ನಾಲಿಗೆ ಕೆಳಗೆ ಏಳು ದಿನ ಚಿಟಕಿ ಉಪ್ಪಿಟ್ಟು ನೋಡಿ, ಜೀವತಿಂತಿದ್ದ ಆ ನೋವು ಮಂಗಮಾಯ
Health Tips : ಮೈಗ್ರೇನ್ ತಲೆನೋವು ಬಂದ್ರೆ ಸಹಿಸೋದು ಕಷ್ಟ. ನಾನಾ ಕಾರಣಗಳಿಂದ ಮೈಗ್ರೇನ್ ಕಾಡುತ್ತೆ. ಆದ್ರೆ ಅದಕ್ಕೆ ಪರಿಹಾರ ಬಹಳ ಕಡಿಮೆ. ನೀವು ಮೈಗ್ರೇನ್ ಸಮಸ್ಯೆಯಿಂದ ಬಳಲ್ತಿದ್ರೆ ಈ ಸರಳ ಟಿಪ್ಸ್ ಫಾಲೋ ಮಾಡಿ.

ಉಪ್ಪು
ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವ ಗಾದೆಯೇ ಇದೆ. ಪ್ರತಿಯೊಂದ ಮಸಾಲೆ ಆಹಾರಕ್ಕೆ ಉಪ್ಪು ಬೆರೆಸಿದ್ರೆ ರುಚಿ ಹೆಚ್ಚು. ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಸ್ಪೇಷಲ್ ಜಾಗ ಉಪ್ಪಿಗಿರುತ್ತದೆ. ಈ ಉಪ್ಪು ಬರೀ ನಿಮ್ಮ ಆಅಡುಗೆ ರುಚಿ ಡಬಲ್ ಮಾಡೋದು ಮಾತ್ರವಲ್ಲದೆ ಔಷಧಿಯಾಗಿ ಅನೇಕ ಸಮಸ್ಯೆಗೆ ಪರಿಹಾರ ನೀಡುತ್ತದೆ.
ತಲೆನೋವಿಗೆ ರಾಮಬಾಣ
ಮೈಗ್ರೇನ್ ವಿಪರೀತ ನೋವು ನೀಡುವ ಖಾಯಿಲೆ. ಮೈಗ್ರೇನ್ ಶುರು ಆದ್ರೆ ಆ ನೋವನ್ನು ತಡೆಯೋದು ಕಷ್ಟ. ಯಾವ ಯಾವದೋ ಸಮಯದಲ್ಲಿ ಬಂದು ಕಾಡುವ ಈ ಮೈಗ್ರೇನ್ ರೋಗ ಗುಣಪಡಿಸುವ ಶಕ್ತಿ ಉಪ್ಪಿನಲ್ಲಿದೆ. ನೀವು ಚಿಟಕಿ ಉಪ್ಪನ್ನು ಬಳಸಿ ಮೈಗ್ರೇನ್ ಗೆ ಗುಡ್ ಬೈ ಹೇಳ್ಬಹುದು.
ಬಳಸುವ ವಿಧಾನ
ಮೈಗ್ರೇನ್ ಬರ್ತಿದ್ದಂತೆ ನೀವು ಒಂದು ಚಿಟಕಿ ಉಪ್ಪನ್ನು ನಾಲಿಗೆಯ ಅಡಿಯಲ್ಲಿಡಿ. ಅದು ಕರಗಿದ ಮೇಲೆ ಒಂದು ಲೋಟ ನೀರನ್ನು ಕುಡಿಯಿರಿ. 5 ನಿಮಿಷಗಳಲ್ಲಿ ನಿಮ್ಮ ಮೈಗ್ರೇನ್ ಕಡಿಮೆ ಆಗುತ್ತದೆ. ಬರೀ ಮೈಗ್ರೇನ್ ಮಾತ್ರವಲ್ಲ ತಲೆನೋವು, ತಲೆ ಭಾರ, ಒಂದು ಕಣ್ಣಲ್ಲಿ ನೀರು ಬರುವಂತ ಸಮಸ್ಯೆಗೆ ಇದ್ರಿಂದ ಪರಿಹಾರ ಇದೆ. ಉಪ್ಪಿನಲ್ಲಿ ಸೋಡಿಯಂ ಇರುತ್ತದೆ. ಇದು ರಕ್ತದ ಎಲೆಕ್ಟ್ರೋಲೈಟ್ಗಳನ್ನು ಪುನಃಸ್ಥಾಪಿಸುತ್ತದೆ. ಮೆದುಳಿನ ನಾಳಗಳಲ್ಲಿ ಊತವನ್ನು ಕಡಿಮೆ ಮಾಡುತ್ತದೆ. ಇದು ಮೆದುಳಿಗೆ ನೋವು ಕಡಿಮೆಯಾಗುತ್ತಿದೆ ಮತ್ತು ನೋವು ಇನ್ನು ಮುಂದೆ ಬರೋದಿಲ್ಲ ಎನ್ನುವ ಸಂಕೇತ ನೀಡುತ್ತದೆ.
ಎಷ್ಟು ದಿನ ಮಾಡ್ಬೇಕು?
ಉತ್ತಮ ಪರಿಣಾಮ ಸಿಗ್ಬೇಕೆಂದ್ರೆ ನೀವು ಏಳು ದಿನ ನಾಲಿಗೆ ಕೆಳಗೆ ಚಿಟಕಿ ಉಪ್ಪನ್ನು ಇಟ್ಟು ನಂತ್ರ ನೀರು ಕುಡಿಯಬೇಕು. ನೀರನ್ನು ನಿಧಾನವಾಗಿ ಕುಡಿಯೋದ್ರಿಂದ ಹೆಚ್ಚು ಲಾಭವಿದೆ. ಉಪ್ಪು ಹಾಗೂ ನೀರು ದೇಹವನ್ನು ಹೈಡ್ರೇಟ್ ಮಾಡುತ್ತದೆ. ಬೆಳಿಗ್ಗೆ ಎದ್ದಾಗ ತಲೆಭಾರ ಎನ್ನುವವರು ಕೂಡ ಈ ಮನೆ ಮದ್ದಿನ ಲಾಭ ಪಡೆಯಬಹುದು.
ಹೆಚ್ಚೆಚ್ಚು ನೀರು
ಮೈಗ್ರೇನ್, ತಲೆ ನೋವಿಗೆ ಮುಖ್ಯ ಕಾರಣ ಡಿಹೈಡ್ರೇಟ್ ಕೂಡ ಒಂದು. ನೀವು ಆಗಾಗ ನೀರು ಕುಡೀತಾ ನಿಮ್ಮನ್ನು ಹೈಡ್ರೇಟ್ ಇಟ್ಟುಕೊಂಡಲ್ಲಿ ತಲೆನೋವು ಕಾಡೋದಿಲ್ಲ.
ಬೆಳ್ಳುಳ್ಳಿ ಸೇವನೆ
ವಿಪರೀತ ತಲೆನೋವು ಎನ್ನುವವರು ಬೆಳ್ಳುಳ್ಳಿ ಸೇವನೆ ಮಾಡ್ಬೇಕು. ಬೆಳ್ಳುಳ್ಳಿಯಲ್ಲಿ ಅಲಿಸಿನ್ ಇರುತ್ತದೆ. ಬೆಳ್ಳುಳ್ಳಿ ತಿನ್ನುವುದರಿಂದ ತಲೆನೋವು ಕಡಿಮೆಯಾಗುತ್ತದೆ ಮತ್ತು ಉರಿಯೂತ ಕಡಿಮೆಯಾಗುತ್ತದೆ. ಬೆಳ್ಳುಳ್ಳಿಯನ್ನು ನೀರಿನಲ್ಲಿ ಕುದಿಸಿ ಈ ನೀರನ್ನು ಕುಡಿಯುವುದು ಪ್ರಯೋಜನಕಾರಿ.
ಲವಂಗದ ಎಣ್ಣೆ
ತಲೆನೋವು ಕಡಿಮೆ ಮಾಡಲು ಲವಂಗದ ಎಣ್ಣೆ ಪ್ರಯೋಜನಕಾರಿ. ಒಂದು ಟೀಚಮಚ ತೆಂಗಿನ ಎಣ್ಣೆ ಮತ್ತು ಒಂದು ಟೀಚಮಚ ಉಪ್ಪಿಗೆ ಕೆಲವು ಹನಿ ಲವಂಗ ಎಣ್ಣೆಯನ್ನು ಸೇರಿಸಿ ಮಿಕ್ಸ್ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ಹಣೆಗೆ ಹಚ್ಚಿ ಮತ್ತು ತಲೆಗೆ ಶುದ್ಧವಾದ ಕರವಸ್ತ್ರವನ್ನು ಇಡಬೇಕು.
ಶುಂಠಿ ಮದ್ದು
ಉರಿಯೂತದ ಗುಣಗಳಿಂದ ಸಮೃದ್ಧವಾಗಿರುವ ಶುಂಠಿ ತಲೆನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತಲೆನೋವು ಕಡಿಮೆ ಮಾಡಲು, ಶುಂಠಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ನೀರಿನಲ್ಲಿ ಕುದಿಸಿ, ಈ ನೀರನ್ನು ಚಹಾದಂತೆ ಕುಡಿಯಿರಿ. ಶುಂಠಿ ಚಹಾ ಕುಡಿಯುವುದರಿಂದ ತಲೆನೋವು ನಿವಾರಣೆಯಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.
