ಕೊಲೆಸ್ಟ್ರಾಲ್ ಹೆಚ್ಚಾದ್ರೆ ದೇಹ ನೀಡೋ ಈ 6 ಸೂಚನೆಗಳನ್ನು ನೆಗ್ಲೆಕ್ಟ್ ಮಾಡ್ಬೇಡಿ!
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಕಾಣಿಸಿಕೊಳ್ತಿದೆ. ಕೊಲೆಸ್ಟ್ರಾಲ್ ಹೆಚ್ಚಾಗೋದು ಅನೇಕ ರೋಗಗಳಿಗೆ ಕಾರಣವಾಗುತ್ತೆ. ಅಧಿಕ ಕೊಲೆಸ್ಟ್ರಾಲ್ ಅಂದ್ರೆ ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿರೋದು.
16

Image Credit : istock
ಅಧಿಕ ಕೊಲೆಸ್ಟ್ರಾಲ್ ಆದ್ರೆ ಅಪಾಯ ಕಟ್ಟಿಟ್ಟ ಬುತ್ತಿ
ಇಂದು ಹೆಚ್ಚಿನವರಲ್ಲಿ ಅಧಿಕ ಕೊಲೆಸ್ಟ್ರಾಲ್ ಒಂದು ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಇದು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಕೋಶಗಳನ್ನು ನಿರ್ಮಿಸಲು ಮತ್ತು ಹಾರ್ಮೋನುಗಳನ್ನು ಉತ್ಪಾದಿಸಲು ಕೊಲೆಸ್ಟ್ರಾಲ್ ಅಗತ್ಯ. ಆದರೆ ಇದರ ಪ್ರಮಾಣ ಹೆಚ್ಚಾದರೆ ಅಪಾಯ.
26
Image Credit : our own
ಕೊಲೆಸ್ಟ್ರಾಲ್‌ನಲ್ಲಿ ಎರಡು ವಿಧ
ಕೊಲೆಸ್ಟ್ರಾಲ್‌ನಲ್ಲಿ ಎರಡು ವಿಧ. ಕಡಿಮೆ-ಸಾಂದ್ರತೆಯ ಲಿಪೊಪ್ರೋಟೀನ್ (LDL) ಅನ್ನು 'ಕೆಟ್ಟ' ಕೊಲೆಸ್ಟ್ರಾಲ್ ಎಂದೂ, ಅಧಿಕ-ಸಾಂದ್ರತೆಯ ಲಿಪೊಪ್ರೋಟೀನ್ (HDL) ಅನ್ನು 'ಒಳ್ಳೆಯ' ಕೊಲೆಸ್ಟ್ರಾಲ್ ಎಂದೂ ಕರೆಯುತ್ತಾರೆ. LDL ಹೆಚ್ಚಾದ್ರೆ, ಅಪಧಮನಿಗಳಲ್ಲಿ ಪ್ಲೇಕ್ ಸಂಗ್ರಹವಾಗಿ ಹೃದ್ರೋಗ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು.
36
Image Credit : Getty
ಅಧಿಕ ಕೊಲೆಸ್ಟ್ರಾಲ್‌ನ ಲಕ್ಷಣಗಳು
ಎದೆ ನೋವು, ಉಸಿರಾಟದ ತೊಂದರೆ, ಆಯಾಸ, ಚರ್ಮದ ಕೆಳಗೆ ಹಳದಿ ಬಣ್ಣದ ಕೊಬ್ಬಿನ ಗಡ್ಡೆಗಳು ಕಾಣಿಸಿಕೊಳ್ಳುವುದು ಅಧಿಕ ಕೊಲೆಸ್ಟ್ರಾಲ್‌ನ ಲಕ್ಷಣಗಳಾಗಿವೆ. ವಿಶೇಷವಾಗಿ ಮೊಣಕೈ, ಮೊಣಕಾಲು, ಕೀಲುಗಳಲ್ಲಿ ಈ ಗಡ್ಡೆಗಳು ಕಾಣಿಸಿಕೊಳ್ಳುತ್ತವೆ. ಕಣ್ಣುರೆಪ್ಪೆಗಳ ಮೇಲೆ ಸಣ್ಣ, ಹಳದಿ ಬಣ್ಣದ ಕಲೆಗಳು ಸಹ ಇದರ ಸೂಚನೆಯಾಗಿದೆ.
46
Image Credit : Getty
ಕೈ ಕಾಲುಗಳಲ್ಲಿ ಮರಗಟ್ಟುವಿಕೆಯೂ ಪ್ರಮುಖ ಲಕ್ಷಣಗಳಲ್ಲಿ ಒಂದು
ಎದೆಯಲ್ಲಿ ಬಿಗಿತ ಅಥವಾ ಒತ್ತಡದ ಅನುಭವವಾಗುವುದು ಇದರ ಒಂದು ಲಕ್ಷಣ. ವ್ಯಾಯಾಮ ಮಾಡುವಾಗ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು. ಕೈಕಾಲುಗಳಿಗೆ ರಕ್ತ ಸಂಚಾರ ಕಡಿಮೆಯಾಗುವುದರಿಂದ ಕೈ, ಕಾಲುಗಳಲ್ಲಿ ಮರಗಟ್ಟುವಿಕೆ ಅನುಭವವಾಗಬಹುದು.
56
Image Credit : Getty
ನಿರಂತರವಾಗಿ ಆಯಾಸವಾಗುತ್ತಿದ್ದರೇ ಆರೋಗ್ಯ ಪರೀಕ್ಷಿಸಿಕೊಳ್ಳಿ
ಅಂಗಾಂಗಗಳು ಮತ್ತು ಸ್ನಾಯುಗಳಿಗೆ ಕಡಿಮೆ ಆಮ್ಲಜನಕಯುಕ್ತ ರಕ್ತ ಸಿಗುವುದರಿಂದ ನಿರಂತರ ಆಯಾಸ ಅಥವಾ ದೌರ್ಬಲ್ಯ ಕಾಡುತ್ತದೆ. ಮೆದುಳಿಗೆ ರಕ್ತ ಸಂಚಾರದಲ್ಲಿ ಅಡಚಣೆಯಾದಾಗ ತಲೆಸುತ್ತುವಿಕೆ ಉಂಟಾಗಬಹುದು. ಇದನ್ನು ನಿರ್ಲಕ್ಷಿಸಬಾರದು.
ಕೊಲೆಸ್ಟ್ರಾಲ್ ಮಟ್ಟವನ್ನು ತಿಳಿಯಲು ನಿಯಮಿತ ತಪಾಸಣೆ ಒಂದೇ ದಾರಿ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಪ್ರಕಾರ, 20 ವರ್ಷ ಮೇಲ್ಪಟ್ಟ ಆರೋಗ್ಯವಂತರು ಪ್ರತಿ 4 ರಿಂದ 6 ವರ್ಷಗಳಿಗೊಮ್ಮೆ ಕೊಲೆಸ್ಟ್ರಾಲ್ ಪರೀಕ್ಷೆ ಮಾಡಿಸಬೇಕು. ಅಪಾಯಕಾರಿ ಅಂಶಗಳಿದ್ದರೆ, ಆಗಾಗ್ಗೆ ಪರೀಕ್ಷೆ ಮಾಡಿಸುವುದು ಉತ್ತಮ.
66
Image Credit : Getty
ಹೃದ್ರೋಗ ಸಮಸ್ಯೆ ಇರುವವರೂ ಕೊಲೆಸ್ಟ್ರಾಲ್ ಟೆಸ್ಟ್ ಮಾಡಿಸಿಕೊಳ್ಳಿ
ಹೃದ್ರೋಗ, ಮಧುಮೇಹ ಅಥವಾ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಪ್ರತಿ ವರ್ಷ ಅಥವಾ 1-2 ವರ್ಷಗಳಿಗೊಮ್ಮೆ ಪರೀಕ್ಷೆ ಮಾಡಿಸಬೇಕು. 9 ರಿಂದ 11 ವರ್ಷದೊಳಗಿನ ಮಕ್ಕಳು ಒಮ್ಮೆಯಾದರೂ ಕೊಲೆಸ್ಟ್ರಾಲ್ ಪರೀಕ್ಷೆ ಮಾಡಿಸುವುದು ಮುಖ್ಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos

