ಡೇಟಿಂಗ್ ಗಾಳಿಸುದ್ದಿಗೆ ತೆರೆ ಎಳೆದ ಸಿರಾಜ್-ಜನೈ; ರಕ್ಷಾಬಂಧನ ಆಚರಿಸಿದ ತಾರಾ ಜೋಡಿ!
ಮೊಹಮ್ಮದ್ ಸಿರಾಜ್ ಮತ್ತು ಆಶಾ ಭೋಸ್ಲೆ ಮೊಮ್ಮಗಳು ಜನೈ ನಡುವೆ ಡೇಟಿಂಗ್ ಗಾಳಿಸುದ್ದಿ ಹರಡುತ್ತಿದ್ದಂತೆ, ಸಿರಾಜ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವೀಡಿಯೊ ವೈರಲ್ ಆಗಿದೆ. ಅವರಿಬ್ಬರೂ ಅಣ್ಣ-ತಂಗಿಯಂತೆ ರಕ್ಷಾ ಬಂಧನ ಆಚರಿಸಿದ್ದಾರೆ. ಈ ಮೂಲಕ ಡೇಟಿಂಗ್ ಗಾಳಿಸುದ್ದಿಗೆ ತೆರೆ ಎಳೆದಿದ್ದಾರೆ.

ಡೇಟಿಂಗ್ ಗಾಳಿಸುದ್ದಿಗೆ ತೆರೆ
ಸಿರಾಜ್ ವೈರಲ್
ಸಿರಾಜ್ ಮತ್ತು ಜನೈ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಗಾಳಿಸುದ್ದಿಗೆ ಇದೀಗ ಬ್ರೇಕ್ ಬಿದ್ದಿದೆ. ರಕ್ಷಾ ಬಂಧನದಂದು ಜನೈ, ಸಿರಾಜ್‌ಗೆ ರಾಖಿ ಕಟ್ಟಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಂಗ್ಲೆಂಡ್‌ನಲ್ಲಿ ಧೂಳೆಬ್ಬಿಸಿದ ಸಿರಾಜ್
ಇಂಗ್ಲೆಂಡ್ ಪ್ರವಾಸದಲ್ಲಿ ಸಿರಾಜ್ ಅದ್ಭುತ ಬೌಲಿಂಗ್ ಪ್ರದರ್ಶಿಸಿದರು. ಒಟ್ಟು 23 ವಿಕೆಟ್ ಪಡೆದು, ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.
ಪಾಕ್ ದಿಗ್ಗಜರಿಂದ ಪ್ರಶಂಸೆ
ಇಂಗ್ಲೆಂಡ್ ವಿರುದ್ಧದ ಓವಲ್ ಟೆಸ್ಟ್‌ನಲ್ಲಿ ಸಿರಾಜ್ ಅಮೋಘ ಪ್ರದರ್ಶನಕ್ಕೆ ಪಾಕ್ ಕ್ರಿಕೆಟ್ ದಿಗ್ಗಜ ವಾಸಿಂ ಅಕ್ರಮ್ ಮೆಚ್ಚುಗೆ ವ್ಯಕ್ತಪಡಿಸಿದ್ದರು
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

