ಈ 4 ರಾಶಿ ಜೊತೆ ಚಾಲೆಂಜ್ ಬೇಡವೇ ಬೇಡ… ಸೇಡು ತೀರಿಸಲು ಏನ್ ಬೇಕಾದ್ರು ಮಾಡ್ತಾರೆ
ನೀವು ಯಾರ ಜೊತೆ ಬೇಕಾದ್ರೂ ಗುದ್ದಾಡಿ, ಜಗಳ ಮಾಡಿ, ಆದ್ರೆ ಈ ನಾಲ್ಕು ರಾಶಿಯ ಜನರ ಜೊತೆ ಮಾತ್ರ ಯಾವುದೇ ಸಿಟ್ಟು ಇಟ್ಟುಕೊಳ್ಳಬೇಡಿ. ಯಾಕಂದ್ರೆ, ಇವ್ರಿಗೆ ಸಿಟ್ಟು ಬಂದ್ರೆ ಏನ್ ಬೇಕಾದ್ರೂ ಮಾಡ್ತಾರೆ.

ಜ್ಯೋತಿಷ್ಯದ ಪ್ರಕಾರ, ಬೇರೆ ರಾಶಿಯ (Zodiac sign) ಜನರ ವ್ಯಕ್ತಿತ್ವವು ಕೆಲವು ವಿಶೇಷ ಗುಣಗಳು ಮತ್ತು ದೋಷಗಳನ್ನು ಹೊಂದಿರುತ್ತದೆ. ಉದಾಹರಣೆಗೆ, ತುಲಾ ರಾಶಿಯ ಜನರನ್ನು ರಾಜತಾಂತ್ರಿಕರು ಎಂದು ಪರಿಗಣಿಸಲಾಗುತ್ತದೆ, ಕನ್ಯಾ ರಾಶಿಯವರನ್ನು ಪರಿಪೂರ್ಣತಾವಾದಿಗಳು ಎಂದು ಪರಿಗಣಿಸಲಾಗುತ್ತದೆ, ಹಾಗೆಯೇ ಸಿಂಹ ರಾಶಿಯವರನ್ನು ಧೈರ್ಯಶಾಲಿಗಳೆಂದು ಪರಿಗಣಿಸಲಾಗುತ್ತದೆ.
ಇನ್ನು ಕೆಲವು ರಾಶಿಗಳ ಜನರು ಸೇಡು ತೀರಿಸುವಲ್ಲಿ ನಿಸ್ಸೀಮರಾಗಿರುತ್ತಾರೆ. ಇಲ್ಲಿ ನಾವು ಅಂತಹ 4 ರಾಶಿಚಕ್ರ ಚಿಹ್ನೆಗಳ ಬಗ್ಗೆ ಹೇಳುತ್ತಿದ್ದೇವೆ, ನೀವು ಅವರೊಂದಿಗೆ ತಪ್ಪಿಯೂ ಜಗಳಕ್ಕೆ, ಚಾಲೆಂಜ್ ಮಾಡೋದಕ್ಕೆ ಮುಂದಾಗಬೇಡಿ. ಯಾಕಂದ್ರೆ ಅವರು ಸೇಡು ತೀರಿಸಲು ಎಂಥಹ ಕೆಟ್ಟ ಮಾರ್ಗವನ್ನು ಸಹ ಅನುಸರಿಸಬಲ್ಲರು.
ಮೇಷ ರಾಶಿ
ಮೇಷ ರಾಶಿಯವರು (Aries) ಬಲವಾದ ಇಚ್ಛಾಶಕ್ತಿ ಮತ್ತು ಸಕಾರಾತ್ಮಕ ಚಿಂತನೆಯನ್ನು ಹೊಂದಿರುವ ಜನರು. ಆದರೆ ಅವರು ತಮ್ಮ ಬಗ್ಗೆ ಬಹಳ ಸೂಕ್ಷ್ಮವಾಗಿರುತ್ತಾರೆ. ಆದ್ದರಿಂದ ಯಾರಾದರೂ ತಮ್ಮ ಬಗ್ಗೆ ಕೆಟ್ಟದ್ದನ್ನು ಹೇಳುತ್ತಿದ್ದಾರೆ ಅಥವಾ ಮಾಡುತ್ತಿದ್ದಾರೆ ಎಂಬ ಸಣ್ಣದೊಂದು ಕಲ್ಪನೆ ಅವರಲ್ಲಿದ್ದರೆ, ಆಗ ಇನ್ನೊಬ್ಬ ವ್ಯಕ್ತಿಯು ಅದರ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಈ ನಿರ್ಭೀತ ರಾಶಿಯ ಜನರು ತಮ್ಮನ್ನು ಕೆಟ್ಟದಾಗಿ ಬಿಂಬಿಸಲು ಪ್ರಯತ್ನಿಸಿದವರನ್ನು ಬಹಿರಂಗವಾಗಿ ಎದುರಿಸುತ್ತಾರೆ. ಅವರು ಕಠಿಣ ಪದಗಳನ್ನು ಬಳಸಲು ಅಥವಾ ಧ್ವನಿ ಎತ್ತಲು ಹಿಂಜರಿಯುವುದಿಲ್ಲ. ಈ ಸಮಯದಲ್ಲಿ, ಅವರು ತಮ್ಮ ಮೇಲಾದ ದೌರ್ಜನ್ಯವನ್ನು ಬಹಿರಂಗವಾಹಿಯೇ ಹೇಳುತ್ತಾರೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು (Cancer)ತುಂಬಾ ಸೂಕ್ಷ್ಮ ಮತ್ತು ಭಾವನಾತ್ಮಕ ಸ್ವಭಾವದವರು. ಅವರು ತಮ್ಮ ಸುತ್ತಮುತ್ತಲಿನ ಜನರ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಆದಾಗ್ಯೂ, ಯಾರಾದರೂ ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ ಅಥವಾ ಅವರಿಗೆ ಹತ್ತಿರವಿರುವ ಜನರಿಗೆ ಹಾನಿ ಮಾಡಿದರೆ, ಅವರು ಖಂಡಿತವಾಗಿಯೂ ಸೇಡು ತೀರಿಸಿಕೊಳ್ಳುತ್ತಾರೆ. ಈ ರಾಶಿಚಕ್ರದ ಜನರು ಸೇಡು ತೀರಿಸಿಕೊಳ್ಳಲು ದೃಢನಿಶ್ಚಯ ಮಾಡಿದ್ರೆ, ಅದರ ಪರಿಣಾಮ ಏನಾಗುತ್ತೆ ಅನ್ನೋದರ ಬಗ್ಗೆಯೂ ಅವರು ಯೋಚನೆ ಮಾಡೋದಿಲ್ಲ. ಈ ಸಮಯದಲ್ಲಿ, ಅವರಿಂದ ಕರುಣೆಯನ್ನು ನಿರೀಕ್ಷಿಸುವುದು ಮೂರ್ಖತನ.
ಸಿಂಹ ರಾಶಿ
ಸಿಂಹ ರಾಶಿಯವರನ್ನು (Leo) ಶಕ್ತಿಶಾಲಿಗಳು ಮತ್ತು ನಿರ್ಭೀತರು ಎನ್ನಲಾಗುತ್ತೆ. ಯಾರಾದರೂ ಅವರಿಗೆ ಕೆಟ್ಟದನ್ನು ಮಾಡಿದರೆ, ಅವರು ಪ್ರತಿಕ್ರಿಯಿಸಲು ಒಂದು ಕ್ಷಣವೂ ವಿಳಂಬ ಮಾಡುವುದಿಲ್ಲ. ಈ ಸಮಯದಲ್ಲಿ ಎಷ್ಟು ಜನರು ನಿಂತಿದ್ದಾರೆ ಅಥವಾ ಅವರ ಬಗ್ಗೆ ಅವರು ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಕೂಡ ಅವರು ಯೋಚಿಸೋದಿಲ್ಲ. ಯಾರಾದರೂ ಸಿಂಹ ರಾಶಿಯವರಿಗೆ ಕೆಡುಕು ಮಾಡಿದ್ದರೆ, ಅವರು ಖಂಡಿತವಾಗಿಯೂ ಸೇಡು ತೀರಿಸಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ನೀವು ಕ್ಷಮೆ ಕೇಳಿದರೂ ಅಥವಾ ಅಳುತ್ತಿದ್ದರೂ ಅವರು ಕರಗುವುದಿಲ್ಲ. ಅವರು ಸಂಪೂರ್ಣವಾಗಿ ಕಲ್ಲು ಹೃದಯಿಗಳಾಗುತ್ತಾರೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ (Scorpio) ಜನರು ತಮ್ಮ ಪ್ರಾಮಾಣಿಕತೆಗೆ ಮತ್ತು ತಮ್ಮ ಪ್ರೀತಿಪಾತ್ರರನ್ನು ಕೊನೆಯ ಉಸಿರಿನವರೆಗೂ ಬೆಂಬಲಿಸುವುದಕ್ಕೆ ಹೆಸರುವಾಸಿಯಾಗಿರುತ್ತಾರೆ. ಆದರೆ ಯಾರಾದರೂ ಅವರೊಂದಿಗೆ ಕೆಟ್ಟದ್ದನ್ನು ಮಾಡಿದ್ರೆ, ಅವರು ತಮ್ಮ ಕೊನೆಯ ಉಸಿರಿನವರೆಗೂ ಸೇಡು ತೀರಿಸಿಕೊಳ್ಳುತ್ತಾರೆ. ಕೆಟ್ಟದ್ದನ್ನು ಮಾಡಿದ ವ್ಯಕ್ತಿ ವೃಶ್ಚಿಕ ರಾಶಿಯವರಿಂದ ಎಷ್ಟೇ ದೂರ ಹೋದರೂ, ಅವರು ಯಾವಾಗಲೂ ಆ ವ್ಯಕ್ತಿಯ ಮೇಲೆ ಸೇಡು ತೀರಿಸಿಕೊಳ್ಳಲು ಒಂದು ಮಾರ್ಗವನ್ನು ಹುಡುಕುತ್ತಿರುತ್ತಾರೆ. ವಾದದ ಸಮಯದಲ್ಲಿಯೂ ಸಹ ವೃಶ್ಚಿಕ ರಾಶಿಯವರನ್ನು ಗೆಲ್ಲುವುದು ಅಸಾಧ್ಯ.

