- Home
- Entertainment
- Bigg Boss Kannada 12: ರಕ್ಷಿತಾ ಶೆಟ್ಟಿ ರಿಕ್ವೆಸ್ಟ್ ಕೇಳಿ ಬಿದ್ದು ಬಿದ್ದು ನಕ್ಕ ವೀಕ್ಷಕರು; ಪುಟ್ಟಿಗೆ ಇದೆಂಥಾ ಆಸೆ?
Bigg Boss Kannada 12: ರಕ್ಷಿತಾ ಶೆಟ್ಟಿ ರಿಕ್ವೆಸ್ಟ್ ಕೇಳಿ ಬಿದ್ದು ಬಿದ್ದು ನಕ್ಕ ವೀಕ್ಷಕರು; ಪುಟ್ಟಿಗೆ ಇದೆಂಥಾ ಆಸೆ?
Bigg Boss Kannada viral clips ಬಿಗ್‌ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಮತ್ತು ಸ್ಪಂದನಾ ಸೋಮಣ್ಣ ಅವರ ಸಂಭಾಷಣೆಯ ವಿಡಿಯೋ ವೈರಲ್ ಆಗಿದೆ. ತಮ್ಮ ಧಾರಾವಾಹಿಯಲ್ಲಿ ಅಳುವ ಪಾತ್ರದ ಬಗ್ಗೆ ಸ್ಪಂದನಾ ಹೇಳಿದಾಗ, 'ಒಂಚೂರು ಅತ್ತು ತೋರಿಸಿ' ಎಂದು ರಕ್ಷಿತಾ ಕೇಳಿದ್ದು ನೆಟ್ಟಿಗರ ಗಮನ ಸೆಳೆದಿದೆ.

ರಕ್ಷಿತಾ ಶೆಟ್ಟಿ ಮತ್ತು ಸ್ಪಂದನಾ ಸೋಮಣ್ಣ ಸಂಭಾಷಣೆ
ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋ 24*7 ನೇರಪ್ರಸಾರವಾಗುತ್ತದೆ. ಬಿಗ್‌ಬಾಸ್ ವೀಕ್ಷಕರು ಸಮಯ ಸಿಕ್ಕಾಗೆಲ್ಲಾ ಆನ್‌ಲೈನ್‌ನಲ್ಲಿಯೂ ಶೋ ನೋಡುತ್ತಿರುತ್ತಾರೆ. ಕೆಲ ಅಭಿಮಾನಿಗಳು ಇಲ್ಲಿಯ ದೃಶ್ಯಗಳನ್ನು ರೆಕಾರ್ಡ್ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ರಕ್ಷಿತಾ ಶೆಟ್ಟಿ ಮತ್ತು ಸ್ಪಂದನಾ ಸೋಮಣ್ಣ ಸಂಭಾಷಣೆಯ ವಿಡಿಯೋ ಕ್ಲಿಪ್ ವೈರಲ್ ಆಗುತ್ತಿದೆ.
ವ್ಲಾಗ್ ನೋಡಬೇಕೆಂದ ಸ್ಪಂದನಾ ಸೋಮಣ್ಣ
ಬೆಡ್‌ರೂಮ್‌ನಲ್ಲಿ ರಕ್ಷಿತಾ ಶೆಟ್ಟಿ ಮತ್ತು ಸ್ಪಂದನಾ ಸೋಮಣ್ಣ ಮಾತನಾಡುತ್ತಾ ಕುಳಿತಿರುತ್ತಾರೆ. ಈ ವೇಳೆ ನಾನು ಹೊರಗೆ ಹೋದ್ಮೇಲೆ ನಿಮ್ಮ ವ್ಲಾಗ್ ನೋಡಬೇಕು. ವ್ಲಾಗ್ ಹೇಗಿರುತ್ತೆ ಎಂದು ನೋಡುವಾಸೆ ಎಂದು ರಕ್ಷಿತಾಗೆ ಸ್ಪಂದನಾ ಹೇಳುತ್ತಾರೆ. ಇದಕ್ಕೆ ರಕ್ಷಿತಾ, ನಾನು ಇಲ್ಲಿ ಹೇಗೆ ಇದ್ದೀನಿಯೋ ಹಾಗೆಯೇ ಹೊರಗೂ ಇದ್ದೀನಿ ಎಂದು ಹೇಳುತ್ತಾರೆ.
ಧಾರಾವಾಹಿ ಪಾತ್ರದ ಬಗ್ಗೆ ಸ್ಪಂದನಾ ಮಾತು
ನಾನು ಸಹ ನಿಮ್ಮ ಆಕ್ಟಿಂಗ್ ನೋಡಬೇಕು. ನೀವು ಸೀರಿಯಲ್ ಮಾಡ್ತೀರಿ ಅಲ್ಲವಾ? ಅದನ್ನು ನಾನು ನೋಡಬೇಕು ಎಂದು ರಕ್ಷಿತಾ ಶೆಟ್ಟಿ ಹೇಳುತ್ತಾರೆ. ಸೀರಿಯಲ್‌ನಲ್ಲಿ ನಾನು ತುಂಬಾ ದೊಡ್ಡವಳಂತೆ ಕಾಣಿಸುತ್ತೀನಿ. ಸೀರಿಯಲ್‌ನಲ್ಲಿ ನಾನು ತುಂಬಾ ಅಳುತ್ತಿರುತ್ತೇನೆ ಎಂದು ಸ್ಪಂದನಾ ಸೋಮಣ್ಣ ತಮ್ಮ ಧಾರಾವಾಹಿ ಬಗ್ಗೆ ಹೇಳುತ್ತಾರೆ.
ಒಂಚೂರು ಅತ್ತು ತೋರಿಸಿ
ಸ್ಪಂದನಾ ಮಾತುಗಳನ್ನು ಆಲಿಸಿದ ರಕ್ಷಿತಾ ಶೆಟ್ಟಿ, ಒಂಚೂರು ಅತ್ತು ತೋರಸ್ತೀರಾ ಎಂದು ಕೇಳುತ್ತಾರೆ. ರಕ್ಷಿತಾ ಶೆಟ್ಟಿ ಮಾತುಗಳನ್ನು ಕೇಳಿದ ನೆಟ್ಟಿಗರು, ನಕ್ಕು ನಕ್ಕು ಸುಸ್ತಾಗಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು, ಅದಕ್ಕೆ ನಮಗೆ ಇಷ್ಟವಾಗೋದು ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಮನೆಯಲ್ಲಿ ಮೊದಲ ಬಾರಿಗೆ ಗಿಲ್ಲಿ ನಟ ರೋಸ್ಟ್
ಸೇವ್ ಆಗ್ತಾರಾ ರಕ್ಷಿತಾ ಶೆಟ್ಟಿ?
ಈ ವಾರ ಮನೆಯಿಂದ ಹೊರಗೆ ಹೋಗಲು ರಕ್ಷಿತಾ ಶೆಟ್ಟಿ ನಾಮಿನೇಟ್ ಆಗಿದ್ದಾರೆ. ಈ ವಾರ ರಕ್ಷಿತಾ ಶೆಟ್ಟಿ ತೆಗೆದುಕೊಂಡ ನಿರ್ಧಾರಗಳು ಮನೆಯಲ್ಲಿರೋ ಎಲ್ಲಾ ಸದಸ್ಯರ ನಿದ್ದೆಗೆಡಿಸಿದೆ. ರಘು ಕ್ಯಾಪ್ಟನ್ ಆದ ಬಳಿಕವಂತೂ ಮನೆಯ ಸದಸ್ಯರೆಲ್ಲರೂ ರಕ್ಷಿತಾ ಶೆಟ್ಟಿ ಆಟದ ವೈಖರಿ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: BBK 12: ಬಿಗ್‌ಬಾಸ್ ಕೊಟ್ಟ ಆಘಾತಕ್ಕೆ ಮಾಳು ಕಣ್ಣೀರು: ಯಾಕಿಂಗ್ ಆಯ್ತು? ವೀಕ್ಷಕರ ಬೇಸರ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

