- Home
- Entertainment
- Yash Movie ಕೆಜಿಎಫ್ ಬಗ್ಗೆ ವಿಡಿಯೋ ಮಾಡಿದ್ದ ಬಳಿಕ ಆಗಿದ್ದೇನು? ಧ್ರುವ್ ರಾಠಿ ಬಿಚ್ಚಿಟ್ಟ ಅಚ್ಚರಿಯ ಸತ್ಯ!
Yash Movie ಕೆಜಿಎಫ್ ಬಗ್ಗೆ ವಿಡಿಯೋ ಮಾಡಿದ್ದ ಬಳಿಕ ಆಗಿದ್ದೇನು? ಧ್ರುವ್ ರಾಠಿ ಬಿಚ್ಚಿಟ್ಟ ಅಚ್ಚರಿಯ ಸತ್ಯ!
ಪ್ರಸಿದ್ಧ ಕಂಟೆಂಟ್ ಕ್ರಿಯೇಟರ್ ಧ್ರುವ್ ರಾಠಿ, ಇತ್ತೀಚಿನ ಸಂದರ್ಶನವೊಂದರಲ್ಲಿ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಕುರಿತು ತಾವು ಮಾಡಿದ ವಿಡಿಯೋದ ಬಗ್ಗೆ ಮಾತನಾಡಿದ್ದಾರೆ. ದಕ್ಷಿಣ ಭಾರತದ ಜನರು ತಮ್ಮ ನೆಚ್ಚಿನ ನಟರು ಮತ್ತು ಸಿನಿಮಾಗಳ ಬಗ್ಗೆ ಹೆಚ್ಚು ಅಭಿಮಾನ ಹೊಂದಿರುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಧ್ರುವ್ ರಾಠಿ ಸಂದರ್ಶನ
ದೇಶದ ಪ್ರಮುಖ ಕಂಟೆಂಟ್ ಕ್ರಿಯೇಟರ್ ಆಗಿರುವ ಧ್ರುವ್ ರಾಠಿ ತಮ್ಮ ವಿಡಿಯೋಗಳ ಮೂಲಕ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಧ್ರುವ್ ರಾಠಿ ನೀಡಿರುವ ಸಂದರ್ಶನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಸಂದರ್ಶನದಲ್ಲಿ ಯಶ್ ನಟನೆ ಕೆಜಿಎಫ್ ಸಿನಿಮಾ ಬಗ್ಗೆ ಮಾಡಿರುವ ವಿಡಿಯೋ ಕುರಿತು ಮಾತನಾಡಿದ್ದಾರೆ.
ಯಶ್ ನಟನೆಯ ಕೆಜಿಎಫ್ ಸಿನಿಮಾ
ಕೆಜಿಎಫ್ ಸಿನಿಮಾದ ವಿಡಿಯೋ ಧ್ರುವ್ ರಾಠಿ ಅವರಿಗೆ ಅಚ್ಚರಿಯನ್ನುಂಟು ಮಾಡಿದೆ. ಕೆಕೆ ಕ್ರಿಯೇಟ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ದೇಶದ ರಾಜಕೀಯ, ಆಧ್ಯಾತ್ಮ, ಭೌಗೋಳಿಕ, ಸಿನಿಮಾ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ನನ್ನ ವಿಡಿಯೋಗಳು ದೇಶದ ಒಳಿತಿಗಾಗಿ ಎಂದು ಧ್ರುವ್ ಒತ್ತಿ ಹೇಳಿದ್ದಾರೆ. ಇತ್ತೀಚೆಗಷ್ಟೆ ಧ್ರುವ್ ರಾಠಿ, ಧುರಂದರ್ ಸಿನಿಮಾ ವಿಶ್ಲೇಷಣೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಕೆಜಿಎಫ್ ವಿಡಿಯೋ ಬಳಿಕ ಆಗಿದ್ದೇನು?
ಧುರಂದರ್ ಸಿನಿಮಾ ಕುರಿತು ಮಾತನಾಡುತ್ತಿರುವ ಸಂದರ್ಭದಲ್ಲಿ ಧ್ರುವ್ ರಾಠಿ ತಾವು ಕೆಜಿಎಫ್ ಸಿನಿಮಾ ಬಗ್ಗೆ ಮಾಡಿದ ವಿಡಿಯೋದ ಕುರಿತು ಮಾತನಾಡಿದರು. ಈ ವಿಡಿಯೋಗೆ ಅತ್ಯಧಿಕ ನೆಗೆಟಿವ್ ಕಮೆಂಟ್‌ಗಳು ಬಂದಿದ್ದವು. ನನ್ನ ಯಾವ ವಿಡಿಯೋಗೆ ಇಷ್ಟೊಂದು ಪ್ರತಿಕ್ರಿಯೆಗಳು ಬಂದಿರಲಿಲ್ಲ. ರಾಜಕೀಯ ವಿಷಯವನ್ನೊಳಗೊಂಡಿರುವ ವಿಡಿಯೋಗಳಿಗೂ ಈ ರೀತಿಯಾಗಿ ಬಂದಿರಲಿಲ್ಲ ಎಂದರು.
ಎಂಟರ್‌ಟೈನ್ಮೆಂಟ್ ವಿಡಿಯೋಗಳು ಹೆಚ್ಚು ಎಂಗೇಜ್
ಇದೇ ವೇಳೆ ಜನರು ತಮ್ಮ ಭಾಷೆಯ ಸಿನಿಮಾ ಮತ್ತು ನೆಚ್ಚಿನ ನಟನ ಬಗ್ಗೆ ತುಂಬಾ ಪೊಸೆಸ್ಸಿವ್ ಆಗಿರುತ್ತಾರೆ. ರಾಜಕೀಯಕ್ಕಿಂತ ಸಿನಿಮಾ ಕುರಿತ ವಿಡಿಯೋಗಳು ಹೆಚ್ಚು ಎಂಗೇಜ್ ಆಗುತ್ತವೆ. ಅದರಲ್ಲಿಯೂ ಭಾರತದ ದಕ್ಷಿಣ ಭಾಗದ ಜನರು ಸ್ಟಾರ್ ನಟರ ಬಗ್ಗೆ ಹೆಚ್ಚು ಅಭಿಮಾನ ಹೊಂದಿರುತ್ತಾರೆ ಎಂದು ಧ್ರುವ್ ರಾಠಿ ಹೇಳುತ್ತಾರೆ.
ಇದನ್ನೂ ಓದಿ: 12 ವರ್ಷ ಚಿಕ್ಕವನಾದ ಸಹೋದ್ಯೋಗಿಯನ್ನು ಮದ್ವೆಯಾಗಲು ಆತನ ಹೆಂಡ್ತಿಗೆ 1.5 ಕೋಟಿ ಕೊಟ್ಟ ಮಹಿಳೆ
ಕೆಜಿಎಫ್ ಸಿನಿಮಾ ಬಗ್ಗೆ ಹೇಳಿದ್ದೇನು?
ಪತ್ನಿ ಜೊತೆ ಕೆಜಿಎಫ್ ಸಿನಿಮಾ ಟೀಸರ್ ನೋಡುತ್ತಾ, ಚಿತ್ರದ ಒಂದೊಂದು ಸೀನ್ ನೋಡುತ್ತಾ ನಕ್ಕಿದ್ರು. ಗನ್ ಸೀನ್ ನೋಡಿ ಫಿಸಿಕ್ಸ್‌ಗೆ RIP ಎಂದು ಹೇಳಿದ್ದರು. ಹಾಗೆಯೇ ಗನ್‌ನಿಂದ ಸಿಗರೇಟ್ ಹಚ್ಚಿಕೊಳ್ಳೋದರ ಬಗ್ಗೆಯೂ ಹೇಳಿದ್ದರು. ನಂತರ ಸಿನಿಮಾದ ಕ್ಯಾಮೆರಾ, ಮ್ಯೂಸಿಕ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು.
ಇದನ್ನೂ ಓದಿ: Pakistani Cricketers: ಬ್ರೈನ್ ಆ್ಯಂಡ್ ಬ್ಯೂಟಿಗೆ ಉದಾಹರಣೆ ಈ ಪಾಕ್ ಕ್ರಿಕೆಟಿಗರ ಪತ್ನಿಯರು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

