MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • 260 ಜನರನ್ನು ಬಲಿ ಪಡೆದ ಅಹಮದಾಬಾದ್ ಏರ್‌ ಇಂಡಿಯಾ ವಿಮಾನ ದುರಂತದ ಅಸಲಿ ಕಾರಣ ರಿವೀಲ್!

260 ಜನರನ್ನು ಬಲಿ ಪಡೆದ ಅಹಮದಾಬಾದ್ ಏರ್‌ ಇಂಡಿಯಾ ವಿಮಾನ ದುರಂತದ ಅಸಲಿ ಕಾರಣ ರಿವೀಲ್!

260 ಜನರನ್ನು ಬಲಿ ಪಡೆದ ಏರ್ ಇಂಡಿಯಾ ವಿಮಾನ ದುರಂತವು ತಾಂತ್ರಿಕ ದೋಷದಿಂದಲ್ಲ, ಬದಲಾಗಿ ಉದ್ದೇಶಪೂರ್ವಕ ಕೃತ್ಯವಾಗಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಇಟಾಲಿಯನ್ ಪತ್ರಿಕೆಯೊಂದು ಈ ವರದಿ ಮಾಡಿದ್ದು, ಪೈಲಟ್‌ಗಳ ನಡುವಿನ ಸಂಭಾಷಣೆಯು ಈ ಅನುಮಾನವನ್ನು ಮತ್ತಷ್ಟು ದಟ್ಟವಾಗಿಸಿದೆ.

2 Min read
Author : Mahmad Rafik
Published : Feb 12 2026, 11:53 AM IST
Share this Photo Gallery
  • FB
  • TW
  • Linkdin
  • Whatsapp
15
ಏರ್‌ ಇಂಡಿಯಾ ವಿಮಾನ ದುರಂತದ ಅಸಲಿ ಕಾರಣ?
Image Credit : Asianet News

ಏರ್‌ ಇಂಡಿಯಾ ವಿಮಾನ ದುರಂತದ ಅಸಲಿ ಕಾರಣ?

260 ಜನರನ್ನು ಬಲಿ ಪಡೆದ ಏರ್‌ ಇಂಡಿಯಾ ವಿಮಾನ ದುರಂತದ ಅಸಲಿ ಕಾರಣ ಹೊರಬಂದಿದೆ. ಏರ್ ಇಂಡಿಯಾ ವಿಮಾನ ಪತನ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಅಚ್ಚರಿ ವಿಷಯವನ್ನು ರಿವೀಲ್ ಮಾಡಿದ್ದಾರೆ. ಇಟಾಲಿಯನ್ ದಿನಪತ್ರಿಕೆ ಕೊರಿಯೆರ್ ಡೆಲ್ಲಾ ಸೆರಾ (Italian daily Corriere della Sera) ಈ ಸಂಬಂಧ ವರದಿ ಮಾಡಿದೆ. ಆದ್ರೆ ಈವರೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಅಧಿಕೃತ ವರದಿ ಬಿಡುಗಡೆ ಮಾಡಿಲ್ಲ.

25
 ಉದ್ದೇಶಪೂರ್ವಕ ಕೃತ್ಯ!
Image Credit : Asianet News

ಉದ್ದೇಶಪೂರ್ವಕ ಕೃತ್ಯ!

ಏರ್ ಇಂಡಿಯಾ ವಿಮಾನ ಪತನ ತಾಂತ್ರಿಕ ದೋಷದಿಂದ ಉಂಟಾಗಿಲ್ಲ. ಬದಲಾಗಿ ಇದೊಂದು ಉದ್ದೇಶಪೂರ್ವಕ ಕೃತ್ಯ (intentional act) ಎಂದು ತನಿಖಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ನವದೆಹಲಿ ಮತ್ತು ವಾಷಿಂಗ್ಟನ್ ನಡುವಿನ ಚರ್ಚೆಗಳನ್ನು ಉಲ್ಲೇಖಿಸಿ ಸೆರಾ ಈ ವರದಿಯನ್ನು ಪ್ರಕಟಿಸಿದೆ. ಭಾರತ ಸರ್ಕಾರದ ಅಧಿಕೃತ ಹೇಳಿಕೆ ಮುಂಚೆಯೇ ಅಂತಿಮ ನಿರ್ಧಾರಕ್ಕೆ ಬರೋದು ಕಷ್ಟ ಎಂದು ಇಂಡಿಯಾ ಟುಡೇ ವರದಿ ಪ್ರಕಟಿಸಿದೆ.

Related Articles

Related image1
ಏರ್ ಇಂಡಿಯಾ ದುರಂತ ಬೆನ್ನಲ್ಲೇ ಬೋಯಿಂಗ್‌ನ ಮತ್ತೊಂದು ವಿಮಾನ ಅಪಘಾತ
Related image2
ಅಹಮದಾಬಾದ್ ವಿಮಾನ ಪತನಕ್ಕೆ RAT ಕಾರಣ! ಅಮೆರಿಕ ನೌಕಾಪಡೆಯ ಮಾಜಿ ಪೈಲಟ್ ಬಿಚ್ಚಿಟ್ಟ ಮಾಹಿತಿ
35
ಅಂತಿಮ ವರದಿ ಸಿದ್ಧತೆ
Image Credit : Asianet News

ಅಂತಿಮ ವರದಿ ಸಿದ್ಧತೆ

ಜೂನ್-2025ರಲ್ಲಿ ಅಹಮದಾಬಾದ್ ಏರ್‌ಪೋರ್ಟ್‌ನಿಂದ ಟೇಕಾಫ್ ಆದ ಏರ್ ಇಂಡಿಯಾ ವಿಮಾನ ಕೆಲವೇ ಸೆಕೆಂಡ್‌ಗಳಲ್ಲಿ ಪತನಗೊಂಡಿತ್ತು. ಇಂಜಿನ್‌ಗೆ ಇಂಧನ ಪೂರೈಕೆ ಸ್ಥಗಿತಗೊಂಡಿದ್ದರಿಂದ ವಿಮಾನ ಪತನವಾಗಿತ್ತೇ ಹೊರತು ಯಾವುದೇ ತಾಂತ್ರಿಕ ಕಾರಣಗಳಲ್ಲ ಎಂದು ಭಾರತದ ತನಿಖಾಧಿಕಾರಿಗಳು ಅಭಿಪ್ರಾಯಪಟ್ಟಿದ್ದರು. ಭಾರತೀಯ ತನಿಖಾಧಿಕಾರಿಗಳು ತಮ್ಮ ಅಂತಿಮ ವರದಿಯನ್ನು ಸಿದ್ಧಪಡಿಸುತ್ತಿದ್ದಾರೆ. ಈ ತನಿಖೆಗೆ ಅಮೆರಿಕದ ತಜ್ಞರು ಸಹಾಯ ಮಾಡುತ್ತಿದ್ದಾರೆ.

45
ಬದುಕಿದ್ದು ಓರ್ವ ಪ್ರಯಾಣಿಕ
Image Credit : Asianet News

ಬದುಕಿದ್ದು ಓರ್ವ ಪ್ರಯಾಣಿಕ

ಏರ್ ಇಂಡಿಯಾ ನಿರ್ವಹಿಸುವ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನ ವೈದ್ಯಕೀಯ ವಿದ್ಯಾರ್ಥಿಗಳ ಹಾಸ್ಟೆಲ್‌ ಮೇಲೆ ಪತನಗೊಂಡಿತ್ತು. ಪ್ರಯಾಣಿಕರು ಮತ್ತು ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳು ಸೇರಿದಂತೆ 260 ಜನರು ಮೃತರಾಗಿದ್ದರು. ವಿಮಾನದಲ್ಲಿ ಓರ್ವ ಪ್ರಯಾಣಿಕ ಮಾತ್ರ ಪವಾಡ ಸದೃಡವಾಗಿ ಬದುಕುಳಿದಿದ್ದರು.

ಇದನ್ನೂ ಓದಿ: ನಾಪತ್ತೆಯಾಗಿದ್ದ 50 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪತನ; ಅವಶೇಷಗಳು ಪತ್ತೆ

55
ಪೈಲಟ್ ಸಂಭಾಷಣೆ
Image Credit : ANI

ಪೈಲಟ್ ಸಂಭಾಷಣೆ

ಈ ಪತನ ಸಂಬಂಧ ಜುಲೈ-2025ರಲ್ಲಿ ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಪ್ರಾಥಮಿಕ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಕಾಕ್‌ಪಿಟ್‌ನಲ್ಲಿ ಪೈಲಟ್‌ಗಳ ಸಂಭಾಷಣೆಯನ್ನು ಈ ವರದಿ ಒಳಗೊಂಡಿತ್ತು. ಓರ್ವ ಪೈಲಟ್, ಯಾಖೆ ಇಂಧನ ಸ್ಥಗಿತಗೊಳಿಸಿದ್ದೀರಿ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರ, ನಾನು ಹಾಗೆ ಮಾಡಿಲ್ಲ ಎಂದು ಬಂದಿತ್ತು.

ಇದನ್ನೂ ಓದಿ: Ahmedabad ಏರ್‌ ಇಂಡಿಯಾ ವಿಮಾನ ದುರಂತ: 260 ಸಾವು, ಮತ್ತೆ ದಟ್ಟವಾಯ್ತು ಅದೇ ಅನುಮಾನ!

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಏರ್ ಇಂಡಿಯಾ
ವಿಮಾನ ಅಪಘಾತ

Latest Videos
Recommended Stories
Recommended image1
Fakir Baba: ವಿಷದ ಲಡ್ಡು ತಿನ್ನಿಸಿ 6 ಜನರ ಸರಣಿ ಕೊಲೆ; ದೆಹಲಿಯಲ್ಲಿ 'ಫಕೀರ್ ಬಾಬಾ' ಅರೆಸ್ಟ್!
Recommended image2
ಬಂಗಾರ ಖರೀದಿಸುವವರಿಗೆ ಗುಡ್‌ ನ್ಯೂಸ್; ಒಂದೇ ದಿನ 1200 ರುಪಾಯಿ ಕುಸಿತ! ಬೆಂಗಳೂರಲ್ಲಿಂದು ಚಿನ್ನದ ಬೆಲೆ ಎಷ್ಟು?
Recommended image3
ಅಪ್ಪ-ಅಮ್ಮನ ಮಾತು ಕೇಳದೇ ಅಜಿತ್ ಜೊತೆ ಹೋದ ಸನಾ: ಚಿತೆಯಲ್ಲಿ ಸುಡುತ್ತಿದ್ದ ಮಗಳ ಶವ ತೆಗೆದ ಪೋಷಕರು!
Related Stories
Recommended image1
ಏರ್ ಇಂಡಿಯಾ ದುರಂತ ಬೆನ್ನಲ್ಲೇ ಬೋಯಿಂಗ್‌ನ ಮತ್ತೊಂದು ವಿಮಾನ ಅಪಘಾತ
Recommended image2
ಅಹಮದಾಬಾದ್ ವಿಮಾನ ಪತನಕ್ಕೆ RAT ಕಾರಣ! ಅಮೆರಿಕ ನೌಕಾಪಡೆಯ ಮಾಜಿ ಪೈಲಟ್ ಬಿಚ್ಚಿಟ್ಟ ಮಾಹಿತಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved