- Home
- Entertainment
- Amruthadhaare Serial: ಜೈದೇವನ ಮನೆಯಲ್ಲೇ ಮಲ್ಲಿ ಮದ್ವೆ ಮಾತುಕತೆ! ಭೂಮಿ ಮಿಸ್ ಅಂದ್ರೆ ಸುಮ್ನೇನಾ?
Amruthadhaare Serial: ಜೈದೇವನ ಮನೆಯಲ್ಲೇ ಮಲ್ಲಿ ಮದ್ವೆ ಮಾತುಕತೆ! ಭೂಮಿ ಮಿಸ್ ಅಂದ್ರೆ ಸುಮ್ನೇನಾ?
ಅಮೃತಧಾರೆ ಸೀರಿಯಲ್ನಲ್ಲಿ ಯಾರೂ ಊಹಿಸದ ಧಮಾಕಾ ನಡೆದುಬಿಟ್ಟಿದೆ. ಜೈದೇವನ ಮನೆಯಲ್ಲಿಯೇ ಭೂಮಿಕಾ ಮಲ್ಲಿಯ ಮದುವೆಯ ಮಾತುಕತೆ ನಡೆಸಲು ಹುಡುಗನನ್ನು ಕರೆಸಿದ್ದಾಳೆ. ಮುಂದೇನು?

ಯಾರೂ ಊಹಿಸದ ಧದಮಾಕಾ
ಅಮೃತಧಾರೆ ಸೀರಿಯಲ್ನಲ್ಲಿ ಯಾರೂ ಊಹಿಸದ ಧಮಾಕಾ ನಡೆದುಬಿಟ್ಟಿದೆ. ಯಾವ ಕಾರಣಕ್ಕೂ ಶಕುಂತಲಾ ಮತ್ತು ಜೈದೇವನ ಚಳಿ ಬಿಡಿಸುವ ತವಕದಲ್ಲಿ ಇದ್ದಾಳೆ ಭೂಮಿಕಾ. ಇದೇ ಕಾರಣಕ್ಕೆ ಈಗ ನೇರವಾಗಿ ಜೈದೇವನ ಮನೆಗೆ ಮಲ್ಲಿಯನ್ನು ನೋಡಲು ಹುಡುಗ ಮತ್ತು ಅವನ ಮನೆಯವರನ್ನು ಭೂಮಿಕಾ ಕರೆಸಿದ್ದಾಳೆ. ಜೈದೇವ ಮತ್ತು ಅವನ ಹೆಂಡ್ತಿ ದಿಯಾಳಿಗೆ ಹೊಟ್ಟೆಕಿಚ್ಚು ತರಿಸುವ ಸಲುವಾಗಿ ಮಲ್ಲಿಯ ಮದುವೆಯ ಮಾತುಕತೆಯನ್ನು ಅವರ ಎದುರೇ ಮಾಡಿದ್ದಾಳೆ.
ಜೈದೇವನ ಮನೆಯಲ್ಲಿಯೇ ಹೆಣ್ಣುನೋಡುವ ಶಾಸ್ತ್ರ
ದಿಯಾಳಿಗೆ ಗಾಬರಿಯಾಗಿ ಜೈದೇವನನ್ನು ಕರೆಸಿದ್ದಾಳೆ. ಮೊದಲಿಗೆ ದಿಯಾಳನ್ನು ಗಂಡಿನ ಕಡೆಯವರಿಗೆ ಪರಿಚಯ ಮಾಡಿಸಿದ ಭೂಮಿಕಾ, ಇವಳು ಮಲ್ಲಿಯ ಮಾಜಿ ಗಂಡನನ್ನು ಈಗ ಕಟ್ಟಿಕೊಂಡವಳು ಎಂದಿದ್ದಾಳೆ. ಕೊನೆಗೆ ಮನೆಗೆ ಬಂದ ಜೈದೇವನನ್ನು ನೋಡಿ ಇವನೇ ಮಲ್ಲಿಯ ಮಾಜಿ ಗಂಡ ಎಂದಿದ್ದಾನೆ. ಅವರನ್ನು ನೋಡಿ ಜೈದೇವ್ ಮತ್ತು ದಿಯಾ ಬರಸಿಡಿಲು ಬಡಿದವರಂತೆ ನಿಂತಿದ್ದಾರೆ.
ಕಣ್ಣು-ಕಣ್ಣು ಸೇರಾಯ್ತು
ಕೊನೆಗೆ ಮಲ್ಲಿಗೆ ಹೋಗಿ ಕಾಫಿ ಮಾಡಿಕೊಂಡು ಬರುವಂತೆ ಭೂಮಿಕಾ ಹೇಳಿದ್ದಾಳೆ. ದಿಯಾಳಿಗೂ ಹೋಗಿ ಸಹಾಯ ಮಾಡು ಎಂದಿದ್ದಾಳೆ. ಇವೆಲ್ಲವನ್ನೂ ನೋಡಿದರೆ ಮಲ್ಲಿ ಅದೆಂಥಾ ಖತರ್ನಾಕ್ ಪ್ಲ್ಯಾನ್ ಮಾಡಿದ್ದಾಳೆ ಎನ್ನುವುದು ತಿಳಿಯುತ್ತದೆ. ಮಲ್ಲಿಗೆ ಮದುವೆ ಮಾಡಿಸುವ ಉದ್ದೇಶ ಇಲ್ಲದಿದ್ದರೂ ಜೈದೇವನನ್ನು ಮಣ್ಣುಮುಕ್ಕಿಸಲು ಈ ರೀತಿ ಮಾಡ್ತಿರೋದು ತಿಳಿಯುತ್ತದೆ.
ವಿನಲ್ನಗಳ ಬಂಡವಾಳ ಬಯಲು
ಏಕೆಂದರೆ, ಇದಾಗಲೇ ವಿಲನ್ಗಳ ಮುಖವಾಡ ಭೂಮಿಕಾ ಮುಂದೆ ಬಟಾಬಯಲಾಗಿದೆ. ಅತ್ತೆ ಶಕುಂತಲಾ ಎಷ್ಟು ದೊಡ್ಡ ಸಂಚು ಮಾಡಿದ್ದಾಳೆ ಎಂದು ಸಾಕ್ಷಿ ಸಹಿತ ಪೆದ್ದು ಗಂಡನಿಗೆ ತೋರಿಸಿದರೂ, ಆತನಿಗೆ ತನ್ನ ಚಿಕ್ಕಮ್ಮನೇ ಸರ್ವಸ್ವ. ಅವಳ ವಿರುದ್ಧ ಒಂದೇ ಒಂದು ಮಾತು ಕೇಳಲು ಆತನಿಗೆ ಆಗುವುದಿಲ್ಲ. ಇದೇ ಕಾರಣಕ್ಕೆ ಭೂಮಿಕಾಗೆ ಭಾರಿ ಸೋಲು ಉಂಟಾಗಿದೆ.
ಬೆಮಕಿ ಚೆಂಡಾದ ಭೂಮಿಕಾ
ಆದರೆ ಆಕೆ ಬರೀ ಭೂಮಿಕಾ ಅಲ್ಲ, ಬೆಂಕಿಯ ಚೆಂಡು. ಇದೇ ವೇಳೆ ಮನೆಗೆ ನುಗ್ಗಿ ಮನೆಯಲ್ಲಿ ಮಲಗಿದ್ದ ಭೂಮಿಕಾಳ ಮಗುವನ್ನು ಕೊಲ್ಲಲು ಮಾಸ್ಕ್ ಹಾಕಿಕೊಂಡು ಬಂದಿದ್ದ ಜೈದೇವ. ಆದರೆ ಮಲ್ಲಿ ಆತನನ್ನು ಹೊಡೆದು ಓಡಿಸಿದ್ದಳು.ಆದರೆ ಆತನೇ ಜೈದೇವ ಎನ್ನುವುದು ತಿಳಿದಿರಲಿಲ್ಲ
ಮಾಸ್ಕ್ ಮ್ಯಾನ್ ಬಯಲಿಗೆ...
ಇದೀಗ ಸೃಜನ್ ಈ ಬಗ್ಗೆ ತನಿಖೆ ನಡೆಸಿದಾಗ ಮಾಸ್ಕ್ಮ್ಯಾನ್ ಜೈದೇವ ಎನ್ನುವುದು ತಿಳಿದಿದೆ. ಇದನ್ನು ಗೌತಮ್ಗೆ ಹೇಳೋಣ ಎಂದು ಸೃಜನ್ ಹೇಳಿದಾಗ ಭೂಮಿಕಾ ಅದನ್ನು ಒಪ್ಪಲಿಲ್ಲ. ಇದಕ್ಕೆ ಕಾರಣ, ಇದನ್ನೂ ಆತ ನಂಬದಿದ್ದರೆ ಎನ್ನುವ ಸ್ಥಿತಿ ಅವಳದ್ದು. ಅಷ್ಟೇ ಅಲ್ಲದೇ ಈ ಮಾಸ್ಕ್ಮ್ಯಾನ್ ಜೈದೇವನೇ ಎಂದು ಸಾಬೀತು ಮಾಡುವುದು ಆಕೆಗೆ ಕಷ್ಟವೂ ಆಗಿದೆ. ಹಾಗೆಂದು ಆಕೆ ಸುಮ್ಮನೇ ಬಿಡಲಿಲ್ಲ. ಸೀದಾ ಜೈದೇವ ಇರುವಲ್ಲಿಗೆ ಹೋಗಿದ್ದಳು. ಆ ಸಮಯದಲ್ಲಿ ಜೈದೇವ ಗೌತಮ್ ಬಗ್ಗೆ ಹಗುರವಾಗಿ ಮಾತನಾಡಿದ್ದಾನೆ. ಭೂಮಿಕಾಗೂ ಏಕವಚನದಲ್ಲಿ ಬೈದಿದ್ದಾನೆ. ಗಂಡನ ಬಗ್ಗೆ ಇಲ್ಲಸಲ್ಲದ್ದು ಹೇಳಿದ್ರೆ ಭೂಮಿಕಾ ಸುಮ್ಮನೇ ಇರ್ತಾಳಾ? ಆಗ ಶಕುಂತಲಾ ಕೆನ್ನೆಗೆ ಬಿಗಿದಂತೆ ಜೈದೇವ್ಗೂ ಕಪಾಳಮೋಕ್ಷ ಮಾಡಿದ್ದಾಳೆ.
ಜೈದೇವ ಕಂಗಾಲು
ಈ ಅನಿರೀಕ್ಷಿತ ಘಟನೆಯಿಂದ ಜೈದೇವ ಕಂಗಾಲಾಗಿ ಹೋಗಿದ್ದಾನೆ. ನಿನ್ನನ್ನು ಸುಮ್ಮನೇ ಬಿಡುವುದಿಲ್ಲ. ನನ್ನನ್ನು ಮುಟ್ಟಿ ನೀನು ದೊಡ್ಡ ತಪ್ಪು ಮಾಡಿದ್ದಿ ಎಂದಿದ್ದಾನೆ. ಅದಕ್ಕೆ ಭೂಮಿಕಾ ನಿಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ. ಅಣ್ಣ ಶ್ರಮಪಟ್ಟು ಕಟ್ಟಿದ ಕೋಟೆಯಲ್ಲಿ, ಮಜ ಮಾಡಿಕೊಂಡು ಇದ್ದವರು ನೀವು. ನಿಮ್ಮದೇ ಐಡೆಂಟಿಟಿ ಏನಿದೆ ಎಂದು ಪ್ರಶ್ನಿಸಿದ್ದಾಳೆ.
ಶಕುಂತಲಾಗೂ ಕೆಟ್ಟ ಗ್ರಹಚಾರ
ಒಟ್ಟಿನಲ್ಲಿ ಅತ್ತ ಶಕುಂತಲಾ ವರ್ಸಸ್ ಭೂಮಿಕಾ ಆಗಿದ್ರೆ ಇತ್ತ ಜೈದೇವ್ ವರ್ಸಸ್ ಭೂಮಿಕಾ ಆಗಿದೆ. ಅದೇ ಇನ್ನೊಂದೆಡೆ, ಭಾಗ್ಯಳಿಗೆ ಹೊಡೆಯಲು ಹೋದಾಗ ಭಾಗ್ಯ ಶಕುಂತಲಾಳ ಕೈಯನ್ನು ತಿರುಚಿದ್ದಾಳೆ. ಇದನ್ನು ನೋಡಿ ಶಕುಂತಲಾ ಥರಥರ ನಡುಗಿ ಹೋಗಿದ್ದಾಳೆ. ಭಾಗ್ಯ ಇಷ್ಟು ಹುಷಾರಾಗಿರುವುದು ಆಕೆಗೆ ತಿಳಿದಿರಲಿಲ್ಲ. ಒಟ್ಟಿನಲ್ಲಿ ಅಮೃತಧಾರೆ ಸೀರಿಯಲ್ ದಿನದಿಂದ ದಿನಕ್ಕೆ ಕುತೂಹಲದ ತಿರುವು ಪಡೆಯುತ್ತಿರುವ ಹಿನ್ನೆಲೆಯಲ್ಲಿ, ವೀಕ್ಷಕರಿಗೆ ಸಕತ್ ಖುಷಿ ಕೊಡುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

