IPL ಪ್ಲೇ ಆಫ್‌ನಲ್ಲಿ ಅತಿಹೆಚ್ಚು 50+ ಬಾರಿಸಿದ್ದು ಧೋನಿಯೂ ಅಲ್ಲ, ಕೊಹ್ಲಿಯೂ ಅಲ್ಲ!
ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಿರ್ಣಾಯಕ ಘಟ್ಟದತ್ತ ಸಾಗುತ್ತಿದೆ. ಹೀಗಿರುವಾಗಲೇ ಐಪಿಎಲ್ ಪ್ಲೇ ಆಫ್ ಇತಿಹಾಸದಲ್ಲಿ ಅತಿಹೆಚ್ಚು 50+ ರನ್ ಬಾರಿಸಿದ ಬ್ಯಾಟರ್ ಯಾರು ಎನ್ನುವುದನ್ನು ನೋಡೋಣ ಬನ್ನಿ.

ಐಪಿಎಲ್ ಪ್ಲೇ ಆಫ್‌ನಲ್ಲಿ ಕ್ವಾಲಿಫೈಯರ್, ಎಲಿಮಿನೇಟರ್, ಎರಡನೇ ಕ್ವಾಲಿಫೈಯರ್ ಹಾಗೂ ಫೈನಲ್ ಹೀಗೆ 4 ಪಂದ್ಯಗಳು ನಡೆಯಲಿವೆ. ಪ್ರಶಸ್ತಿ ಗೆಲ್ಲುವ ನಿಟ್ಟಿನಲ್ಲಿ ಪ್ಲೇ ಆಫ್‌ನಲ್ಲಿನ ಪ್ರದರ್ಶನ ಸಾಕಷ್ಟು ಮಹತ್ವದ್ದೆನಿಸಲಿದೆ.
ತುಂಬಾ ಇಂಟ್ರೆಸ್ಟಿಂಗ್ ಸಂಗತಿಯೆಂದರೆ 6 ಬಾರಿ ಐಪಿಎಲ್ ಟ್ರೋಫಿ ಗೆದ್ದ ರೋಹಿತ್ ಶರ್ಮಾ, 5 ಬಾರಿ ಐಪಿಎಲ್ ಟ್ರೋಫಿ ಗೆದ್ದ ಎಂ ಎಸ್ ಧೋನಿ ಹಾಗೂ ಐಪಿಎಲ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿರುವ ವಿರಾಟ್ ಕೊಹ್ಲಿ, ಐಪಿಎಲ್ ಪ್ಲೇ ಆಫ್‌ನಲ್ಲಿ ಅತಿಹೆಚ್ಚು 50+ ಬಾರಿಸಿದ ಬ್ಯಾಟರ್ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ ಎನ್ನುವುದು ಅಚ್ಚರಿ ಎನಿಸಿದ್ರೂ ಸತ್ಯ.
ಲೀಗ್ ಹಂತದಲ್ಲಿ ಸಾಮಾನ್ಯವಾಗಿ ಎಲ್ಲಾ ಆಟಗಾರರು ಫಿಯರ್‌ಲೆಸ್ ಆಟದ ಮೂಲಕ ಫಿಫ್ಟಿ ಹಾಗೂ 100+ ರನ್ ಬಾರಿಸುವುದನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ಬಿಗ್ ಮ್ಯಾಚ್‌ಗಳಲ್ಲಿ ಒತ್ತಡವನ್ನು ಮೆಟ್ಟಿ ನಿಂತು ಉತ್ತಮ ಪ್ರದರ್ಶನ ತೋರುವುದು ಎಲ್ಲರಿಗೂ ಸುಲಭದ ಮಾತಲ್ಲ.
1. ಸುರೇಶ್ ರೈನಾ
ಈ ವಿಚಾರದಲ್ಲಿ ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಮೊದಲ ಸ್ಥಾನದಲ್ಲಿದ್ದಾರೆ. ಸಿಎಸ್‌ಕೆ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಐಪಿಎಲ್ ಪ್ಲೇ ಆಫ್‌ನಲ್ಲಿ 190 ಸ್ಟ್ರೈಕ್‌ರೇಟ್‌ನಲ್ಲಿ 5 ಬಾರಿ 50+ ರನ್ ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ.
2. ಎಬಿ ಡಿವಿಲಿಯರ್ಸ್
ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್, ಆರ್‌ಸಿಬಿ ತಂಡದ ಅತ್ಯಂತ ನಂಬಿಗಸ್ಥ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದರು. ಎಬಿಡಿ ಐಪಿಎಲ್ ಪ್ಲೇ ಆಫ್‌ನಲ್ಲಿ ಮೂರು ಬಾರಿ 50+ ರನ್ ಬಾರಿಸಿ ಮಿಂಚಿದ್ದರು.
3. ಡ್ವೇನ್ ಸ್ಮಿತ್
ಇನ್ನು ಗುಜರಾತ್ ಲಯನ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮಾಜಿ ಕ್ರಿಕೆಟಿಗ ಡ್ವೇನ್ ಸ್ಮಿತ್ ಕೂಡಾ ಬಿಗ್ ಸ್ಟೇಜ್‌ನಲ್ಲಿ ದೊಡ್ಡ ಇನ್ನಿಂಗ್ಸ್ ಆಡುತ್ತಾ ಬಂದಿದ್ದಾರೆ. ಡ್ವೇನ್ ಸ್ಮಿತ್ ಕೂಡಾ ಮೂರು ಬಾರಿ ಪ್ಲೇ ಆಫ್‌ನಲ್ಲಿ 50+ ರನ್ ಬಾರಿಸಿದ್ದಾರೆ.
4. ಸೂರ್ಯಕುಮಾರ್ ಯಾದವ್
ಭಾರತದ ಮಿಸ್ಟರ್ 360 ಖ್ಯಾತಿಯ ಮುಂಬೈ ಇಂಡಿಯನ್ಸ್ ನಂಬಿಗಸ್ಥ ಬ್ಯಾಟರ್ ಸೂರ್ಯಕುಮಾರ್ ಯಾದವ್ ಕೂಡಾ ಐಪಿಎಲ್ ಪ್ಲೇ ಆಫ್ ಇತಿಹಾಸದಲ್ಲಿ ಮೂರು ಬಾರಿ 50+ ರನ್ ಬಾರಿಸಿದ ಸಾಧನೆ ಮಾಡಿದ್ದಾರೆ.
ಇನ್ನುಳಿದಂತೆ ಜೋಸ್ ಬಟ್ಲರ್, ಋತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೈಕೆಲ್ ಹಸ್ಸಿ, ವೆಂಕಟೇಶ್ ಅಯ್ಯರ್, ರಜತ್ ಪಾಟೀದಾರ್, ಪಾರ್ಥಿವ್ ಪಟೇಲ್, ಲಿಂಡ್ಲೆ ಸಿಮೊನ್ಸ್, ಶೇನ್ ವಾಟ್ಸನ್ ಹಾಗೂ ಕೇನ್ ವಿಲಿಯಮ್ಸ್ ಐಪಿಎಲ್ ಪ್ಲೇ ಆಫ್‌ನಲ್ಲಿ ಎರಡು ಬಾರಿ 50+ ರನ್ ಬಾರಿಸಿದ ಸಾಧನೆ ಮಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
