ಅಕ್ಷಯ ತೃತೀಯಕ್ಕೆ 'ಗೋಲ್ಡನ್ ಗರ್ಲ್' ರಶ್ಮಿಕಾ ಮಂದಣ್ಣ ಮಿಂಚು: ಹಳದಿ-ಚಿನ್ನದ ಲುಕ್ ವೈರಲ್
ಈ ಹಬ್ಬದ ಸೀಸನ್‌ನಲ್ಲಿ ರಶ್ಮಿಕಾ ಮಂದಣ್ಣ ಹಳದಿ ಮತ್ತು ಗೋಲ್ಡನ್ ಬಣ್ಣದ ಉಡುಗೆಗಳಿಗೆ ಹೆಚ್ಚು ಒಲವು ತೋರುತ್ತಿದ್ದಾರೆ. ಇದು ಅವರ 'ಗೋಲ್ಡನ್ ಗರ್ಲ್' ಇಮೇಜ್‌ಗೆ ಮತ್ತಷ್ಟು ಮೆರುಗು ನೀಡಿದೆ. ಸಿನಿರಂಗದಲ್ಲಿ ಅವರ ಯಶಸ್ಸು ಮತ್ತು ಅಭಿಮಾನಿಗಳಲ್ಲಿ ಹೆಚ್ಚುತ್ತಿರುವ ಅವರ ಕ್ರೇಜ್‌ಗೆ ಇದು ಕನ್ನಡಿ ಹಿಡಿದಂತಿದೆ.
17

Image Credit : PR Handout
ಹಬ್ಬದ ಕಳೆ
ಸಮೃದ್ಧಿ, ಹೊಸ ಆರಂಭ ಮತ್ತು ಬಂಗಾರದ ಸಂಕೇತವಾದ ಅಕ್ಷಯ ತೃತೀಯದ ದಿನದಂದು ರಶ್ಮಿಕಾ ಮಂದಣ್ಣ ಹಬ್ಬದ ಕಳೆ ಹೆಚ್ಚಿಸಿದ್ದಾರೆ. ಸದ್ಯ ಪ್ಯಾನ್-ಇಂಡಿಯಾ ನಂ.1 ನಾಯಕಿಯಾಗಿರುವ ರಶ್ಮಿಕಾ, ಸತತ ಬಾಕ್ಸ್ ಆಫೀಸ್ ಹಿಟ್‌ಗಳನ್ನು ನೀಡುತ್ತಿದ್ದಾರೆ. ತೆರೆಯ ಮೇಲೆ ಹಾಗೂ ತೆರೆಯ ಹೊರಗೆ ತಮ್ಮ ಪ್ರಭಾವವನ್ನು ಉಳಿಸಿಕೊಂಡಿದ್ದಾರೆ.
27
Image Credit : PR Handout
ಗೋಲ್ಡನ್ ಗರ್ಲ್
ತನ್ನ ಸರಳ ಸೌಂದರ್ಯ ಮತ್ತು ಆಕರ್ಷಕ ಸ್ಟೈಲ್‌ಗೆ ಹೆಸರುವಾಸಿಯಾದ ರಶ್ಮಿಕಾ, ಈ ಹಬ್ಬದ ಸೀಸನ್‌ನಲ್ಲಿ ಹಳದಿ ಮತ್ತು ಗೋಲ್ಡನ್ ಬಣ್ಣದ ಉಡುಗೆಗಳಿಗೆ ಹೆಚ್ಚು ಒಲವು ತೋರಿದ್ದಾರೆ. ಇದು ಅವರ 'ಗೋಲ್ಡನ್ ಗರ್ಲ್' ಇಮೇಜ್‌ಗೆ ಮತ್ತಷ್ಟು ಮೆರುಗು ನೀಡಿದೆ. ಸಿನಿರಂಗದಲ್ಲಿ ಅವರ ಯಶಸ್ಸು ಮತ್ತು ಅಭಿಮಾನಿಗಳಲ್ಲಿ ಹೆಚ್ಚುತ್ತಿರುವ ಅವರ ಕ್ರೇಜ್‌ಗೆ ಇದು ಕನ್ನಡಿ ಹಿಡಿದಂತಿದೆ.
37
Image Credit : PR Handout
ಸಾಂಪ್ರದಾಯಿಕ ಲುಕ್
ರಶ್ಮಿಕಾ ಮಂದಣ್ಣ ಈ ಸಾಂಪ್ರದಾಯಿಕ ಲುಕ್‌ನಲ್ಲಿ ಸಖತ್ ಸುಂದರವಾಗಿ ಕಾಣುತ್ತಿದ್ದಾರೆ. ಅವರು ಗೆರೆಗಳ ವಿನ್ಯಾಸವಿರುವ ಸಾಸಿವೆ-ಹಳದಿ ಬಣ್ಣದ ಸೀರೆಯನ್ನು ಧರಿಸಿದ್ದಾರೆ. ಅಕ್ಷಯ ತೃತೀಯದ ಗೋಲ್ಡನ್ ಸ್ಪಿರಿಟ್‌ಗೆ ಇದು ಹೇಳಿ ಮಾಡಿಸಿದಂತಿದೆ. ಹಸಿರು ಕಲ್ಲಿನ ಅಲಂಕಾರವಿರುವ ಗೋಲ್ಡ್ ಚೋಕರ್ ನೆಕ್ಲೇಸ್ ಮತ್ತು ಹೂವಿನ ವಿನ್ಯಾಸದ ಕಿವಿಯೋಲೆಗಳು ಈ ಉಡುಗೆಗೆ ಹಬ್ಬದ ಕಳೆ ನೀಡಿವೆ.
47
Image Credit : PR Handout
ಎಥ್ನಿಕ್ ಲುಕ್
ರಶ್ಮಿಕಾ ಮಂದಣ್ಣ ಈ ಹೈ-ಗ್ಲಾಮ್ ಎಥ್ನಿಕ್ ಲುಕ್‌ನಲ್ಲಿ ಬೆರಗುಗೊಳಿಸಿದ್ದಾರೆ. ಅವರು ಹೊಳೆಯುವ ಕಂಚು-ಚಿನ್ನದ ಬಣ್ಣದ ಲೆಹೆಂಗಾ ಸೆಟ್ ಧರಿಸಿದ್ದಾರೆ. ಅಕ್ಷಯ ತೃತೀಯದ ಸಂಭ್ರಮಕ್ಕೆ ಇದು ಸೂಕ್ತವಾಗಿದೆ. ಈ ಉಡುಗೆಯಲ್ಲಿನ ಹೆವಿ ಸೀಕ್ವಿನ್ ವರ್ಕ್ ಮತ್ತು ಮೆಟಾಲಿಕ್ ಫಿನಿಶ್, ಸ್ಪಾಟ್‌ಲೈಟ್ ಅಡಿಯಲ್ಲಿ 'ಲಿಕ್ವಿಡ್ ಗೋಲ್ಡ್' ಎಫೆಕ್ಟ್ ನೀಡುತ್ತಿದೆ.
57
Image Credit : PR Handout
ನೋ-ಮೇಕಪ್ ಲುಕ್
ಈ ಸುಂದರ ಸೀರೆಯಲ್ಲಿ ರಶ್ಮಿಕಾ ಮಂದಣ್ಣನವರ ಬ್ಯೂಟಿಫುಲ್ ಲುಕ್, ಅಕ್ಷಯ ತೃತೀಯದ ಹಬ್ಬದ ಕಳೆಯನ್ನು ಹೆಚ್ಚಿಸಿದೆ. ಸೀರೆಯಲ್ಲಿನ ಸಂಕೀರ್ಣವಾದ ಥ್ರೆಡ್‌ವರ್ಕ್ ಮತ್ತು ಮಿರರ್-ವರ್ಕ್ ಬಾರ್ಡರ್ ಗಮನ ಸೆಳೆಯುತ್ತಿದೆ. ಬ್ಯಾಕ್‌ಲೆಸ್ ಬ್ಲೌಸ್ ಮತ್ತು ಅದರ ಟಸೆಲ್ ಡೀಟೇಲಿಂಗ್ ಸಾಂಪ್ರದಾಯಿಕ ಉಡುಗೆಗೆ ಆಧುನಿಕ ಸ್ಪರ್ಶ ನೀಡಿದೆ. ಸ್ಲೀಕ್ ಬನ್, ಬಿಂದಿ ಮತ್ತು 'ನೋ-ಮೇಕಪ್' ಮೇಕಪ್ ಲುಕ್ ಇದರ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.
67
Image Credit : PR Handout
ಲುಕ್‌ಗೆ ಮತ್ತಷ್ಟು ಮೆರುಗು
ರಶ್ಮಿಕಾ ಮಂದಣ್ಣ ಈ ಕಿತ್ತಳೆ ಮತ್ತು ಚಿನ್ನದ ಬಣ್ಣದ ಉಡುಗೆಯಲ್ಲಿ ರಾಜಮನೆತನದ ವೈಭವದಂತೆ ಕಾಣುತ್ತಿದ್ದಾರೆ. ಅಕ್ಷಯ ತೃತೀಯಕ್ಕೆ ಇದು ಮತ್ತೊಂದು ಅದ್ಭುತ ಆಯ್ಕೆಯಾಗಿದೆ. ಸಾಂಪ್ರದಾಯಿಕ ಪೈಸ್ಲಿ ಎಂಬ್ರಾಯ್ಡರಿ ಮತ್ತು ಹೊಳೆಯುವ ಮೆಟಾಲಿಕ್ ದುಪಟ್ಟಾ ಈ ಉಡುಗೆಯ ಅಂದವನ್ನು ಹೆಚ್ಚಿಸಿದೆ. ದೊಡ್ಡ ಗಾತ್ರದ ಆ್ಯಂಟಿಕ್-ಗೋಲ್ಡ್ ಆಭರಣಗಳು, ವಿಶೇಷವಾಗಿ ಮಾಂಗ್ ಟಿಕ್ಕಾ ಮತ್ತು ಸ್ಟೇಟ್‌ಮೆಂಟ್ ಚೋಕರ್ ಈ ಲುಕ್‌ಗೆ ಮತ್ತಷ್ಟು ಮೆರುಗು ನೀಡಿವೆ.
77
Image Credit : PR Handout
ಬ್ರೈಡಲ್ ಸ್ಫೂರ್ತಿ
ಅವರ ಕೂದಲನ್ನು ಮೃದುವಾದ ಅಲೆಗಳಂತೆ ಸ್ಟೈಲ್ ಮಾಡಲಾಗಿದೆ. ಮ್ಯೂಟೆಡ್, ಅರ್ಥಿ ಮೇಕಪ್ ಪ್ಯಾಲೆಟ್ ಬಳಸಿರುವುದರಿಂದ, ಸಾಂಪ್ರದಾಯಿಕ ಕರಕುಶಲತೆ ಮತ್ತು ಆಧುನಿಕ ಬ್ರೈಡಲ್ ಸ್ಫೂರ್ತಿಯ ನಡುವೆ ಅದ್ಭುತ ಸಮತೋಲನವನ್ನು ಸಾಧಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos

