- Home
- Entertainment
- Su From So ಸಿನಿಮಾ ಬೇಬಿಕ್ಕ ಪಾತ್ರದಲ್ಲಿ ನಟಿಸಿದ ಕಲಾವಿದೆ ಯಾರು ಅಂತ ಗೊತ್ತಾದ್ರೆ ಆಶ್ವರ್ಯಚಕಿತರಾಗ್ತೀರಿ!
Su From So ಸಿನಿಮಾ ಬೇಬಿಕ್ಕ ಪಾತ್ರದಲ್ಲಿ ನಟಿಸಿದ ಕಲಾವಿದೆ ಯಾರು ಅಂತ ಗೊತ್ತಾದ್ರೆ ಆಶ್ವರ್ಯಚಕಿತರಾಗ್ತೀರಿ!
Kannada Movie Su From So ಸಿನಿಮಾದಲ್ಲಿ ಬೇಬಿಕ್ಕ ಪಾತ್ರದಲ್ಲಿ ನಟಿಸಿರುವ ರಂಗಭೂಮಿ ಕಲಾವಿದೆ ಪರಿಚಯ. ಚಿತ್ರದಲ್ಲಿ ಮಗನ ಚೇತರಿಕೆಗಾಗಿ ಚಡಪಡಿಸುವ ತಾಯಿಯಾಗಿ ಪೂರ್ಣಿಮಾ ಅವರ ಅಭಿನಯ ಗಮನ ಸೆಳೆಯುತ್ತದೆ.

ಬೇಬಿಕ್ಕ
ಮಕ್ಕಳಿಗೆ ಏನಾದ್ರು ಆದ್ರೆ ಮೊದಲು ನೋವು ಆಗೋದು ತಾಯಿಗೆ. ಈ ಮಾತನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. Su From So ಸಿನಿಮಾದಲ್ಲಿ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡ ಬೇಬಿಕ್ಕ ಅವರನ್ನು ಮರೆಯಲು ಹೇಗೆ ಸಾಧ್ಯ? ಮಗ ಅಶೋಕ್ ವಿಚಿತ್ರವಾಗಿ ವರ್ತಿಸಲು ಆರಂಭಿಸಿದಾಗ ಹೆಚ್ಚು ತಾಯಿ ಬೇಬಿಕ್ಕ ಭಯಪಟ್ಟಿಕೊಂಡಿರುತ್ತಾರೆ. ಮಗನಿಗೆ ಏನಾಯ್ತು ಅನ್ನೋ ಆತಂಕ ಬೇಬಿಕ್ಕ ಮುಖದಲ್ಲಿ ಕಾಣಿಸಿಕೊಂಡಿರುತ್ತದೆ. ಈ ಲೇಖನದಲ್ಲಿ ಬೇಬಿಕ್ಕ ಪಾತ್ರದಲ್ಲಿ ನಟಿಸಿದ ರಂಗಭೂಮಿ ಕಲಾವಿದೆ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ರಂಗಭೂಮಿ ಕಲಾವಿದೆ ಪೂರ್ಣಿಮಾ ಸುರೇಶ್
Su From So ಸಿನಿಮಾ ಆರಂಭದಿಂದ ಕೊನೆಯವರೆಗೂ ಸ್ಕ್ರೀನ್‌ನಲ್ಲಿ ಬೇಬಿಕ್ಕ ಕಾಣಿಸಿಕೊಳ್ಳುತ್ತಾರೆ. ಚಿತ್ರದಲ್ಲಿ ಬೇಬಿಕ್ಕ ಸಂಭಾಷಣೆ ಕಡಿಮೆಯಿದ್ರೂ ತಮ್ಮ ನಟನೆಯಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಬೇಬಿಕ್ಕ ಪಾತ್ರದಲ್ಲಿ ನಟಿಸಿರೋದು ರಂಗಭೂಮಿ ಕಲಾವಿದೆ ಪೂರ್ಣಿಮಾ ಸುರೇಶ್. ಇವರು ಕಲಾವಿದೆ ಅಲ್ಲ, ಬರಹಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಕನ್ನಡ ಮತ್ತು ಕೊಂಕಣಿ ಭಾಷೆಯಲ್ಲಿ ಬರೆಯಬಲ್ಲ ಸಾಮರ್ಥ್ಯವನ್ನು ಹೊಂದಿರುವ ಪೂರ್ಣಿಮಾ ಸುರೇಶ್ ಅವರು ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.
ಬೇಬಿಕ್ಕ ಪಾತ್ರ
ಮಗನ ಚೇತರಿಕೆಗಾಗಿ ಚಡಪಡಿಸುವ ಬೇಬಿಕ್ಕ, ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಒಂದಿಷ್ಟು ಹೆಚ್ಚು ಕಡಿಮೆಯಾದ್ರೂ ಬೇಬಿಕ್ಕ ಪಾತ್ರ ಸಿನಿಮಾದಲ್ಲಿ ಸೋಲುತ್ತಿತ್ತು. ಮನೆಯಲ್ಲಿನ ಸಮಸ್ಯೆಗಳ ನಿವಾರಣೆಗಾಗಿ ಸ್ವಾಮೀಜಿ ಮುಂದೆ ಕುಳಿತು ಮನವಿ ಮಾಡಿಕೊಳ್ಳುವುದು. ಭಯದಿಂದಲೇ ಮಗನನ್ನು ಆರೈಕೆ ಮಾಡುವ ತಾಯಿಯಾಗಿ ಪೂರ್ಣಿಮಾ ಸುರೇಶ್ ನಟಿಸಿದ್ದಾರೆ. ರಂಗಭೂಮಿ ಕಲಾವಿದೆಯಾಗಿರುವ ಪೂರ್ಣಿಮಾ ಸುರೇಶ್, ಸಲೀಸಾಗಿ ಅಭಿನಯದ ಮೂಲಕ ಪಾತ್ರದಲ್ಲಿ ಜೀವಿಸಿದ್ದಾರೆ.
ನಟಿ ಪೂರ್ಣಿಮಾ ಸುರೇಶ್
ನಟಿ ಪೂರ್ಣಿಮಾ ಸುರೇಶ್ ಅನುವಾದಕಿಯೂ ಆಗಿದ್ದಾರೆ. ಕಾರ್ಯಕ್ರಮದ ನಿರೂಪಣೆಯನ್ನ ಪೂರ್ಣಿಮಾ ಸುರೇಶ್ ಮಾಡುತ್ತಾರೆ. ಉಡುಪಿ ಅವರಾದ ಪೂರ್ಣಿಮಾ ಸುರೇಶ್, ಹಲವು ಕವನಗಳನ್ನು ಸಹ ಬರೆದಿದ್ದು, ದಿನಪತ್ರಿಕೆಯಲ್ಲಿಯೂ ಪ್ರಕಟವಾಗಿವೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಪೂರ್ಣಿಮಾ ಸುರೇಶ್, ವೃತ್ತಿ ಬದುಕಿನ ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಅಂಕಣ ಬರಹ
ಕರ್ನಾಟಕ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ದತ್ತಿ ಕಾರ್ಯಕ್ರಮದಲ್ಲಿ ನೀಡುವ ಮಹಿಳಾ ಗ್ರಂಥ ಬಹುಮಾನಕ್ಕೆ ಪೂರ್ಣಿಮಾ ಸುರೇಶ್ ಪಾತ್ರವಾಗಿದ್ದರು ಪೂರ್ಣಿಮಾ ಸುರೇಶ್ ಅವರ 'ರಂಗ ರಂಗೋಲಿ' ಅಂಕಣ ಬರಹಗಳ ಸಂಕಲನಕ್ಕೆ ಈ ಪ್ರಶಸ್ತಿ ಲಭ್ಯವಾಗಿತ್ತು. ಮಧ್ಯಮಾವತಿ ಹೆಸರಿನ ಕವನ ಸಂಕಲನವನ್ನು ಬರೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

