Mudigere: ಸಾಂಬಾರ್ ಮಾಡಿಲ್ಲ ಅಂತ ಅಪ್ಪ ಗದರಿದ್ದಕ್ಕೆ ಪ್ರಾಣ ಕಳೆದುಕೊಂಡ 22ರ ಮಗಳು
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನಲ್ಲಿ, ಸಾಂಬಾರ್ ಮಾಡಿಲ್ಲವೆಂದು ತಂದೆ ಗದರಿದ್ದಕ್ಕೆ ಮನನೊಂದು 22 ವರ್ಷದ ಯುವತಿಯೊಬ್ಬಳು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ. ತಂದೆ ಪಕ್ಕದ ಮನೆಯಿಂದ ಸಾಂಬಾರ್ ತರುವಷ್ಟರಲ್ಲಿ ಮಗಳು ನೇಣಿಗೆ ಶರಣಾಗಿದ್ದು, ಈ ಕುರಿತು ಗೋಣೀಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿ ಆತ್ಮ*ಹತ್ಯೆ
ಸಾಂಬಾರ್ ಮಾಡಿಲ್ಲವೆಂದು ಅಪ್ಪ ಗದರಿದ್ದಕ್ಕೆ 22 ವರ್ಷದ ಮಗಳು ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸೌಜನ್ಯ ಪೂಜಾರಿ (22) ಮೃತ ದುರ್ದೈವಿ.
ಸಾಂಬಾರ್ ತೆಗೆದುಕೊಂಡು ಬರಲು ಪಕ್ಕದ್ಮನೆಗೆ ಹೋದ ಅಪ್ಪ
ಶನಿವಾರ ಬೆಳಗ್ಗೆ ಸಾಂಬಾರ್ ಮಾಡಲು ಬೇಕಾಗುವ ತರಕಾರಿಯನ್ನು ಸೌಜನ್ಯ ತಂದು ಕೊಟ್ಟಿದ್ದರು. ಮಧ್ಯಾಹ್ನ ಊಟಕ್ಕೆ ಬಂದಾಗ ಸೌಜನ್ಯ ಸಾಂಬಾರ್ ಮಾಡಿರಲಿಲ್ಲ. ಇದರಿಂದ ಕೋಪಗೊಂಡಿದ್ದ ತಂದೆ ಮಗಳಿಗೆ ಸ್ವಲ್ಪ ಗದರಿದ್ದರು. ಮಗಳಿಗೆ ಬೈದ ಅಪ್ಪ ಸಾಂಬರ್ ತರಲು ಪಕ್ಕದ ಮನೆಗೆ ಹೋಗಿದ್ದರು.
ತಂದೆ ಮಾತುಗಳಿಂದ ನೊಂದ ಮಗಳು
ತಂದೆಯ ಮಾತುಗಳಿಂದ ನೊಂದ ಸೌಜನ್ಯ ನೇಣುಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಪಕ್ಕದ್ಮನೆಯಿಂದ ಸಾಂಬಾರ್ ತೆಗೆದುಕೊಂಡು ಬರುವಷ್ಟರಲ್ಲಿ ಸೌಜನ್ಯ ಪ್ರಾಣ ಕಳೆದುಕೊಂಡಿದ್ದರು.
ಇದನ್ನೂ ಓದಿ: Dharwad: ಹೈದರ್ಶಾವಲಿ ದರ್ಗಾ ಅಭಿವೃದ್ಧಿಗೆ ₹ 25 ಲಕ್ಷ ಅನುದಾನ ಬಿಡುಗಡೆ; ಭೂಮಿಪೂಜೆ
ಗೋಣೀಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗೆ ರವಾನಿಸಿ ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಗೋಣೀಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: 2 ವರ್ಷ ಹಿಂದೆ ಓಡಿಹೋಗಿದ್ದ ಪತ್ನಿ ಮತದಾನ ವೇಳೆ ಸಿಕ್ಕಿಬಿದ್ಲು: ಹೆಂಡ್ತಿ ಹಿಡಿಯಲು ನೆರವಾದ SIR!

