MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • Crime
  • ಪವನ್​ ಕಲ್ಯಾಣ್​ಗಾಗಿ ಆ ಜಾಗದಲ್ಲಿ ಅಂದು ಟ್ಯಾಟೂ: ಟೆಕ್ಕಿಗೆ ಇಂದು 10 ಕೋಟಿ ನಾಮ! Bigg Boss ಬ್ಯೂಟಿ ಖತರ್ನಾಕ್​ ಸ್ಟೋರಿ

ಪವನ್​ ಕಲ್ಯಾಣ್​ಗಾಗಿ ಆ ಜಾಗದಲ್ಲಿ ಅಂದು ಟ್ಯಾಟೂ: ಟೆಕ್ಕಿಗೆ ಇಂದು 10 ಕೋಟಿ ನಾಮ! Bigg Boss ಬ್ಯೂಟಿ ಖತರ್ನಾಕ್​ ಸ್ಟೋರಿ

ತೆಲುಗು ನಟಿ ಮತ್ತು ಬಿಗ್ ಬಾಸ್ ಸ್ಪರ್ಧಿ ಆಶು ರೆಡ್ಡಿ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಲಂಡನ್​ ಮೂಲದ ಸಾಫ್ಟ್‌ವೇರ್ ಎಂಜಿನಿಯರ್​ಗೆ ಮದುವೆಯಾಗುವುದಾಗಿ ನಂಬಿಸಿ ಸುಮಾರು 10 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಸಂತ್ರಸ್ತನ ತಂದೆ ದೂರು ನೀಡಿದ್ದಾರೆ. ಈ ಆರೋಪಗಳನ್ನು ಸುಳ್ಳು ಎಂದು ತಳ್ಳಿಹಾಕಿದ್ದಾರೆ.

2 Min read
Author : Suchethana D
Published : Apr 26 2026, 07:51 PM IST
Share this Photo Gallery
  • FB
  • TW
  • Linkdin
  • Whatsapp
16
ಆಶು ರೆಡ್ಡಿ ಮೇಲೆ ಭಯಂಕರ ಆರೋಪ
Image Credit : Social Media

ಆಶು ರೆಡ್ಡಿ ಮೇಲೆ ಭಯಂಕರ ಆರೋಪ

ತೆಲುಗು ನಟಿ ಹಾಗೂ ಎರಡು ಬಾರಿ ಬಿಗ್​ಬಾಸ್​​ ಸ್ಪರ್ಧಿಯಾಗಿದ್ದ ಬ್ಯೂಟಿ ಆಶು ರೆಡ್ಡಿ (Ashu Reddy) ಕೆಲ ತಿಂಗಳ ಹಿಂದೆ ಪ್ರೈವೇಟ್​ ಜಾಗದಲ್ಲಿ ಟ್ಯಾಟೂ ಹಾಕಿಸಿಕೊಂಡು ಸಕತ್​ ಸದ್ದು ಮಾಡಿದ್ದರು. ಅದೂ ಯಾರ ಟ್ಯಾಟೂ ಅಂತೀರಾ. ನಟ ಪವನ್​ ಕಲ್ಯಾಣ್ ಅವರದ್ದು! ಅವರಿಗೆ ಮದ್ವೆಯಾಗಿದ್ರೂ ಹೀಗೆಲ್ಲಾ ಯಾಕೆ ಮಾಡ್ತಿ ಎಂದು ಕೇಳಿದ್ದ ನಟಿ, ನನ್ನ ದೇವರು ಪವನ್, ಅವರಿಗೋಸ್ಕರ ಏನ್ ಬೇಕಾದ್ರೂ ಮಾಡ್ತೀನಿ ಅಂತ ಹೇಳಿದ್ದರು. ಆದ್ರೆ ಈಗ ಮದ್ವೆ ಹೆಸರಲ್ಲಿ 10 ಕೋಟಿ ವಂಚನೆ ಆರೋಪ ಎದುರಿಸುತ್ತಿದ್ದಾರೆ.

26
ಸಾಫ್ಟ್‌ವೇರ್ ಎಂಜಿನಿಯರ್​ಗೆ ದೋಖಾ?
Image Credit : Instagram/ashu reddy

ಸಾಫ್ಟ್‌ವೇರ್ ಎಂಜಿನಿಯರ್​ಗೆ ದೋಖಾ?

ಲಂಡನ್‌ನಲ್ಲಿ ವಾಸಿಸುವ ಧರ್ಮೇಂದ್ರ ಎಂಬ ಸಾಫ್ಟ್‌ವೇರ್ ಎಂಜಿನಿಯರ್ ಅವರನ್ನು ಮದುವೆಯಾಗುವುದಾಗಿ ಭರವಸೆ ನೀಡಿ ಆಶು ರೆಡ್ಡಿ ಅಪಾರ ಪ್ರಮಾಣದ ನಗದು ಮತ್ತು ಚಿನ್ನವನ್ನು ತೆಗೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಟೆಕ್ಕಿ ತಂದೆ ಸತ್ಯನಾರಾಯಣ ಮೂರ್ತಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ನಟಿ ಆಶು ರೆಡ್ಡಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಹೈದರಾಬಾದ್ ಸಿಸಿಎಸ್ ಪೊಲೀಸರು ಜಾಮೀನು ರಹಿತ ಪ್ರಕರಣ ದಾಖಲಿಸಿದ್ದಾರೆ.

Related Articles

Related image1
Shah Rukh ಬೇಡ ಬೇಡ ಅಂದ್ರು ಮಾತ್ರೆ ಕೊಟ್ಟ, ನಿದ್ದೆಯಿಂದ ಎಚ್ಚರವಾದಾಗ- ಆ ಘಟನೆ ನೆನೆದ ನಟಿ ಕಾಜೋಲ್
Related image2
ಸ್ವರ್ಗ ತೋರಿಸ್ತೇವೆಂದು ಹನಿಟ್ರ್ಯಾಪ್​: ವಿವಸ್ತ್ರಗೊಳಿಸಿ ವಿಡಿಯೋ- ಜಾಸ್ಮಿನ್​ ಬಲೆಯಲ್ಲಿ ಪುರುಷರು
36
ಮಗನನ್ನು ಹನಿಟ್ರ್ಯಾಪ್​
Image Credit : Instagram/ashu reddy

ಮಗನನ್ನು ಹನಿಟ್ರ್ಯಾಪ್​

ಆಶು ರೆಡ್ಡಿ ತನ್ನ ಗೆಳೆಯ ಜಯಂತ್ ಜೊತೆ ಈ ನಾಟಕ ಆಡಿ, ವಿವಿಧ ಕಾರಣಗಳನ್ನು ನೀಡಿ ತಮ್ಮ ಮಗನನ್ನು 'ಹನಿಟ್ರ್ಯಾಪ್' ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆಕೆ 5 ಕೆಜಿ ಚಿನ್ನ ಮತ್ತು ಫ್ಲಾಟ್ ಕೇಳಿದ್ದು 3 ಕೋಟಿ ರೂ. ಮೌಲ್ಯದ ವಿಲ್ಲಾಕ್ಕಾಗಿ ಮುಂಗಡ ಹಣ ನೀಡಲಾಗಿದೆ. ಆಶು ರೆಡ್ಡಿ ಒಟ್ಟು 9.83 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಕದ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ತಮ್ಮ ಜಾತಕವನ್ನು ತೋರಿಸಲಾಗಿದ್ದು, ಎಲ್ಲವೂ ಸರಿಯಾಗಿದೆ ಎಂದು ನಂಬಿಸಿ ಮದುವೆಗೆ ಒಪ್ಪಿಕೊಂಡಿದ್ದಳು ಎಂದಿದ್ದಾರೆ.

46
ಕುಟುಂಬಸ್ಥರೂ ಭಾಗಿ?
Image Credit : social media

ಕುಟುಂಬಸ್ಥರೂ ಭಾಗಿ?

ಅಶುರೆಡ್ಡಿಯ ಸಹೋದರಿ ದಿವ್ಯಾ ರೆಡ್ಡಿ ಕೂಡ ಈ ಸಂಬಂಧದಲ್ಲಿ ಪಾಲುದಾರರಾಗಿದ್ದು, ಧರ್ಮೇಂದ್ರ ಕೂಡ ಆಕೆಗೆ 50 ಲಕ್ಷ ರೂ. ನೀಡಿದ್ದಾರೆ. ಹಣವನ್ನು ವಾಪಸ್ ಕೇಳಿದರೆ ತನ್ನ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಆಶು ರೆಡ್ಡಿ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತನ ಕುಟುಂಬ ದುಃಖ ವ್ಯಕ್ತಪಡಿಸುತ್ತಿದೆ.

56
ಪೊಲೀಸರಲ್ಲಿ ದೂರು
Image Credit : social media

ಪೊಲೀಸರಲ್ಲಿ ದೂರು

ಕೊನೆಗೆ ಈ ಬೆದರಿಕೆಗೆ ಜಗ್ಗದೇ ಕುಟುಂಬಸ್ಥರು ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಧರ್ಮೇಂದ್ರ ಅವರ ತಂದೆ ನೀಡಿದ ದೂರಿನ ಆಧಾರದ ಮೇಲೆ, ಸಿಸಿಎಸ್ ಪೊಲೀಸರು ಆಶು ರೆಡ್ಡಿ ಕುಟುಂಬದ ವಿರುದ್ಧ ಬಿಎನ್ಎಸ್ 318(4) ಆರ್/ಡಬ್ಲ್ಯೂ 3(5) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

66
ಸುಳ್ಳು ಆರೋಪ ಎಂದ ನಟಿ
Image Credit : our own

ಸುಳ್ಳು ಆರೋಪ ಎಂದ ನಟಿ

ವಂಚನೆ ಆರೋಪಗಳಿಗೆ ನಟಿ ಆಶು ರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ವಿರುದ್ಧ ಸುಳ್ಳು ಆರೋಪ ಮಾಡದಂತೆ ಕೇಳಿಕೊಂಡಿದ್ದಾರೆ. ಮದುವೆಯ ಹೆಸರಿನಲ್ಲಿ ತಾನು 9.83 ಕೋಟಿ ರೂ. ಗಳಿಸಿದ್ದೇನೆ ಎಂಬುದು ಸುಳ್ಳು ಎಂದು ಅವರು ಹೇಳಿದ್ದಾರೆ. ಸುಳ್ಳು ಪ್ರಚಾರ ಹರಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಆಶು ರೆಡ್ಡಿ ಎಚ್ಚರಿಸಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್
ಮಹಿಳೆಯರು
ಕ್ರೈಮ್ ನ್ಯೂಸ್
ಭಾರತ ಸುದ್ದಿ
ವಂಚನೆ
ಮದುವೆ

Latest Videos
Recommended Stories
Recommended image1
ಮಡಿಕೇರಿ: ಮಾನಸಿಕ ಖಿನ್ನತೆ: ಮನೆಯವರು ಮಲಗಿದ್ದಾಗ ಗುಂಡು ಹಾರಿಸಿಕೊಂಡು ಶಿಕ್ಷಕಿ ಸಾವು
Recommended image2
ಅಮೇರಿಕದಿಂದ ಬೆಂಗಳೂರಿಗೆ ಮದುವೆಗೆ ಬಂದು ₹1 ಕೋಟಿ ಮೌಲ್ಯದ ಚಿನ್ನಾಭರಣ ಕಳೆದುಕೊಂಡ NRI ವೈದ್ಯೆ!
Recommended image3
Mudigere: ಸಾಂಬಾರ್ ಮಾಡಿಲ್ಲ ಅಂತ ಅಪ್ಪ ಗದರಿದ್ದಕ್ಕೆ ಪ್ರಾಣ ಕಳೆದುಕೊಂಡ 22ರ ಮಗಳು
Related Stories
Recommended image1
Shah Rukh ಬೇಡ ಬೇಡ ಅಂದ್ರು ಮಾತ್ರೆ ಕೊಟ್ಟ, ನಿದ್ದೆಯಿಂದ ಎಚ್ಚರವಾದಾಗ- ಆ ಘಟನೆ ನೆನೆದ ನಟಿ ಕಾಜೋಲ್
Recommended image2
ಸ್ವರ್ಗ ತೋರಿಸ್ತೇವೆಂದು ಹನಿಟ್ರ್ಯಾಪ್​: ವಿವಸ್ತ್ರಗೊಳಿಸಿ ವಿಡಿಯೋ- ಜಾಸ್ಮಿನ್​ ಬಲೆಯಲ್ಲಿ ಪುರುಷರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved