾನವನ್ನು ಬಗ್ಗುಬಡಿದು ಸೂಪರ್-8 ಹಂತಕ್ಕೆ ಲಗ್ಗೆಯಿಟ್ಟ ಭಾರತ
ಪಾಕ್ ಬೌಲರ್‌ಗಳ ಮೇಲೆ ಇಶಾನ್ ಕಿಶನ್ ಸವಾರಿ
ಬುಮ್ರಾ-ಪಾಂಡ್ಯ ಜೋಡಿಯಿಂದ ಪಾಕ್‌ಗೆ ಆರಂಭದಲ್ಲೇ ಶಾಕ್
176 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಹಾರ್ದಿಕ್ ಪಾಂಡ್ಯ ಹಾಗೂ ಜಸ್ಪ್ರೀತ್ ಬುಮ್ರಾ ಆರಂಭದಲ್ಲೇ ಆಘಾತ ನೀಡಿದರು. ಮೊದಲ ಓವರ್‌ನಲ್ಲಿ ಪಾಂಡ್ಯ, ವಿಕೆಟ್+ ಮೇಡನ್ ಓವರ್ ಮಾಡಿದರು. ಎರಡನೇ ಓವರ್‌ನಲ್ಲೇ ವಿಕೆಟ್ ಪಡೆದು ಪಾಕ್ ಟಾಪ್ ಆರ್ಡರ್ ಅನ್ನು ಒತ್ತಡಕ್ಕೆ ಸಿಲುಕಿಸಿದರು. ಬುಮ್ರಾ ತಮ್ಮ ಸ್ಪೆಲ್‌ನಲ್ಲಿ 2 ವಿಕೆಟ್ ಪಡೆಯುವುದರ ಜೊತೆಗೆ, ಅತ್ಯಂತ ಕರಾರುವಾಕ್ ಬೌಲಿಂಗ್ ಮಾಡಿ ಪಾಕಿಸ್ತಾನದ ರನ್ ರೇಟ್‌ಗೆ ಕಡಿವಾಣ ಹಾಕಿದರು. ಇದರಿಂದ ಬಾಬರ್ ಅಜಂ ಅವರಂತಹ ಪ್ರಮುಖ ಆಟಗಾರರು ರನ್ ಗಳಿಸಲು ಪರದಾಡಿದರು.
ಇಶಾನ್ ಕಿಶನ್ ಜತೆ ತಿಲಕ್ ವರ್ಮಾ ಸಮಯೋಚಿತ ಜತೆಯಾಟ
ಎರಡನೇ ವಿಕೆಟ್‌ಗೆ ಇಶಾನ್ ಕಿಶನ್ ಜೊತೆಗೂಡಿ ತಿಲಕ್ ವರ್ಮಾ ಆಡಿದ 87 ರನ್‌ಗಳ ಜೊತೆಯಾಟವು ಪಂದ್ಯಕ್ಕೆ ಮಹತ್ವದ ತಿರುವು ನೀಡಿತು. ಒಂದೆಡೆ ಇಶಾನ್ ಬಿರುಸಿನ ಆಟವಾಡುತ್ತಿದ್ದರೆ, ಇನ್ನೊಂದೆಡೆ ತಿಲಕ್ ವರ್ಮಾ (25) ವಿಕೆಟ್ ಬೀಳದಂತೆ ಎಚ್ಚರವಹಿಸಿದರು. ಕೇವಲ ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲದೆ, ಬೌಲಿಂಗ್‌ನಲ್ಲೂ ಒಂದು ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿ ಮಿಂಚಿದರು.
ಭಾರತದ ಬೌಲರ್‌ಗಳ ಸಂಘಟಿತ ಪ್ರದರ್ಶನ
ಸೂರ್ಯಕುಮಾರ್ ಯಾದವ್ ಚಾಣಾಕ್ಷ ನಾಯಕತ್ವ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

