MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ರಾತ್ರಿ ಬೆಡ್ ಬಳಿ ಯಾಕಿರ್ಬೇಕು ತುಪ್ಪ,ಕಲ್ಲುಸಕ್ಕರೆ ? ನಿದ್ರೆಗೆ ಸಹಾಯ ಮಾಡುತ್ತೆ ನೈಟ್ ಟ್ರೇ

ರಾತ್ರಿ ಬೆಡ್ ಬಳಿ ಯಾಕಿರ್ಬೇಕು ತುಪ್ಪ,ಕಲ್ಲುಸಕ್ಕರೆ ? ನಿದ್ರೆಗೆ ಸಹಾಯ ಮಾಡುತ್ತೆ ನೈಟ್ ಟ್ರೇ

ರಾತ್ರಿ ನಿದ್ರೆ ಬಂದಿಲ್ಲ ಅಂದ್ರೆ ದಿನಪೂರ್ತಿ ಹಾಳು. ಅನೇಕರಿಗೆ ನಿದ್ರಾಹೀನತೆ ಸಮಸ್ಯೆ ಬೆಂಬಿಡದೆ ಕಾಡುತ್ತೆ. ಮಧ್ಯರಾತ್ರಿ ಎಚ್ಚರವಾದ್ರೆ ಮತ್ತೆ ನಿದ್ರೆ ಬರೋದಿಲ್ಲ. ಅಂತವರಿಗೆ ಸೆಲೆಬ್ರಿಟಿ ಪೌಷ್ಟಿಕತಜ್ಞೆ ರುಜುತಾ ದಿವೇಕರ್ ನೈಟ್ ಟ್ರೇ ಟಿಪ್ಸ್ ನೀಡಿದ್ದಾರೆ. 

2 Min read
Author : Roopa Hegde
Published : Apr 20 2026, 02:21 PM IST
Share this Photo Gallery
  • FB
  • TW
  • Linkdin
  • Whatsapp
15
ನೈಟ್ ಟ್ರೇ
Image Credit : Asianet News

ನೈಟ್ ಟ್ರೇ

ನೈಟ್ ಟ್ರೇ ಅಂದ್ರೆ ರಾತ್ರಿ ಮಲಗುವ ಮುನ್ನ ನಿಮ್ಮ ಬೆಡ್ ಪಕ್ಕದಲ್ಲಿ ಇರಬೇಕಾದ ಟ್ರೇ. ಆ ಟ್ರೇನಲ್ಲಿ ಏನೇನು ಇರಬೇಕು, ಯಾವ ವಸ್ತು ನಿಮ್ಮ ನಿದ್ರೆ ಓಡಿಸಲು ಸಹಾಯ ಮಾಡುತ್ತೆ, ಯಾವ ತೊಂದ್ರೆಗೆ ಯಾವ ಪದಾರ್ಥದಲ್ಲಿ ಪರಿಹಾರ ಇದೆ ಎಂಬುದನ್ನು ಸೆಲೆಬ್ರಿಟಿ ಪೌಷ್ಟಿಕತಜ್ಞೆ ರುಜುತಾ ದಿವೇಕರ್ ಹೇಳಿದ್ದಾರೆ. ನಿಮಗೂ ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ಲ, ಒಮ್ಮೆ ಎಚ್ಚರವಾದ್ರೆ ಮತ್ತೆ ನಿದ್ರೆ ಮಾಡೋದು ಕಷ್ಟ ಎನ್ನುವವರು ರುಜುತಾ ದಿವೇಕರ್ ಟಿಪ್ಸ್ ಟ್ರೈ ಮಾಡಿ.

25
ನೀರಿನ ಜಗ್
Image Credit : Asianet News

ನೀರಿನ ಜಗ್

ರುಜುತಾ ದಿವೇಕರ್ ಪ್ರಕಾರ, ರಾತ್ರಿ ನೀವು ಟ್ರೇನಲ್ಲಿ ನೀರಿನ ಜಗ್ ಅಗತ್ಯವಾಗಿ ಇಡಿ. ರಾತ್ರಿಯಿಡೀ ನಿರ್ಜಲೀಕರಣವನ್ನು ತಡೆಗಟ್ಟಲು ನೀಡು ನಿಮಗೆ ಸಹಾಯ ಮಾಡುತ್ತದೆ. ಕೆಲವೊಮ್ಮೆ ನೀವು ಒಂದು ಸಿಪ್ ನೀರು ಕುಡಿದ್ರೆ ಸಾಕು, ಸತಾಯಿಸ್ತಿದ್ದ ನಿದ್ರೆ ಹಾಗೆ ಬಂದ್ಬಿಡುತ್ತೆ. ಅನೇಕರಿಗೆ ಹೊಟ್ಟೆ ನೋವಿನಿಂದ ನಿದ್ರೆ ಬರೋದಿಲ್ಲ. ಇದಕ್ಕೆ ಡಿಹೈಡ್ರೇಷನ್ ಕೂಡ ಕಾರಣವಾಗಿರಬಹುದು. ಇದನ್ನು ತಡೆಯಲು ನೀವು ರಾತ್ರಿ ಒಂದು ಸಿಪ್, ದಿನವಿಡಿ ನೀರು ಕುಡಿಯೋದು ಅಗತ್ಯ.

Related Articles

Related image1
ದಟ್ಟವಾದ ಕೂದಲು ಬೇಕೇ? ಹಾಗಾದ್ರೆ ಅಗಸೆ ಬೀಜ ಬಳಸಿ ನೋಡಿ.. ನೀವೇ ಶಾಕ್ ಆಗ್ತೀರಾ!
Related image2
Toothbrush Hygiene: ಟೂತ್‌ಬ್ರಷ್ ಯಾವಾಗ ಬದಲಿಸಬೇಕು? ಈ ತಪ್ಪು ಮಾಡಿದ್ರೆ ಅಪಾಯ ಗ್ಯಾರಂಟಿ!
35
ನೈಟ್ ಟ್ರೇನಲ್ಲಿರಲಿ ತುಪ್ಪ
Image Credit : Asianet News

ನೈಟ್ ಟ್ರೇನಲ್ಲಿರಲಿ ತುಪ್ಪ

ಆಯುರ್ವೇದದಲ್ಲಿ ತುಪ್ಪಕ್ಕೆ ಮಹತ್ವದ ಸ್ಥಾನವಿದೆ. ಅದನ್ನು ಅನೇಕ ರೋಗಕ್ಕೆ ಔಷಧಿಯಾಗಿ ಬಳಸಲಾಗುತ್ತೆ. ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ಲ, ಮೂಗು ಕಟ್ಟುತ್ತಿದೆ ಅಂದ್ರೆ ನೀವು ತುಪ್ಪವನ್ನು ಬಳಸಬೇಕು. ರಾತ್ರಿ ಮಲಗುವ ಮುನ್ನ ತುಪ್ಪದ ಒಂದು ಹನಿಯನ್ನು ಪಾದಗಳಿಗೆ ಹಾಕಿ ಮಸಾಜ್ ಮಾಡಬೇಕು. ಮೂಗು ಮತ್ತು ಕಿವಿಗೆ ತುಪ್ಪದ ಮಸಾಜ್ ಕೂಡ ಮಾಡಬೇಕು. ಇದ್ರಿಂದ ರಾತ್ರಿ ಮೂಗು ಕಟ್ಟುವ ಸಮಸ್ಯೆ ಕಡಿಮೆ ಆಗಿ ಆರಾಮದಾಯಕ ನಿದ್ರೆ ಬರುತ್ತದೆ.

45
ಕಲ್ಲುಸಕ್ಕರೆ
Image Credit : Asianet News

ಕಲ್ಲುಸಕ್ಕರೆ

ರಾತ್ರಿ ನಿಮ್ಮ ಟ್ರೇನಲ್ಲಿ ಕಲ್ಲುಸಕ್ಕರೆಯನ್ನು ಅಗತ್ಯವಾಗಿಟ್ಟುಕೊಳ್ಳಿ. ನಿದ್ರಾಹೀನತೆ ಮತ್ತು ಗಂಟಲು ನೋವಿಗೆ ಈ ಸಾಂಪ್ರದಾಯಿಕ ಪರಿಹಾರವಾಗಿದೆ. ನಿದ್ರಿಸಲು ತೊಂದರೆಯಾದಾಗ, ಬಾಯಿಯ ಒಂದು ಬದಿಯಲ್ಲಿ ಕಲ್ಲು ಸಕ್ಕರೆಯನ್ನು ಇಟ್ಟು ಮಲಗಬೇಕು. ಇದು ಶುಷ್ಕತೆ,ಉಸಿರುಗಟ್ಟುವಿಕೆ,ಒಣ ಕೆಮ್ಮಿನಿಂದ ನೀವು ಎಚ್ಚರಗೊಂಡಾಗ ತೊಂದ್ರೆಯನ್ನು ಕಡಿಮೆ ಮಾಡುತ್ತದೆ. ಗಂಟಲನ್ನು ತೇವಗೊಳಿಸಿ ನಿದ್ರೆಯನ್ನು ಸುಲಭಗೊಳಿಸುತ್ತದೆ.

55
ರಾಜಗಿರಿ ಲಡ್ಡು
Image Credit : Asianet News

ರಾಜಗಿರಿ ಲಡ್ಡು

ನೈಟ್ ಟ್ರೇನಲ್ಲಿ ನೀವು ರಾಜಗಿರಿ ಉಂಡೆಯನ್ನು ಇಡಬೇಕು ಅಂತ ರುಜುತಾ ದಿವೇಕರ್ ಸಲಹೆ ನೀಡ್ತಾರೆ. ರಾಜಗಿರಿ ಲಡ್ಡು ತಯಾರಿಸೋದು ಬಹಳ ಸುಲಭ. ಮಾರುಕಟ್ಟೆಯಲ್ಲಿ ನಿಮಗೆ ರಾಜಗಿರಿ ಸಿಗುತ್ತದೆ. ಅದನ್ನು ಮನೆಗೆ ತಂದು ನೀವು ಲಡ್ಡು ತಯಾರಿಸಬಹುದು. ಇದು ಅತ್ಯಂತ ಭಾರತದಲ್ಲಿ ಬೆಳೆಯುತ್ತಿರುವ ಅತ್ಯಂತ ಹಳೆಯ ಬೆಳೆಗಳಲ್ಲಿ ಒಂದು. ಇದ್ರಲ್ಲಿ ಪ್ರೊಟೀಸ್, ಫೈಬರ್ ಹಾಗೂ ಅನೇಕ ಜೀವಸತ್ವಗಳಿವೆ. ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಬೆಲ್ಲ ಬಳಸಿ ಇದ್ರ ಉಡ್ಡೆ ತಯಾರಿಸಬೇಕು. ರಾತ್ರಿ ನಿದ್ರೆ ಬಂದಿಲ್ಲ ಎನ್ನುವವರು ಈ ಉಂಡೆಯನ್ನು ತಿನ್ನಬಹುದು. ಇದು ಗಾಢ ನಿದ್ರೆಗೆ ಸಹಾಯ ಮಾಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಆರೋಗ್ಯ
ಜೀವನಶೈಲಿ

Latest Videos
Recommended Stories
Recommended image1
ಬೇಸಿಗೆಯಲ್ಲಿ ದಿನಕ್ಕೆ 2 ಬಾರಿ ಕಾಯಿಸಿದರೂ ಹಾಲು ಒಡೆದು ಹೋಗುತ್ತಾ? ಅದೊಂದು ಪೌಡರ್‌ ಹಾಕಿದ್ರೆ ಕೆಡೋದೆ ಇಲ್ಲ!
Recommended image2
ಫ್ರಿಜ್​ ಹೊರಗಿಟ್ಟರೂ 6-8 ತಿಂಗಳು ಕೆಡದ, ದಿಢೀರ್​ ದೋಸೆ- ಇಡ್ಲಿ ಹಿಟ್ಟು ರೆಡಿ ಹೀಗೆ: ಆಹಾರ ತಜ್ಞ ಮಾಹಿತಿ
Recommended image3
'ವಿಶ್ವದ ಅತಿದೊಡ್ಡ ಕೆಫೆ' ಬೆಂಗಳೂರು ರಾಮೇಶ್ವರಂ ಕೆಫೆ ಭವ್ಯ ಒಳಾಂಗಣ ನೋಟ ಇಲ್ಲಿದೆ: ಸಂಸ್ಕೃತಿ, ಕಲೆಯ ಕೇಂದ್ರ
Related Stories
Recommended image1
ದಟ್ಟವಾದ ಕೂದಲು ಬೇಕೇ? ಹಾಗಾದ್ರೆ ಅಗಸೆ ಬೀಜ ಬಳಸಿ ನೋಡಿ.. ನೀವೇ ಶಾಕ್ ಆಗ್ತೀರಾ!
Recommended image2
Toothbrush Hygiene: ಟೂತ್‌ಬ್ರಷ್ ಯಾವಾಗ ಬದಲಿಸಬೇಕು? ಈ ತಪ್ಪು ಮಾಡಿದ್ರೆ ಅಪಾಯ ಗ್ಯಾರಂಟಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved