MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಮಗಳಿಗಾಗಿ ಆಟೋದಲ್ಲೇ 'ಅಮ್ಮನ ಮಡಿಲು' ಸೃಷ್ಟಿಸಿದ ಅಪ್ಪ; ಆಟೋ ಡ್ರೈವರ್ ನಗುಮುಖದ ಹಿಂದಿದೆ ಕಣ್ಣೀರ ಕಥೆ!

ಮಗಳಿಗಾಗಿ ಆಟೋದಲ್ಲೇ 'ಅಮ್ಮನ ಮಡಿಲು' ಸೃಷ್ಟಿಸಿದ ಅಪ್ಪ; ಆಟೋ ಡ್ರೈವರ್ ನಗುಮುಖದ ಹಿಂದಿದೆ ಕಣ್ಣೀರ ಕಥೆ!

ಆಟೋ ಚಾಲಕನೊಬ್ಬ, ತನ್ನ ಪುಟ್ಟ ಮಗಳನ್ನು ಆಟೋದಲ್ಲೇ ಮಲಗಿಸಿಕೊಂಡು ಆಟೋ ಓಡಿಸುತ್ತಿದ್ದಾನೆ. ಪ್ರಯಾಣಿಕ ಇದನ್ನು ವಿಡಿಯೋ ಮಾಡಿದ್ದು,  ಆಗ ಡ್ರೈವರ್‌ನ ಕಣ್ಣೀರಿನ ಕಥೆಯೊಂದು ತೆರೆದುಕೊಂಡಿದೆ. ಈ ಮನಕಲಕುವ ದೃಶ್ಯದ ವಿಡಿಯೋ ವೈರಲ್ ಆಗಿದ್ದು, ಅಂತರ್ಜಾಲದಲ್ಲಿ ಚರ್ಚೆಗೆ ಕಾರಣವಾಗಿದೆ.

2 Min read
Author : Sathish Kumar KH
Published : Feb 09 2026, 08:47 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : X

ಬೆಂಗಳೂರು: ಸಾಮಾಜಿಕ ಜಾಲತಾಣಗಳು ಕೇವಲ ಮನರಂಜನೆಯ ತಾಣವಲ್ಲ, ಅವು ಕೆಲವೊಮ್ಮೆ ಬದುಕಿನ ಕಠಿಣ ವಾಸ್ತವದ ದರ್ಶನವನ್ನೂ ಮಾಡಿಸುತ್ತವೆ. ತಂದೆಯಾದವನು ತನ್ನ ಕುಟುಂಬಕ್ಕಾಗಿ ಮತ್ತು ಮಕ್ಕಳ ಭವಿಷ್ಯಕ್ಕಾಗಿ ಎಂತಹ ತ್ಯಾಗಕ್ಕೂ ಸಿದ್ಧನಾಗುತ್ತಾನೆ ಎಂಬುದಕ್ಕೆ ಸದ್ಯ ವೈರಲ್ ಆಗುತ್ತಿರುವ ಈ ವಿಡಿಯೋ ಒಂದು ಜ್ವಲಂತ ಸಾಕ್ಷಿಯಾಗಿದೆ. ತನ್ನ ಪುಟ್ಟ ಮಗುವನ್ನು ಆಟೋದ ಹಿಂದಿನ ಸೀಟಿನ ಹಿಂಬದಿ ಇರುವ ಸಣ್ಣ ಜಾಗದಲ್ಲೇ ಮಲಗಿಸಿಕೊಂಡು, ಅನಿವಾರ್ಯತೆಯ ನಡುವೆಯೂ ಮುಗುಳ್ನಗುತ್ತಾ ಪ್ರಯಾಣಿಕರಿಗೆ ಸೇವೆ ನೀಡುತ್ತಿರುವ ಈ ಆಟೋ ಚಾಲಕನ ಕಥೆ ಈಗ ಇಡೀ ಅಂತರ್ಜಾಲವನ್ನು ಕಣ್ಣೀರಿಸುತ್ತಿದೆ.

27
Image Credit : X

ವೈರಲ್ ಆಗಿರುವ ವಿಡಿಯೋದಲ್ಲಿ, ಆಟೋ ಚಾಲಕನೊಬ್ಬ ತನ್ನ ಪುಟ್ಟ ಮಗಳನ್ನು ಆಟೋದ ಸಣ್ಣ ಜಾಗದಲ್ಲಿ ಮಲಗಿಸಿರುವುದು ಕಂಡುಬರುತ್ತದೆ. ಇದನ್ನು ಗಮನಿಸಿದ ಪ್ರಯಾಣಿಕರೊಬ್ಬರು ಆತಂಕದಿಂದ, 'ಆಟೋದಲ್ಲಿ ಮಗುವನ್ನು ಏಕೆ ಮಲಗಿಸಿದ್ದೀರಿ? ಯಾರಿದು ಮಗು?' ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಆ ಚಾಲಕ ನೀಡಿದ ಉತ್ತರ ಎಂತಹವರ ಕಣ್ಣಾಲಿಗಳನ್ನೂ ಒದ್ದೆ ಮಾಡುವಂತಿದೆ.

Related Articles

Related image1
ಪಾಪ ಹೆಣ್ಮಗಳು ಅಂತ ಅಪರಿಚಿತರಿಗೆ ಸಹಾಯ ಮಾಡುವುದಕ್ಕೆ ಹೋದ ಆಟೋ ಚಾಲಕನಿಗೆ ಏನಾಯ್ತು ನೋಡಿ..!
Related image2
ನಮ್ಮ ಯಾತ್ರಿ ಮೂಲಕ ಡ್ರೈವಿಂಗ್ ಕಲಿತು 45 ಸಾವಿರ ಸಂಪಾದನೆ, ಬೆಂಗಳೂರಿನ ಆಟೋ ಚಾಲಕಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್
37
Image Credit : X

ಇವಳು ನನ್ನ ಮಗಳು. ಇತ್ತೀಚೆಗಷ್ಟೇ ಈಕೆಯ ತಾಯಿ, ಅಂದರೆ ನನ್ನ ಹೆಂಡತಿ ತೀರಿಕೊಂಡರು. ಮಗಳನ್ನು ಮನೆಯಲ್ಲಿ ಒಬ್ಬಳೇ ಬಿಟ್ಟು ಆಟೋ ಓಡಿಸಲು ಬರಲು ನನಗೆ ಸಾಧ್ಯವಿಲ್ಲ. ಹಾಗಂತ ನಾನು ಮಗುವನ್ನು ನೋಡಿಕೊಂಡು ಕೆಲಸಕ್ಕೆ ಹೋಗದಿದ್ದರೆ ನಮ್ಮ ಜೀವನ ನಡೆಯುವುದು ಕಷ್ಟವಾಗುತ್ತದೆ. ನಾನು ಈಗ ಸಿಂಗಲ್ ಪೇರೆಂಟ್ ಆಗಿರುವ ಕಾರಣ, ಮಗಳನ್ನು ಆಟೋದಲ್ಲೇ ಮಲಗಿಸಿಕೊಂಡು ಕೆಲಸಕ್ಕೆ ಕರೆತರುತ್ತೇನೆ' ಎಂದು ತನ್ನ ಅಸಹಾಯಕತೆಯನ್ನು ಬಿಚ್ಚಿಟ್ಟಿದ್ದಾನೆ. ಆತನ ಮಾತನ್ನು ಕೇಳಿದ ಪ್ರಯಾಣಿಕ, ಮಗು ಎಚ್ಚರಗೊಂಡಾಗ ಜ್ಯೂಸ್ ಕೊಡಿಸಿ ಎಂದು ಹಣ ನೀಡಿ, 'ನಿಮಗೆ ಒಳ್ಳೆಯದಾಗಲಿ' ಎಂದು ಹಾರೈಸಿದ್ದಾರೆ.

47
Image Credit : X

ಈ ಮನಕಲಕುವ ವಿಡಿಯೋವನ್ನು 'Saffron Chargers' (@SaffronChargers) ಎಂಬ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ಗೆ, 'ಈ ಆಟೋ ಚಾಲಕನನ್ನು ಭೇಟಿ ಮಾಡಿ, ಈತ ಒಬ್ಬ ಸಿಂಗಲ್ ಪೇರೆಂಟ್. ಹೆಂಡತಿ ತೀರಿಹೋದ ನಂತರ ಈತ ತನ್ನ ಪುಟ್ಟ ಮಗಳನ್ನು ಎಲ್ಲೆಡೆ ಕರೆದೊಯ್ಯುತ್ತಾ, ಜೀವನೋಪಾಯಕ್ಕಾಗಿ ದುಡಿಯುತ್ತಾ ಆಕೆಯನ್ನು ಏಕಾಂಗಿಯಾಗಿ ಸಾಕುತ್ತಿದ್ದಾನೆ. ಪುರುಷನಾಗಿರುವುದು ಅಷ್ಟು ಸುಲಭವಲ್ಲ ' ಎಂಬ ಅಡಿಬರಹ ನೀಡಲಾಗಿದೆ.

57
Image Credit : X

ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ:

ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸಾವಿರಾರು ಜನರು ಕಮೆಂಟ್ ಮಾಡುವ ಮೂಲಕ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಆತನನ್ನು 'ಹೀರೋ' ಎಂದು ಕರೆದರೆ, ಇನ್ನು ಕೆಲವರು ಮಗುವಿನ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ:

ಫರ್ಮನ್ ಸೈಫಿ ಎನ್ನುವವರು 'ಈ ಕಥೆ ಹೃದಯಸ್ಪರ್ಶಿಯಾಗಿದೆ. ದುಡಿಯುತ್ತಾ ಮಗಳನ್ನು ಏಕಾಂಗಿಯಾಗಿ ಸಾಕುವುದು ಯಾರಿಗೂ ಸುಲಭವಲ್ಲ. ಇವರೇ ನಿಜವಾದ ಹೀರೋಗಳು' ಎಂದಿದ್ದಾರೆ.

Meet this auto driver, a single parent. His wife passed away and since then he carries his little daughter everywhere, earning a living and raising her alone.

Being a man is not easy 💔 pic.twitter.com/JKVlNmtlg0

— Saffron Chargers (@SaffronChargers) February 9, 2026

67
Image Credit : X

ಬುಲೆಟ್ ರೈಡರ್ ಎನ್ನುವವರು 'ಇದನ್ನು ತಪ್ಪಾಗಿ ಭಾವಿಸಬೇಡಿ, ಆದರೆ ಅಜ್ಜ-ಅಜ್ಜಿ, ಸಂಬಂಧಿಕರು ಅಥವಾ ಅಂಗನವಾಡಿಗಳಂತಹ ಬೇರೆ ಆಯ್ಕೆಗಳೂ ಇರುತ್ತವೆ. ಸಾಧ್ಯವಾದರೆ ಅವರು ಅಂತಹ ದಾರಿಗಳನ್ನು ಹುಡುಕಬೇಕು' ಎಂದು ಸಲಹೆ ನೀಡಿದ್ದಾರೆ.

ಮನುಶ್ರೀ ಎನ್ನುವವರು 'ಪುರುಷರು ಈಗಲಾದರೂ ಅರಿತುಕೊಳ್ಳಬೇಕು, ಆತ ತನ್ನ ಮಗುವನ್ನು ಮನೆಯಲ್ಲಿ ಸುರಕ್ಷಿತವಾಗಿಡಲು ಸಾಧ್ಯವಿಲ್ಲ ಏಕೆಂದರೆ ಅಲ್ಲಿಯೂ ಒಬ್ಬ ಪುರುಷನೇ ಇರುತ್ತಾನೆ. ಅಪಘಾತದ ಭಯಕ್ಕಿಂತ 'ಒಬ್ಬ ಪುರುಷನ' ಬಗ್ಗೆ ಇರುವ ಭಯವೇ ದೊಡ್ಡದು' ಎಂದು ಮಹಿಳಾ ಪರವಾಗಿ ಮಾತನಾಡಿದ್ದಾರೆ.

77
Image Credit : X

ಸ್ಯಾಮಿಮ್ಯಾಕ್ಸ್ ಎನ್ನುವವರು, 'ಒಬ್ಬ ತಂದೆಯಾಗಿ ಆತ ಒಳ್ಳೆಯವನೇ ಇರಬಹುದು. ಆದರೆ ಭಾರತೀಯ ರಸ್ತೆಗಳಲ್ಲಿ ಆ ಮಗು ಅಲ್ಲಿ ಮಲಗಿರುವುದು ಅಪಾಯಕಾರಿ. ದೇವರು ಅವರಿಗೆ ಪ್ರೀತಿ ಮತ್ತು ಸುಖವನ್ನು ನೀಡಲಿ' ಎಂದು ಹಾರೈಸಿದ್ದಾರೆ.

ದಕ್ಷ್ ಎನ್ನುವ ಮತ್ತೊಬ್ಬ ನೆಟ್ಟಿಗರು 'ಪುರುಷನಾಗಿರುವುದು ಸುಲಭವಲ್ಲ, ಕುಟುಂಬಕ್ಕಾಗಿ ಆತ ತನ್ನೆಲ್ಲವನ್ನೂ ತ್ಯಾಗ ಮಾಡುತ್ತಾನೆ. ಈ ಆಟೋ ಚಾಲಕನಿಗೆ ನನ್ನದೊಂದು ಸಲ್ಯೂಟ್' ಎಂದು ಕಾಮೆಂಟ್ ಮಾಡಿದ್ದಾರೆ.

ಒಟ್ಟಾರೆಯಾಗಿ, ಈ ಆಟೋ ಚಾಲಕನ ಹೋರಾಟ ಬದುಕಿನ ಹಾದಿಯಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಪ್ರೇರಣೆಯಂತಿದೆ. ಅಪ್ಪನ ಪ್ರೀತಿ ಮತ್ತು ಜವಾಬ್ದಾರಿಗೆ ಬೆಲೆ ಕಟ್ಟಲು ಅಸಾಧ್ಯ ಎಂಬುದು ಈ ವಿಡಿಯೋ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಭಾರತ ಸುದ್ದಿ
ಆಟೋ ಚಾಲಕ
ಆಟೋ ರಿಕ್ಷಾ
ವೈರಲ್ ವಿಡಿಯೋ

Latest Videos
Recommended Stories
Recommended image1
ಜಿಲ್ಲಾ ಪಂಚಾಯತ್‌ ಚುನಾವಣೆಯಲ್ಲಿ ಅಕ್ಕನನ್ನು ಬರೀ ಎರಡೇ ವೋಟ್‌ನಿಂದ ಸೋಲಿಸಿದ ತಂಗಿ!
Recommended image2
ಮನೆಯಲ್ಲೇ ಯಾರು ಕೇಳಲ್ಲ, ನೀವು ಯಾರು ಕೇಳೋಕೆ? ತಡವಾಗಿ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಶಿಕ್ಷಕಿ ಕೆನ್ನೆಗೆ ಬಾರಿಸಿದ ವಿದ್ಯಾರ್ಥಿ
Recommended image3
ಸ್ಮೃತಿ ಮಂಧನಾ WPL ಗೆಲುವನ್ನು ಹಿಂದೂ ಧರ್ಮಕ್ಕೆ ಜೋಡಿಸಿದ ಪೋಸ್ಟ್‌ಗೆ ಕಿಡಿಕಿಡಿಯಾದ ಪ್ರಕಾಶ್‌ ರಾಜ್‌!
Related Stories
Recommended image1
ಪಾಪ ಹೆಣ್ಮಗಳು ಅಂತ ಅಪರಿಚಿತರಿಗೆ ಸಹಾಯ ಮಾಡುವುದಕ್ಕೆ ಹೋದ ಆಟೋ ಚಾಲಕನಿಗೆ ಏನಾಯ್ತು ನೋಡಿ..!
Recommended image2
ನಮ್ಮ ಯಾತ್ರಿ ಮೂಲಕ ಡ್ರೈವಿಂಗ್ ಕಲಿತು 45 ಸಾವಿರ ಸಂಪಾದನೆ, ಬೆಂಗಳೂರಿನ ಆಟೋ ಚಾಲಕಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved