- Home
- Life
- Fashion
- ದುಬಾರಿ ಸ್ಕಾರ್ಫ್ ಹಾಕಿ ವಿದೇಶದಲ್ಲಿ ಸುತ್ತಾಡಿದ ವಿಜಯಲಕ್ಷ್ಮೀ ದರ್ಶನ್! ಆ ದುಡ್ಡಲ್ಲಿ ಮೊಬೈಲ್ ಬರತ್ತೆ!
ದುಬಾರಿ ಸ್ಕಾರ್ಫ್ ಹಾಕಿ ವಿದೇಶದಲ್ಲಿ ಸುತ್ತಾಡಿದ ವಿಜಯಲಕ್ಷ್ಮೀ ದರ್ಶನ್! ಆ ದುಡ್ಡಲ್ಲಿ ಮೊಬೈಲ್ ಬರತ್ತೆ!
ನಟ ದರ್ಶನ್ ತೂಗುದೀಪ ಅವರ ಪತ್ನಿ ವಿಜಯಲಕ್ಷ್ಮೀ ಅವರು ಈಗ ವಿದೇಶದಲ್ಲಿ ಸುತ್ತಾಡುತ್ತಿದ್ದಾರೆ. ಅಲ್ಲಿ ಸಮಯ ಕಳೆದ ಅವರು ಕೆಲ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಟ ದರ್ಶನ್ ತೂಗುದೀಪ ಅವರು ಸ್ಕಾರ್ಫ್ ಧರಿಸಿ ಕಂಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ದುಬಾರಿ ವಾಚ್ ಧರಿಸಿದ್ದು ಯಾವ ಹೀರೋಯಿನ್‌ಗೂ ಕಮ್ಮಿ ಇಲ್ಲ ಎನ್ನುವಂತೆ ರೆಡಿ ಆಗಿದ್ದಾರೆ.
ವಿಜಯಲಕ್ಷ್ಮೀ ಹಾಗೂ ದರ್ಶನ್ ಅವರ ಒಡೆತನದಲ್ಲಿ ಮೈಸೂರಿನಲ್ಲಿ ಫಾರ್ಮ್‌ಹೌಸ್ ಇದೆ. ಅಲ್ಲಿ ಕುದುರೆಗಳನ್ನು ಕೂಡ ಸಾಕಲಾಗುತ್ತಿದೆ. ಇತ್ತೀಚೆಗೆ ಅವರು ಕುದುರೆಗಳ ಜೊತೆ ಸಮಯ ಕಳೆಯುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ದರ್ಶನ್ ಜೊತೆಗಿನ ಫೋಟೋಗಳನ್ನು ಕೂಡ ಶೇರ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಅವರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುತ್ತಾರೆ, ವಿವಿಧ ಕಾರ್ಯಕ್ರಮಗಳಿಗೆ ಭೇಟಿ ನೀಡುತ್ತಿರುತ್ತಾರೆ, ಅಷ್ಟೇ ಅಲ್ಲದೆ ರೆಸ್ಟೋರೆಂಟ್‌ಗಳಲ್ಲಿಯೂ ಕಾಣಿಸಿಕೊಳ್ಳುತ್ತಿರುತ್ತಾರೆ.
ವಿಜಯಲಕ್ಷ್ಮೀ ದರ್ಶನ್ ಅವರು ಸ್ಕಾರ್ಫ್ ಹಾಕಿದ್ದಾರೆ. ಈ ಸ್ಕಾರ್ಫ್‌ನ್ನು ಈ ಹಿಂದೆ ಖ್ಯಾತ ಬಾಲಿವುಡ್ ತಾರೆ ನೋರಾ ಫತೇಹಿ ಕೂಡ ಇದೇ ಥರದ ಸ್ಕಾರ್ಫ್ ಧರಿಸಿದ್ದರು.
ರಾಧಾ ರಮಣ ಧಾರಾವಾಹಿ ನಟಿ ಕಾವ್ಯಾ ಗೌಡ ಕೂಡ ಸ್ಕಾರ್ಫ್ ಧರಿಸಿದ್ದರು. ಅದರಂತೆ ಈಗ ವಿಜಯಲಕ್ಷ್ಮೀ ಕೂಡ ಸ್ಕಾರ್ಫ್ ಧರಿಸಿದ್ದಾರೆ. ಇದಕ್ಕೆ 4700 ರೂಪಾಯಿ ಎನ್ನಲಾಗಿದೆ. ಬ್ರ್ಯಾಂಡ್ ಸ್ಕಾರ್ಫ್ ಇದಾಗಿದೆ.
ವಿಜಯಲಕ್ಷ್ಮೀ ದರ್ಶನ್ ಅವರು ತಿಂಗಳುಗಳ ಹಿಂದೆ ರಾಜಸ್ಥಾನಕ್ಕೂ ಭೇಟಿ ನೀಡಿದ್ದರು. ಅಲ್ಲಿ ದರ್ಶನ್ ನಟನೆಯ ʼಡೆವಿಲ್ʼ ಸಿನಿಮಾದ ಶೂಟಿಂಗ್ ನಡೆದಿತ್ತು. ಹೀಗಾಗಿ ಪತಿ ಜೊತೆಗೆ ಅವರು ಕೂಡ ಭಾಗವಹಿಸಿದ್ದರು.
ವಿಜಯಲಕ್ಷ್ಮೀ ದರ್ಶನ್ ಅವರು ಇತ್ತೀಚೆಗೆ ಬಹಳ ಟ್ರೆಂಡ್ ಸೃಷ್ಟಿ ಮಾಡುವ ಸೀರೆ, ಆಭರಣ, ಲಂಗ ದಾವಣಿ, ವೆಸ್ಟರ್ನ್ ಡ್ರೆಸ್‌ಗಳನ್ನು ಧರಿಸುತ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

