ಲಿಯೋನಲ್ ಮೆಸ್ಸಿಗೆ RM 003-V2 ವಾಚ್ ಉಡುಗೊರೆ, ಇದ್ರ ಬೆಲೆಗೆ 2 ರೋಲ್ಸ್ ರಾಯ್ಸ್ ಕಾರು ಬರುತ್ತೆ
ಲಿಯೋನಲ್ ಮೆಸ್ಸಿಗೆ RM 003-V2 ವಾಚ್ ಉಡುಗೊರೆ, ಇದ್ರ ಬೆಲೆಗೆ 2 ರೋಲ್ಸ್ ರಾಯ್ಸ್ ಕಾರು ಬರುತ್ತೆ, ವಂತಾರಾಗೆ ಭೇಟಿ ನೀಡಿದ ಮೆಸ್ಸಿಗೆ ಈ ಅತೀ ದುಬಾರಿ ಉಡುಗೊರೆಯನ್ನು ನೀಡಲಾಗಿದೆ. ಈ ವಾಚ್ ಬೆಲೆ ಎಷ್ಟು?

ವಂತಾರ ಕೇಂದ್ರಕ್ಕೆ ಮೆಸ್ಸಿ ಭೇಟಿ
ಫುಟ್ಬಾಲ್ ದಿಗ್ಗಜ ಲಿಯೋನಲ್ ಮೆಸ್ಸಿ ಭಾರತ ಪ್ರವಾಸ ಭಾರಿ ಸದ್ದು ಮಾಡಿದೆ. ಒಂದೆಡೆ ಅವ್ಯವಸ್ಥೆ, ಮತ್ತೊಂದೆಡೆ ಜನಸಾಗರ, ಮೆಸ್ಸಿ ಜೊತೆಗೆ ರಾಜಕಾರಣಿಗಳು, ಸೆಲೆಬ್ರೆಟಿಗಳೇ ಫೋಟೋ ಕ್ಲಿಕ್ಕಿಸಲು ಮುಗಿಬಿದ್ದಿದ್ದರು. ಮೆಸ್ಸಿ ನೋಡಲು ಜನಸಾಗರವೇ ಹರಿದು ಬಂದಿತ್ತು. ಭಾರತ ಪ್ರವಾಸದಲ್ಲಿ ಲಿಯೋನಲ್ ಮೆಸ್ಸಿ ಗುಜರಾತ್‌ನ ಜಾಮ್‌ನಗರದಲ್ಲಿ ವಂತಾರಾ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ.
ವಂತಾರಾಗೆ ಭೇಟಿ ನೀಡಿದ ಮೆಸ್ಸಿಗೆ ವಾಚ್ ಉಡುಗೊರೆ
ವಂತಾರಾ, ಭಾರತದ ಅತ್ಯಂತ ಸುಸಜ್ಜಿತ ಪ್ರಾಣಿಗಳ ಆರೈಕೆ ಕೇಂದ್ರ. ಗಾಯಗೊಂಡ, ಅನಾರೋಗ್ಯದಲ್ಲಿರುವ ಕಾಡು ಪ್ರಾಣಿಗಳಿಗೆ ಆರೈಕೆ ಮಾಡಲಾಗುತ್ತದೆ. ಈ ಪ್ರಯತ್ಕೆ ವಿಶ್ವದೆಲ್ಲೆಡೆಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಕೇಂದ್ರಕ್ಕೆ ಲಿಯೋನಲ್ ಮೆಸ್ಸಿ ಭೇಟಿ ನೀಡಿದ್ದಾರೆ. ವಂತಾರಾಗೆ ಭೇಟಿ ನೀಡಿದ ಮೆಸ್ಸಿಗೆ ವಂತಾರ ಸಂಸ್ಥಾಪಕ ನಿರ್ದೇಶಕ ಅನಂತ್ ಅಂಬಾನಿ ಅತೀ ದುಬಾರಿ ರಿಚರ್ಡ್ ಮಿಲೆ ವಾಚ್ ಉಡುಗೊರೆಯಾಗಿ ನೀಡಿದ್ದಾರೆ.
ಮೆಸ್ಸಿಗೆ ಕೊಟ್ಟ ವಾಚ್ ಬೆಲೆ ಎಷ್ಟು?
ವಂತಾರಾಗೆ ಭೇಟಿ ನೀಡಿದ ಲಿಯೋನಲ್ ಮೆಸ್ಸಿಗೆ ಅನಂತ್ ಅಂಬಾನಿ ರಿಚರ್ಡ್ ಮಿಲೆ RM 003-V2 ಜಿಎಂಟಿ ಟರ್ಬಿಲಿಯನ್ ಏಷ್ಯನ್ ಎಡಿಶನ್ ವಾಚ್ ಉಡುಗೊರೆಯಾಗಿ ನೀಡಿದ್ದಾರೆ. ಇದು ಅತೀ ವಿರಳ ವಾಚ್. ಇದರ ಬೆಲೆ ಬರೋಬ್ಬರಿ 10.9 ಕೋಟಿ ರೂಪಾಯಿ. ಈ ಬೆಲೆಗೆ ರೋಲ್ಸ್ ರಾಯ್ಸ್ 2 ಕಾರು ಖರೀದಿಸಬಹುದು.
ಅತ್ಯಂತ ವಿಶೇಷ ವಾಚ್
ಲಿಯನಲ್ ಮೆಸ್ಸಿಗೆ ನೀಡಿದ ಈ ವಾಚ್ ಹಲವು ವಿಶೇಷತೆಗಳಿಂದ ಕೂಡಿದೆ. ನಿಮ್ಮಲ್ಲಿ ದುಡ್ಡಿದೆ ಎಂದರೂ ಈ ವಾಚ್ ಖರೀದಿಸಲು ಸಾಧ್ಯವಿಲ್ಲ. ಕಾರಣ ಚರ್ಡ್ ಮಿಲೆ RM 003-V2 ಜಿಎಂಟಿ ಟರ್ಬಿಲಿಯನ್ ಏಷ್ಯನ್ ಎಡಿಶನ್ ವಾಚ್ ಉತ್ಪಾದನೆಯಾಗಿರುವುದು ಕೇವಲ 12 ವಾಚ್. ಈ ಪೈಕಿ ಒಂದು ವಾಚನ್ನು ಅನಂತ್ ಅಂಬಾನಿ, ಮೆಸ್ಸಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಆರತಿ ಬೆಳಗೆ ಮೆಸ್ಸಿಗೆ ಸ್ವಾಗತಿಸಿದ ವಂತಾರಾ
ವಿಶೇಷ ಅಂದರೆ ಮೆಸ್ಸಿಗೆ ವಂತಾರಾಗೆ ಆಗಮಿಸುವಾಗ ಹಿಂದೂ ಸಂಪ್ರದಾಯದಂತೆ ಆರತಿ ಬೆಳಗಿ ಸ್ವಾಗತ ನೀಡಲಾಗಿದೆ.ಇದೇ ವೇಳೆ ಲಿಯೋನಲ್ ಮೆಸ್ಸಿಗೆ ದೇವರಿಗೆ ಶಿರಬಾಗಿ ನಮಸ್ಕರಿಸುತ್ತಿರುವ ಫೋಟೋಗಳು, ವಿಡಿಯೋಗಳು ಭಾರಿ ವೈರಲ್ ಆಗಿದೆ. ಕೆಲ ಹೊತ್ತು ಮೆಸ್ಸಿ ವಂತಾರಾದಲ್ಲಿ ಕಳೆದಿದ್ದಾರೆ. ಆರೈಕೆಯಲ್ಲಿರುವ, ಚೇತರಿಕೆ ಕಾಣುತ್ತಿರುವ ಪ್ರಾಣಿಗಳ ವೀಕ್ಷಿಸಿದ್ದಾರೆ.
ಆರತಿ ಬೆಳಗೆ ಮೆಸ್ಸಿಗೆ ಸ್ವಾಗತಿಸಿದ ವಂತಾರಾ
ಅನಂತ್ ಅಂಬಾನಿ ಬಳಿಯೂ ಇದೆ ರೇರ್ ರಿಚರ್ಡ್ ಮಿಲೆ ವಾಚ್
ಮೆಸ್ಸಿಗೆ ಅತೀ ವಿರಳ ವಾಚ್ ಉಡುಗೊರೆ ಕೊಟ್ಟ ಅನಂತ್ ಅಂಬಾನಿ, ಸ್ವತಃ ದುಬಾರಿ ರಿಟರ್ಡ್ ಮೆಲೆ ವಾಚ್ ಧರಿಸುತ್ತಾರೆ. ಅನಂತ್ ಅಂಬಾನಿ ಬಳಿ ರಿಚರ್ಡ್ ಮಿಲೆ RM 056 ಸಫೈರ್ ಟರ್ಬಿಲಿಯನ್ ವಾಚ್ ಇದೆ. ಇದರ ಬೆಲೆ 22 ಕೋಟಿ ರೂಪಾಯಿ. ವಿಶೇಷ ಅಂದರೆ ಜಗತ್ತಿನಲ್ಲಿ ಈ ವಾಚ್ ಕೇವಲ ಮೂರೇ ವ್ಯಕ್ತಿಗಳಲ್ಲಿದೆ.
ಅನಂತ್ ಅಂಬಾನಿ ಬಳಿಯೂ ಇದೆ ರೇರ್ ರಿಚರ್ಡ್ ಮಿಲೆ ವಾಚ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

